ನನ್ನೆಲ್ಲಾ ಬ್ಲಾಗ್ ಬಾಂಧವರಿಗೆ ನಿಮ್ಮ ಮಿತ್ರ, ಸಹೋದರನ ವಂದನೆಗಳು. ಕೆಲಸದ ಒತ್ತಡ ಹಾಗೂ ಕುಟುಂಬದ ಸದಸ್ಯರೊಬ್ಬರ ದುರ್ಮರಣದ ಕಾರಣದಿಂದ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಬ್ಲಾಗ್ ನಲ್ಲಿ ಏನು ಬರೆದಿಲ್ಲ ಎಂಬ ಬೇಸರಕ್ಕಿಂತ ನನ್ನ ಬ್ಲಾಗ್ ಮಿತ್ರರ ಉತ್ತಮ ಕವನ, ಕಥೆ, ಲೇಖನ ಗಳನ್ನು ಓದಲಿಕ್ಕೆ ಆಗಿಲ್ಲ ಎಂಬ ಬೇಸರವೇ ಜಾಸ್ತಿ ಇದೆ. ಎಲ್ಲರ ಬ್ಲಾಗ್ ಗೂ ಭೇಟಿಕೊಟ್ಟು ಎಲ್ಲಾ ಬರಹ ಗಳನ್ನು ನಿಧಾನವಾಗಿ ಓದುತಿದ್ದೇನೆ. ಎಲ್ಲದಕ್ಕೂ ಕಾಮೆಂಟ್ ಮಾಡಲಾಗದಿದ್ದರೂ ಎಲ್ಲಾ ಬರಹಗಳನ್ನು ಓದುವ ಪ್ರಯತ್ನ ಮಾಡುತಿದ್ದೇನೆ. ಹಾಗೆ ಈ ತಿಂಗಳಿಂದ ನನ್ನ ಬ್ಲಾಗ್ ನಲ್ಲೂ ಕೆಲವು ಬರಹಗಳು ಬರಲಿವೆ. ಅವುಗಳನ್ನು ಓದಿ ಮೊದಲಿನಂತೆ ನನ್ನನ್ನು ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುತ್ತೇನೆ.
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.