Friday, February 5, 2010

ನೀ ಮರಳಿ ಬಾ ............












ನನ್ನೇ ಕಾಯುತಿದ್ದ
ಆ ನಿನ್ನ ಕಂಗಳು
ಯಾರನ್ನೋ ಹುಡುಕುತಿವೆ
ಕಳೆದಿವೆ ಕೆಲ ತಿಂಗಳು

ನಾ ಚುಂಬಿಸಿದ್ದ
ಆ ನಿನ್ನ ತುಟಿಗಳು
ಮಧುವಿಲ್ಲದೆ ಒಣಗಿವೆ
ಹಳಸಿದಂತೆ ತಂಗಳು

ನಾ ಆಡುತಿದ್ದ
ಆ ನಿನ್ನ ಬೆರಳುಗಳು
ಯಾರನ್ನೋ ಹಿಡಿದಿವೆ
ಕಾಣದಂತೆ ಕೈಗಳು

ನೀ ಕೊಟ್ಟ ಆ ಮುತ್ತು
ಇನ್ನೂ ಹಸಿಯಾಗಿದೆ
ನೀನಾಡಿದ ಮಾತು
ಮಾತ್ರ ಹುಸಿಯಾಗಿದೆ

ನಿನ್ನನ್ನು ಮೆಚ್ಚಿಯೇ
ನಾ ಪ್ರೀತಿ ಮಾಡಿದೆ
ಏಕೆಂದು ತಿಳಿದಿಲ್ಲ
ನೀ ಮೋಸ ಮಾಡಿದೆ

ನನ್ನೆಲ್ಲಾ ಸುಖವನ್ನು
ನಿನ್ನಲ್ಲಿ ನೋಡಿದೆ
ನೀನೀಗ ಬೇರೆಯವರ
ಹಿಂದೆ ಹಿಂದೆ ಓಡಿದೆ

ಭಾವನೆಗಳು ಬತ್ತಿವೆ
ನನ್ನ ಬದುಕಿನಲ್ಲಿ
ಆದರೂ ಒಂದಾಸೆ
ಮನದ ಮೂಲೆಯಲ್ಲಿ

ಕೂಗಿ ಕರೆಯಲಾರೆ
ನನ್ನಲ್ಲಿ ದನಿಯಿಲ್ಲ
ನಾ ಕಾಯ ಬಲ್ಲೆನು
ಸಮಯದ ಮಿತಿಯಿಲ್ಲ

ಹೆಣ್ಣುಗಳು ಸಾಲಾಗಿ
ಕಾದಿಹರು ನನಗೆ
ಕಣ್ಣುಗಳು ಕಾಯುತಿವೆ
ನಿನ್ನ ಬರುವಿಕೆಗೆ ...

ಕಾದ ಹೆಂಚಿನ ಮೇಲೆ
ನೀರ ಹನಿ ಉಳಿಯೊಲ್ಲ
ನಿನ್ನನ್ನು ನಾ ಬಿಟ್ಟು
ಬಹುಕಾಲ ಬದುಕೊಲ್ಲ

16 comments:

Shamita Shetty said...

Sundara Sundara bahu sundara kavana....pada,praasagala arthapurna balake...I liked it very very much......

Pradeep Rao said...

Wow! padyadalli romantic thoughts & sad feelings na tumba chennagi mix maadidira Ashok... tumba chennagide!!

Unknown said...

ashok....superb ree....tumba chennagi varnisiddira,,,,tumba ista aytu,,,

Ashok.V.Shetty, Kodlady said...

@ Shami....Tumbaa Dhanyavadagalu....

@ Pradeep....Thank u...nimma abhimaana , priti hige munduvariyali.....

@ Satya.....Thanks a lot...keep encouraging...

Sneha Shetty said...

manassina bhavanegalannu kavanadalli tumbaa sundaravaagi vyakatha padisiddiri..prasa tumbaa chennagide...artha vyatyasavaagade prasa balasuva nimma kale adhutha...keep writing...waiting for your next one.....

Ashok.V.Shetty, Kodlady said...

Tumbaa dhanyavaadagalu Sneha.....

Unknown said...

ತುಂಬಾ ತುಂಬಾ ಚೆನ್ನಾಗಿದೆ ಸರ್, ನಿಮ್ಮ ಎಲ್ಲ ಕವನಗಳು ನಂಗೆ ತುಂಬಾ ಇಷ್ಟ...ನಿಮ್ಮ ಕವನಗಳನ್ನು ಓದ್ತಾ ಇದ್ರೆ ಮತ್ತೆ ಮತ್ತೆ ಓದಬೇಕು ಅನ್ನಿಸುತ್ತೆ ಸರ್, ಎಷ್ಟು ಓದಿದರು ಬೇಜಾರ್ ಆಗೋಲ್ಲ...ಎ ಕವನದಲ್ಲಿ ನಿಮ್ಮ ಪ್ರಾಸದೊಂದಿಗಿನ ಪದಗಳ ಬಳಕೆ ತುಂಬಾ ಸುಂದರವಾಗಿದೆ....ನಿಮ್ಮ ಮುಂದಿನ ಕವನಕ್ಕೆ ಕಾಯುತ್ತ ಕುಳಿತಿರುವ......

Ashok.V.Shetty, Kodlady said...

Thanks Shobha.....

ನಾ ನಿನ್ನ ಮರೆತರೆ.......... said...

tumba chenagide ashok nimma kavanagalu ondannondu meeriso hagiratte......:)

Ashok.V.Shetty, Kodlady said...

Thank u ....Thanks a lottttt....

poornima said...

atthee sarala padagalanna use maadikond artha poorna padya bardidderi....suppper......

Ashok.V.Shetty, Kodlady said...

Thanks Purnima...Thanks for your valuable comment....

ಪ್ರವೀಣ್ ಭಟ್ said...

ಹಾಯ್ ಅಶೋಕ್

ಸರಳ ಸುಂದರ ಸಮ್ಮೋಹಕ ಸಾಲುಗಳು....


ತುಂಬಾ ಅದ್ಭುತ ಮತ್ತು ಭಾವಪೂರ್ಣವಾಗಿದೆ


ಪ್ರವಿ

Ashok.V.Shetty, Kodlady said...

Thank u Pravi.....

Ammu said...

nange tumba ista ada kavana idu. tumba chennagide

Ashok.V.Shetty, Kodlady said...

Thank u Ammu avre.....