Monday, March 8, 2010

ಹೊಸಬೆಳಕು



ಜೀವನವೆಂಬ ಜಟಿಲ ಸರಪಳಿಯಲ್ಲಿ
ಬಂದಿಯಾಗಿ ವಿಮೋಚನೆಗೆಂದು
ಬಿಕ್ಕುತ್ತಿರುವೆ ನಾನು


ಬೆಟ್ಟದಂತಿರುವ ಕಷ್ಟಗಳೆಡೆಯಲ್ಲಿ
ಸಿಕ್ಕಿ, ಮೇಲೆ ಬರಲೆಂದು
ಹೆಣಗಾಡುತ್ತಿರುವೆ ನಾನು

ಸೂತ್ರವಿಲ್ಲದ ಬಾಳಿನಲ್ಲಿ
ದಿಕ್ಕೆಟ್ಟು, ಗಾಳಿಪಟದಂತೆ
ಅಲ್ಲಿಲ್ಲಿ ಸುತ್ತುತ್ತಿರುವೆ ನಾನು


ಕೈಗಳಲ್ಲಿ ಕಸುವಿಲ್ಲದೆ
ತನ್ನವರ ಆಸರೆಯಿಲ್ಲದೆ
ಮರಳಿನರಮನೆಯಲ್ಲಿ ವಾಸವಾಗಿರುವೆ ನಾನು


ಪ್ರೀತಿಗಾಗಿ ಮನವ ಸವೆಸಿ
ಬುದ್ದಿ ವಿಭ್ರಣೆ ಮಾಡಿಕೊಂಡು
ಕಣ್ಣೀರಲ್ಲಿ ತೊಳಲಾಡುತ್ತಿರುವೆ ನಾನು


ಸಂಸಾರದ ಭಾರದಲ್ಲಿ ಕುಸಿದು
ಕಷ್ಟಗಳ ಕಹಿ ಬೇವ ಕುಡಿದು
ಅಳು ನುಂಗಿ ನಗುತ್ತಿರುವೆ ನಾನು


ಮನಸದು ಕೆಟ್ಟು ಹೋಗಿ
ಕನಸುಗಳು ವಿಕಾರವಾಗಿ
ದುಸ್ವಪ್ನದ ನಿದ್ರೆಯಲ್ಲಿ ಸಾಯುತ್ತಿರುವೆ ನಾನು


ಹರಿವ ನೀರಿನಲ್ಲಿ, ಕೊಳೆತ ಕೆಸರಿನಲ್ಲಿ
ಚಡಪಡಿಸುವ ಮೀನಿನಂತೆ
ಕಷ್ಟಪಟ್ಟು ಜೀವಿಸುತ್ತಿರುವೆ ನಾನು


ಬದುಕಿನ ಜಂಜಾಟವ ದೂರ ಮಾಡಿ
ಮನಕೆ ತಂಪೆರೆಯುವ
ಹೊಸಬೆಳಕಿಗಾಗಿ ಕಾಯುತ್ತಿರುವೆ ನಾನು.......

19 comments:

Unknown said...

adbuthageleya,,manassina tolalaatavannu,,neevu vyaktapadisiruva reeti tumba chennagide,,,hosa belaku,,beganimmannu aavarisali,,,

Ashok.V.Shetty, Kodlady said...

Thank u Satya...Thanks a lot...

Ashok.V.Shetty, Kodlady said...

Thank u Satya...Thanks a lot...

Unknown said...

ಬಹಳ ಚೆನ್ನಾಗಿದೆ ಸರ್...ತುಂಬಾ ಅರ್ಥಪೂರ್ಣ ಸಾಲುಗಳು...ಎಲ್ಲಾ ಚರಣಗಳು ಅರ್ಥಗರ್ಭಿತವಾಗಿವೆ ..
ಮನಸದು ಕೆಟ್ಟು ಹೋಗಿ
ಕನಸುಗಳು ವಿಕಾರವಾಗಿ
ದುಸ್ವಪ್ನದ ನಿದ್ರೆಯಲ್ಲಿ ಸಾಯುತ್ತಿರುವೆ ನಾನು


ಹರಿವ ನೀರಿನಲ್ಲಿ, ಕೊಳೆತ ಕೆಸರಿನಲ್ಲಿ
ಚಡಪಡಿಸುವ ಮೀನಿನಂತೆ
ಕಷ್ಟಪಟ್ಟು ಜೀವಿಸುತ್ತಿರುವೆ ನಾನು

ಈ ಸಾಲುಗಳು ತುಂಬಾ ತುಂಬಾ ಇಷ್ಟ ಆಯಿತು ....

Ashok.V.Shetty, Kodlady said...

ತುಂಬಾ ಧನ್ಯವಾದಗಳು ಶೋಭಾ ...ನಿಮ್ಮ ಪ್ರೋತ್ಸಾಹ ಸದಾ ಹೀಗೆ ಮುಂದುವರಿಯಲಿ..

poornima shetty said...

neev bayasutthiruva aa hosabelaku nimma jeevanadalli aadastu bega barali yendu haarisuve....shetre

Ashok.V.Shetty, Kodlady said...

Thanks shetre.....thanks a lot..

Manjunath said...

yella salugalu super,,,,

ಸಂಸಾರದ ಭಾರದಲ್ಲಿ ಕುಸಿದು
ಕಷ್ಟಗಳ ಕಹಿ ಬೇವ ಕುಡಿದು
ಅಳು ನುಂಗಿ ನಗುತ್ತಿರುವೆ ನಾನು

idu fantastic

Ashok.V.Shetty, Kodlady said...

thank u Manju......

ಮನಸಿನಮನೆಯವನು said...
This comment has been removed by the author.
ಮನಸಿನಮನೆಯವನು said...

'ashokkodlady' ಅವ್ರೆ..,

ಈ ಬಾಳು ಬೇವು-ಬೆಲ್ಲ , ಎಲ್ಲಾನೂ ಸವಿಲೇಬೇಕು..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Ashok.V.Shetty, Kodlady said...

Thanks Gurudese yavre....nimma manssina manegu hogi bande....

Dr.D.T.Krishna Murthy. said...

ನಿಮ್ಮ ಕವನ ಚೆನ್ನಾಗಿಎ ಸರ್.ನಮ್ಮೆಲ್ಲರ ಮನಸ್ಸೂ ಹೀಗೇ!.ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ .ನಿಮಗೆ ನನ್ನ ಬ್ಲಾಗಿಗೂ ಸ್ವಾಗತ .

Badarinath Palavalli said...

Sir,

It is true that life is tough. But, If we see through simple lens we can feel it is beautiful.

Nice, writing...

Pl. visit my Kanada Poety Blog:
www.badari-poems.blogspot.com

- Badarinath Palavalli

ದೀಪಸ್ಮಿತಾ said...

ಸೊಗಸಾಗಿದೆ ಸರ್, ಕವನ. ಸಣ್ಣ ಸಣ್ಣ ಸಾಲುಗಳಲ್ಲಿ ಸಂಸಾರ, ಜೀವನನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ

Ashok.V.Shetty, Kodlady said...

@ Dr.Krishnamurti....Tumbaa kushi aitu sir...nivu nanna blog ge bandu nanna kavana mechhi baredri...swalpadina ee kade baroke aagilla a..adke late aagi reply maadta iddini...nimma blog ge khandita visit maadteeni....

Ashok.V.Shetty, Kodlady said...

@tentcinema...

Tumbaa dhanyavaadagalu sir nimma commentsge...khadita nimma blog kade hogta irteeni....

Ashok.V.Shetty, Kodlady said...

@ deepsmita...tumbaa Dhanyavadagalu....

sharan said...

ದೀಪ ಯಾವುದೇ ಇರಲಿ ಬೆಳಕು ತಾನೆ ಮುಖ್ಯ ,ಪ್ರೀತಿ ಯಾವುದೇ ಇರಲಿ ಮನಸು ತಾನೆ ಮುಖ್ಯ, ಜಾತಿ ಯಾವುದೇ ಇರಲಿ ಮಾನವೀಯತೆ ತಾನೆ ಮುಖ್ಯ,ನೀವು ಹೇಗಿದ್ದರೇನು "ಸ್ನೇಹ" ತಾನೆ ಮುಖ್ಯ.