Sunday, July 25, 2010

ಮಳೆ


ಬಾನದು ನೋಡ
ಕವಿದಿದೆ ಮೋಡ
ಕತ್ತಲು ಗಾಢ
ಹೊರ ಬರಬೇಡ



ಗುಡುಗಿದೆ ಮುಗಿಲು
ಬಡಿದಿದೆ ಸಿಡಿಲು
ಮಡುಗಿದೆ ಕಡಲು
ನಡುಗಿದೆ ಒಡಲು


ಬರ ಬರ ಮಳೆಯು
ಥರ ಥರ ಚಳಿಯು
ಚಿಗುರಿದೆ ಬೆಳೆಯು
ಕರಗಿದೆ ಇಳೆಯು


ರೌದ್ರವ ತಾಳಿ
ಬೀಸಿದೆ ಗಾಳಿ
ಹೆದರಿದೆ ಕಂಡು
ಪ್ರಾಣಿಯ ದಂಡು


ತಣಿದಿದೆ ಭುಗಿಲು
ಕುಣಿದಿದೆ ನವಿಲು
ನಿಂತಿದೆ ಮಳೆಯು
ತುಂಬಿದೆ ಹೊಳೆಯು

42 comments:

ಚುಕ್ಕಿಚಿತ್ತಾರ said...

channaagide..

makkalige nartisalu helikodalu tumbaa channaagide.

thanks..

Dr.D.T.Krishna Murthy. said...

ಕವನ ತುಂಬಾ ಸೊಗಸಾಗಿದೆ ಅಶೋಕ್.ಧನ್ಯವಾದಗಳು.

Ashok.V.Shetty, Kodlady said...

ಧನ್ಯವಾದಗಳು ಮೇಡಂ,

ಇದು ನನ್ನ ಮಿತ್ರರೊಬ್ಬರು 'ಮಳೆ' ಬಗ್ಗೆ ಬರೆದ ಕವನಕ್ಕೆ ಪ್ರತಿಕ್ರೀಯೆ ಅಂತ ಬರೆದದ್ದು...

Ashok.V.Shetty, Kodlady said...

ಮೂರ್ತಿ ಸರ್, ತುಂಬಾ ಧನ್ಯವಾದಗಳು...

© ಹರೀಶ್ said...

nice

ಪ್ರವೀಣ್ ಭಟ್ said...

Shettre tumba chenda untu...

idu neevu nanna kavanakke bareda reply allava...

aha erderade padadalli tumba chennagi bardiddera... makkala text book ge kalsi shettre.. hadoke tumba kushiyagutte

pravi

Ashok.V.Shetty, Kodlady said...

@ Harish..

Dhanyavaadagalu...

Ashok.V.Shetty, Kodlady said...

ಹಾಯ್ ಪ್ರವೀಣ್,

ಹೌದು, ನಿಮ್ಮದೇ ಕವನಕ್ಕೆ ಬರೆದ ಸಾಲುಗಳು...ಹೀಗೆ ನೋಡ್ತಾ ಇದ್ದೆ...ಎಲ್ಲೂ ಪೋಸ್ಟ್ ಮಾಡಿಲ್ಲ ಅಂತ ಈಗ ಪೋಸ್ಟ್ ಮಾಡಿದೆ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು said...

ashokkodlady ,

ಹೌದು ಮಕ್ಕಳ ಕವನದಂತೆ ಸೊಗಸಾಗಿದೆ..

ಸೀತಾರಾಮ. ಕೆ. / SITARAM.K said...

ಪ್ರಾಸಭದ್ದವಾದ ಸರಳ ಸುಂದರ ಕವನ. ಶಿಶುಸಾಹಿತ್ಯಕ್ಕೂ ಒಳ್ಳೆಯದಿದೆ.

ಮನದಾಳದಿಂದ............ said...

ಸರಳವಾದ, ಸುಂದರವಾದ ಕವನ. ಪ್ರಾಸಬದ್ಧವದ ಈ ಕವನಕ್ಕೆ ರಾಗ ಹಾಕಿ ಹಾಡಲು ಮನಸ್ಸಾಗ್ತಾ ಇದೆ.

ಪ್ರಗತಿ ಹೆಗಡೆ said...

ಅಶೋಕ್ ಅವರೇ..
ತುಂಬಾ ಚೆನ್ನಾಗಿದೆ.. ಅದರಲ್ಲೂ ಅಂತ್ಯ ಪ್ರಾಸ ಹೊಂದಿಸಿದ ರೀತಿ ಸಖತ್ ಆಗಿದೆ..

Ashok.V.Shetty, Kodlady said...

@ ಕತ್ತಲೆ ಮನೆ....

ಧನ್ಯವಾದಗಳು...ಹೀಗೆ ಬರ್ತಾ ಇರಿ,,,,

Ashok.V.Shetty, Kodlady said...

ಸೀತಾರಾಂ ಸರ್...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ಹೀಗೆ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ...

Ashok.V.Shetty, Kodlady said...

@ ಪ್ರವೀಣ್ ಸರ್...

ತುಂಬಾ ಧನ್ಯವಾದಗಳು...

Ashok.V.Shetty, Kodlady said...

ಪ್ರಗತಿ ಹೆಗಡೆ...

ಧನ್ಯವಾದಗಳು...ನನ್ನ ಬ್ಲಾಗಿಗೆ ಸ್ವಾಗತ...ಹೀಗೆ ಯಾವಾಗಲೂ ಬರ್ತಾ ಇರಿ....

mcs.shetty said...

nice one....

innocent poem...

Pradeep Rao said...

Welcome the rainy season with beauty of your rhyming lines..

Andavaada kavite sir..

ಮನಮುಕ್ತಾ said...

malegaalakke sariyaagi sundara kavana kottiddiri..chennaagide.

V.R.BHAT said...

chennaagide shettare!

ಜಲನಯನ said...

ಅಶೋಕ್ ಕಡಿಮೆ ಶಬ್ದಗಳಲ್ಲಿ ಮಳೆಯನ್ನು ಬಾಚಿ ಹಿಡಿಯುವ ಪ್ರಯತ್ನ ಚನಾಗಿವೆ ಸಾಲುಗಳು....

Ashok.V.Shetty, Kodlady said...

pratikriyisida nannella blog mitrarigu dhanyavaadagalu...samyada abavadindaagi vaiyaktikavaagi dhanyavadagalannu helalaaguttilla....ellrigu mattomme krutajnategalu....

Badarinath Palavalli said...

shettare

thanks for visiting my blog

shishu sahithya avasanavaguthidhe. adhu nimmindhale punaruthanavagali

nice poem

Ashok.V.Shetty, Kodlady said...

Badri Sir,

Nimma pratikriyege tumbu hridayada dhanyavadagalu..

Narayan Bhat said...

ಚೆನ್ನಾಗಿದೆ

Ashok.V.Shetty, Kodlady said...

Bhat Sir,

welcome to my blog....thank u sir...

Raghu said...

Kavana chennagide. Nimma profile odide..innu hattiravaadadde annisitu.Nandu ooru sasthana..belediddu Ajji mane amasebail-Kundapura.
heege bareyuttiri.
Nimmava,
Raaghu.

Ashok.V.Shetty, Kodlady said...

ಹಾಯ್ ರಾಘು,

ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರ್ತಾ ಇರಿ......ನಮ್ ಊರರೇ ಆಂಧ್ ಹೇಳಿ ಖುಷಿ ಐತ್ಹ್.

Shashi jois said...

ಶೆಟ್ರೆ ಲಾಕ್ ಮಾಡಿ ಬರ್ದಿದ್ದ್ರಿ .ಖುಷಿ ಆಯ್ತ್ ಮಳೆ ಬಗ್ಗೆ ಓದಿ ..ನೀವು ಊರಿನವರು ಅಂತ ಕೇಂಡ್ ಖುಷಿ ಆಯ್ತ್ ..

Ashok.V.Shetty, Kodlady said...

ಶಶಿ ಅಕ್ಕ ....

ನನ್ನ ಬ್ಲಾಗ್ ಗೆ ಸ್ವಾಗತ....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನಂಗೂ ಖುಷಿ ಐತ್ಹ್

Unknown said...

kavana chennagide

ಪ್ರವರ ಕೊಟ್ಟೂರು said...

padagala hondanike ashcharya mudisuttade....... keep writing.... good luck....

Ashok.V.Shetty, Kodlady said...

Sowmya...

dhanyavadagalu..

Ashok.V.Shetty, Kodlady said...

Pravara...

nannna blog ge swagata...nimma aatmeeya pratikriyege dhanyavadagalu...

kavinagaraj said...

ನಿಮ್ಮ ಬ್ಲಾಗ್ ಗೆ ಭೇಟಿ ನೀಡಿ ನಿಮ್ಮ ಕೆಲವು ಬರಹಗಳನ್ನು ನೋಡಿದೆ. ಮುದ ನೀಡುವ ಬರಹಗಳು. ಧನ್ಯವಾದಗಳು.

Ashok.V.Shetty, Kodlady said...

@ Kavi Nagaraj....

nanna blog ge bheti needi pratikriye neediddakke antanta Dhanyavadagalu...heege barta iri....

Ashok.V.Shetty, Kodlady said...

@Vasant....

Hridaya purvaka dhanyavadagalu...heege barta iri...

ತೇಜಸ್ವಿನಿ ಹೆಗಡೆ said...

ಚೆನ್ನಾಗಿವೆ ಕವನಗಳು. ಬರವಣಿಗೆಯನ್ನು ಹೀಗೇ ಮುಂದುವರಿಸಿ. ಅಂದಹಾಗೆ "ಖುಶಿ" ಎನ್ನುವ ಪದವನ್ನು "ಕುಶಿ" ಎಂದು ಬಳಸಿರುವಿರಿ..:)

Khushi is very cute :)

Ashok.V.Shetty, Kodlady said...

Tejaswini avre,

tumbaa dhanyavadagalu...avla hesare 'Kushi' , khushi alla....

KalavathiMadhusudan said...

ashok sir ravare, kavana praasabaddhavaagide,olleya shishugeete,abhinandanegalu.

Roopa said...

ಸರಳ ಸುಂದರ ಕವನ!

Chethan Kumar said...

thumbaa chennaagide ashok avre... ellaroo hELida haage saraLa haagoo sundara..