ಅಲ್ಲೊಂದು ಇಲ್ಲೊಂದು ಭಯೋತ್ಪಾದಕ ದಾಳಿ
ಕೊಲೆ ಸುಲಿಗೆ ಬಾಂಬ್-ಸ್ಫೋಟ ರಕ್ತದೋಕುಳಿ
ಕೆಲವೆಡೆ ಬರಗಾಲ ಕೆಲವೆಡೆ ನೆರೆ ಹಾವಳಿ
ಸಾಯುತಿಹರಿಲ್ಲಿ ಜನ ಹೊಸ ರೋಗಗಳಿಗೆ ನರಳಿ
ಮಳೆ ಬೀಳೋ ಪ್ರಮಾಣ ಆಗಿಹುದು ವಿರಳ
ನದಿ ನೀರಿಗಾಗಿ ಒಳಗೊಳಗೇ ಜಗಳ
ಇದೋ ಕರ್ನಾಟಕ, ಮಹಾರಾಷ್ಟ್ರ, ಕೇರಳ
ಗಡಿಗಾಗಿ ಆಗಿಹುದು ವಿವಾದವು ಬಹಳ
ಬಿಟ್ಟಿಲ್ಲ ಮಾನವರು ಅರಣ್ಯ ನಾಶದ ಚಾಳಿ
ವಿಷಪೂರಿತವಾಗಿದೆ ಉಸಿರಾಡೋ ಗಾಳಿ
ಆಹಾರ ಪದಾರ್ಥಗಳಿಗೆ ಕಲಬೆರೆಕೆಯ ದಾಳಿ
ಕಾರ್ಖಾನೆಗಳಿಂದ 'ಮಾಲಿನ್ಯ' ಎಂಬ ಬಳುವಳಿ
'ಬೆಲೆಯೇರಿಕೆ' ಎಂಬ ರಾಕ್ಷಸನ ಆರ್ಭಟ
ಸಾಗುತ್ತಲೇ ಇದೆ ಬಡಜನರ ಒದ್ದಾಟ
ನಿರುದ್ಯೋಗಿಗಳಿಗೆ ನೌಕರಿಗೆ ಪರದಾಟ
ಇನ್ನೊಂದು ಸಮಸ್ಯೆ ಜನಸಂಖ್ಯಾ ಸ್ಫೋಟ
ದೇಶದೆಲ್ಲೆಡೆಯಲ್ಲೂ ಹೊಗೆಯಾಡುತಿದೆ ಅಶಾಂತಿ
ಕಾಪಾಡಬೇಕಿದೆ ಸಮನ್ವಯ -ಶಾಂತಿ
ಜನನಾಯಕರುಗಳಿಗೆ ಕುರ್ಚಿಯದೆ ಭ್ರಾಂತಿ
ಯುವಶಕ್ತಿ ಯಿಂದಲೇ ಆಗಬೇಕಿದೆ ಕ್ರಾಂತಿ
ಎಚ್ಚೆತ್ತುಕೊಳ್ಳಲಿ ಸಾಮಾನ್ಯ ಜನತೆ
ಇರಬಹುದು ಇಲ್ಲಿ ತಿಳುವಳಿಕೆ ಕೊರತೆ
ಉಳಿಸಬೇಕಿದೆ ನಮ್ಮ ದೇಶದ ಘನತೆ
ಹಚ್ಚೋಣ ನಾವೆಲ್ಲಾ ಏಕತೆಯ ಹಣತೆ
ಬನ್ನಿರಿ ಎಲ್ಲರು ಇಲ್ಲಿ ಒಂದಾಗೋಣ
ದೇಶ ಕಟ್ಟಲು ನಾವು ಕೈ ಕೈ ಹಿಡಿಯೋಣ
ಜಾತಿ ಮತ ಮರೆತು ಒಂದಾಗಿ ಬೆರೆಯೋಣ
ತಾಯ್ನಾಡ ಏಳಿಗೆಗೆ ಒಟ್ಟಾಗಿ ಶ್ರಮಿಸೋಣ
30 comments:
ದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ತುಂಬ ಚೆನ್ನಾಗಿ ವರ್ಣಿಸಿದ್ದೀರಿ. ಆದರೆ ನಿಮ್ಮಲ್ಲಿ ಆಶಾವಾದವಿದೆ. ಎಲ್ಲರೂ ಒಟ್ಟಾಗಿ ಈ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ನೀವು ನೀಡಿದ ಕರೆ ಸಮಯೋಚಿತವಾಗಿದೆ.
ಪ್ರಸ್ತುತ ಸನ್ನಿವೇಶಕ್ಕೆ ಒಪ್ಪುವ ಕವಿತೆ ಚೆನ್ನಾಗಿದೆ.ನಿಮ್ಮ ಕಳಕಳಿ ಎಲ್ಲರಿಗೂ ಬಂದರೆ ಚೆನ್ನು ಆಲ್ವಾ !!!
ಟಿವಿ ಮುಂದೆ ಕೂತರು ಅದೇ ಪೇಪರ್ ನೋಡಿದರು ಅದೇ ಈಗ ನಿಮ್ಮ ಬ್ಲಾಗ್ ನಲ್ಲೂ ಓದಿದ್ದು ಅದೇ ಚನ್ನಾಗಿದೆ ಈಗಿನ ಸನ್ನಿವೇಶಗಳನ್ನೇ ಸ್ಪೂರ್ತಿ ಮಾಡಿಕೊಂಡು ಈ ಕವನ ಬರ್ದಿದಿರಾ ಶುಭವಾಗಲಿ
ಇದು ನೀವು ಲಾಸ್ಟ್ ಇಯರ್ ಬರೆದ ಕವನ ಅಲ್ವ? ಬ್ಲಾಗ್ ನಲ್ಲಿ ಈಗ ಹಾಕಿದ್ದೀರ?? ಪ್ರಸ್ತುತ ವಿದ್ಯಮಾನಗಳಿಗೆ ಸರಿಯಾಗಿ ಬರೆದಂತೆ ಇದೆ, ತುಂಬಾ ಚೆನ್ನಾಗಿದೆ..
ದೇಶದ ಸಮಸ್ಯೆಗಳನ್ನು ಅವುಗಳ ಪರಿಹಾರಕ್ಕೆ ಏಕತೆಯ ಸ೦ದೇಶವನ್ನು ಕವನದಲ್ಲಿ ಚೆನ್ನಾಗಿ ಮೂಡಿಸಿದ್ದೀರಿ.
ತುಂಬಾ ಚೆನ್ನಾಗಿ ಬರೆದಿದ್ದೀರ ಅಶೋಕ್ ಅವರೇ... ವಾಸ್ತವದ ಕನ್ನಡಿಯಂತಿದೆ...
ಪ್ರಸ್ತುತವನ್ನು ಪ್ರಾಸಬದ್ಧವಾಗಿ ನಿರೂಪಿಸುವ ಶೈಲಿ ಮನಮೋಹಕವಾಗಿದೆ ಅಶೋಕ್. ನಿಮ್ಮ ಪರಿಚಯವಾದದ್ದು ಸ೦ತೋಷ. ಸು೦ದರ ತಾಣವನ್ನು ಸ್ಥಾಪಿಸಿದ್ದೀರಿ.
ಶುಭಾಶಯಗಳು
ಅನ೦ತ್
ಬಿಡಿ ಸರ್..
ಕೇಳಿ ಕೇಳಿ ಸಾಕಾಗಿ ಹೋಗಿದೆ..
ಉತ್ತಮ ಕವನ..
ಬನ್ನಿ ನನ್ನ 'ಮನಸಿನಮನೆ'ಗೆ..
Tumba chennagide sir... Pratiyondu saalinallu deshada eegina sthithiya varnane tumba chennagi mudi bandide.. andavaada praasada saalugalu...
ಅಶೋಕ್ ಸರ್,
ನಮ್ಮ ದೇಶದ ಪರಿಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ..ಕೊನೆಯಲ್ಲಿನ ನಿಮ್ಮ ಆಶಾವಾದ ಇಷ್ಟವಾಯಿತು.
ಅಶೋಕ್,
ಈ ಎಲ್ಲಾ ಸಮಸ್ಯೆಗಳೂ ಪರಿಹಾರ ಕಾಣದಂತವುಗಳೇನೂ ಅಲ್ಲ. ಆದರೆ ನಮ್ಮೆಲ್ಲರಲ್ಲೂ ದೇಶಪ್ರೇಮ ಬರಬೇಕು ಅಷ್ಟೆ.
ನಿಮ್ಮ ಈ ಕಳಕಳಿ ನಮ್ಮೆಲ್ಲರಿಗೂ ಬರಲಿ.
ಅಶೋಕ್, ನಿಮ್ಮ ಕವನ ತುಂಬಾ ಚೆನ್ನಾಗಿದೆ. ದೇಶದ ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರ.
ಹೊಸ ಕವನ ಹಾಕಿದ್ದೇನೆ. ನನ್ನ ಬ್ಲಾಗ್ ಗೆ ಒಮ್ಮೆ ಬೇಟಿ ಕೊಡಿ :) http://idu-nannakavana.blogspot.com/
ಸು೦ದರವಾಗಿದೆ.. ನಿಮ್ಮ ಕವಿತೆ..ಅದರೊಳಗಿನ ಭಾವನೆ ಮತ್ತು ಕೊನೆಯಲ್ಲಿನ ನಿಮ್ಮ ಆಶಯ..
ವ೦ದನೆಗಳು.
prachalitha samasyegalige hidida kaigannadiyanthide...tumbaa chennagi varnisiddira,,keep writing,,,,
ನಮ್ಮ ಜನ ಯಾವಾಗ ಎಚ್ಚೆತ್ತುಕೊಳ್ಳುವರೋ? ಯಾರೋ ಸರಿಮಾಡುತ್ತಾರೆ ಎಂದು ಕಾಯುತ್ತ ಕೂರುವ ಕಾಲ ಮುಗಿದು ಹೋಯಿತು. ಜನಸಾಮಾನ್ಯರೇ ಯೋಚಿಸಬೇಕು
ನಮಸ್ತೆ,
ನಿಮ್ಮ ಈ ಕವನ ಮಾಡಿದೆ,
ನಿಜ ಭಾರತದ ಅನಾವರಣ,
ಒಗ್ಗೂಡಲಿ ಎಲ್ಲಾ ಯುವ ಮನ,
ಸಿದ್ದಿಸಲಿ ಸಾಧನೆಯ ಸಿರಿ,
ಬದುಕೋಣ ಎಲ್ಲಾ ನೆಮ್ಮದಿಯಾಗಿ /
- ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ....
ಇದೆ ಮೊದಲ ಬಾರಿ ನಿಮ್ಮ ಬ್ಲಾಗ್ ಭಾವಲೋಕಕ್ಕೆ ಬಂದೆ. ಮನಮುಟ್ಟುವ , ಅರಿವು ತಟ್ಟುವ ಕವಿತೆಗಳು. ಬಿಡುವಾದಾಗ ಒಮ್ಮೆ ನನ್ನ ಬ್ಲಾಗ್ ಲೋಕದಲ್ಲಿ ವಿಹರಿಸಿ.
ಪ್ರೀತಿಯಿಂದ ,
ಲಿಂಗೆಶ್ ಹುಣಸೂರು,
ಸಂಸ್ತಾಪಕರು, ಚುಕ್ಕಿ ಸಂಸ್ಥೆ(ರೀ ),
ಮೈಸೂರು ಜಿಲ್ಲೆ.
http://chukkisamsthe.blogspot.com
Hi Ashok..
Mattondu udda prasabaddavada kavana :) idakke neeve sai... Akasharashaha satya.. kavana roopadalli very nice
ಕಟು ವಾಸ್ತವವನ್ನು ಕವನಿಸಿದ ರೀತಿ ಚೆನ್ನಾಗಿದೆ.ಪ್ರತಿಯೊಬ್ಬರ ತೊಡಗಿಸುವಿಕೆಯಿ೦ದ ಸುದಾರಿಸಬಹುದೇನೋ..? ನಿಮ್ಮ ಬ್ಲಾಗ ಗೆ ಪ್ರಥಮ ಭೇಟಿ.ಇಷ್ಟವಾಯಿತು. ಅಭಿನ೦ದನೆಗಳು.
"ಕುಶಿ"ತುಂಬಾ ಮುದ್ದಾಗಿದೆ.ಇನ್ನು ನಿಮ್ಮ ಕವನದಲ್ಲಿ ಪ್ರಸ್ತುತ ಪರಿಸ್ತಿತಿಯನ್ನ ಸ್ಪುಟವಾಗಿ ತೆರೆದಿತ್ತಿದ್ದೀರ."ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ"ಕಾಯಬೇಕಷ್ಟೇ, ಧನ್ಯವಾದಗಳು
"ಕುಶಿ"ತುಂಬಾ ಮುದ್ದಾಗಿದೆ.ಇನ್ನು ನಿಮ್ಮ ಕವನದಲ್ಲಿ ಪ್ರಸ್ತುತ ಪರಿಸ್ತಿತಿಯನ್ನ ಸ್ಪುಟವಾಗಿ ತೆರೆದಿತ್ತಿದ್ದೀರ."ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ"ಕಾಯಬೇಕಷ್ಟೇ, ಧನ್ಯವಾದಗಳು
ನಿಮ್ಮ ಕಳಕಳಿ ಚೆನ್ನಾಗಿದೆ. ಕಟುವಾಸ್ತವ ಜನರನ್ನು ನರಸತ್ತವರನ್ನಾಗಿಸಿದೆ. ಏಕೆಂದರೆ ಈಗ ನಮ್ಮನ್ನಾಳುತ್ತಿರುವುದು ಭೂಗತ ಜಗತ್ತು. ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಗಣಿಧಣಿಗಳು, ಲಾಲೂ, ಮುಲಾಯಂ, ಮಾಯಾವತಿಗಳು,.....ಎಲ್ಲರೂ ಭೂಗತ ಜಗತ್ತಿನವರೇ ಅಥವಾ ಅವರ ಕೃಪಾಪೋಷಿತರೇ.ಪ್ರತಿಭಟಿಸಿದರೆ ಏನಾಗುತ್ತದೆ ಎಂಬ ಅರಿವಿನಿಂದ ಜನ ಸಿನಿಕರಾಗಿದ್ದಾರೆ. ಆದರೂ ಮುಂದೊಮ್ಮೆ ಸರಿಯಾಗಬಹುದು, ನಾನೂ ಒಬ್ಬ ಆಶಾವಾದಿ.
ಚುಟುಕು ಪ್ರಾಸದ ವಿಡಂಬನೆಯ ಕವಿ ದಿನಕರ ದೇಸಾಯಿ ಅವರನ್ನು ನೆನಪಿಸುವ ಶೈಲಿ ಚೆನ್ನಾಗಿದೆ ;ಜೊತೆಗೆ ನಿಮ್ಮತನವೂ ಒಡಮೂಡಿದೆ. ನಿಮ್ಮಿಂದ ಇನ್ನಷ್ಟು ಚುರುಕು ಮುಟ್ಟಿಸುವ ಕವಿತೆಗಳು ಬರುತಿರಲಿ..
ದೇಶದ ನೈಜ ಸ್ಥಿತಿಯನ್ನು ಕವನ ಚೆನ್ನಾಗಿ ಹೆಳುತ್ತೆ ಸಾರ್....
ಸುನಾಥರ ಮಾತನ್ನೇ ಪುನರುಚ್ಚರಿಸುತ್ತಿದ್ದೇನೆ!
Touching
ಸಮಸ್ಯೆಗಳು ಉದ್ಭವಿಸುವುದೇ ಕುತ್ಸಿತ ರಾಜಕಾರಣದಿಂದ! ರಾಜಕಾರಣಿಗಳು ಎಲ್ಲರೂ ಒಳಗಿನಿಂದ ನೆಂಟರು! ಒಂದೇ ದೋಣಿಯ ಕಳ್ಳರು! ನಾಗರಿಕರೇ ಎದ್ದು ಒಟ್ಟಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ, ಕವನ ಅದನ್ನೇ ಹೇಳುತ್ತದಲ್ಲವೇ? ಹಾರ್ದಿಕ ಶುಭಾಶಯಗಳು.
ದೇಶ ಚನ್ನಾಗಿದೆ,ಜನ ಚನ್ನಾಗಿದ್ದಾರೆ,ಎಲ್ಲರೊ ಸರಿಯಾಗಿದ್ದಾರೆ... ಆದರೆ ವ್ಯವಸ್ಥೆ ಸರಿಯಾಗಿಲ್ಲ, ರಾಜಕೀಯ ಧೂಳಾಗಿ ಹಾರಾಡುತ್ತಿದೆ, ಧೂಳು ಮೈಮೇಲೆ ಬಿದ್ದರೊ ಹೊಡೆದೆಬ್ಬಿಸುವ ಪ್ರಯತ್ನ ಯಾರೊ ಮಾಡುತ್ತಿಲ್ಲ...
ಇತ್ತೀಚಿನ ವಿದ್ಯಾಮಾನಗಳನ್ನು ಚನ್ನಾಗಿ ಬಿತ್ತನೆ ಮಾಡಿದ್ದೀರಿ, ಧನ್ಯವಾದ...
ಮುಂದುವರಿಸಿ..
ಇದೇನ ಸಭ್ಯತೆ ... ಇದೇನ ಸಂಸ್ಕ್ರತಿ ಎನ್ನುತಿಹಳು ನಮ್ಮ ತಾಯಿ ಭಾರತಿ....
ಎಲ್ಲಾರು ಒಂದಾಗೋಣ.. ದೇಶ ಕಟ್ಟೋಣ....
kishor,
kavana tumba chennagide kavana, deshavannu kollutiruva samasyegaLanna chennagi varNisiddeeri
Post a Comment