Wednesday, February 23, 2011

ಸಂಗದೋಷ

ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ಉತ್ತಮವಾದ ಶಿಕ್ಷಣ, ಶಿಕ್ಷಣದ ಜೊತೆಗೆ ಜ್ಞಾನವು ಬೇಕು.. ಈ ಜ್ಞಾನವು ನಾವು ಕೇವಲ ಶಾಲೆಯಲ್ಲಿ ಕಲಿಯುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕ, ಜೀವನ ಚರಿತ್ರೆಗಳಂಥ ಗ್ರಂಥಗಳಿಂದ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಸಾಧ್ಯವಾಗುವುದು. ಜೀವನದಲ್ಲಿ ಕೇವಲ ಉತ್ತಮ ಜ್ಞಾನಾರ್ಜನೆ ಮಾಡಿಕೊಂಡರೆ ಸಾಲದು.ನಾವು ಪಡೆದುಕೊಂಡ ಜ್ಞಾನವು ಸದುಪಯೋಗವಾಗ ಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಅಷ್ಟೇ ಒಳ್ಳೆಯರಾಗಿದ್ದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ. ಸಂಗದೋಷ ಜೀವಕ್ಕೆ ಸಂಚಕಾರ ತರುವಂತ ಸಾಧ್ಯತೆಗಳು ಇವೆ...ಅದಕ್ಕೆ ಒಂದು ಸಣ್ಣ ಉದಾಹರಣೆಯೆನ್ನುವಂತೆ ಕಪ್ಪೆ ಮತ್ತು ಇಲಿಯ ಕಥೆಯನ್ನು ಹೇಳಬಯಸುತ್ತೇನೆ-

ಒಂದೂರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಆ ಕೆರೆಯಲ್ಲಿ ಮೀನು-ಕಪ್ಪೆ ಇತರ ಜಲಚರಗಳು ಸ್ನೇಹ ಜೀವಿಗಳಾಗಿದ್ದವು. ಮಧ್ಯಾನ್ನ ಕೆರೆಯ ನೀರು ಬಿಸಿಯಾಗುವುದರ ಕಾರಣ ಕಪ್ಪೆ ಕೆರೆಯ ತೀರದಲ್ಲಿ ಬಂದು ಆಟವಾಡುತಿತ್ತು. ಇದನ್ನು ಇಲಿಯೊಂದು ಕಂಡು ಕಪ್ಪೆಯ ಸ್ನೇಹ ಸಂಪಾದಿಸಲು ಅದರ ಬಳಿ ಪ್ರತಿದಿನ ಬರುತಿತ್ತು. ಕೆಲವೇ ದಿನಗಳಲ್ಲಿ ಅವೆರಡು ಆತ್ಮೀಯ ಸ್ನೇಹಿತರಾದವು. ಒಂದು ದಿನ ಇಲಿ ಕಪ್ಪೆಯನ್ನು ಉದ್ದೇಶಿಸಿ ''ನಾವಿಬ್ಬರೂ ಬಹಳ ದಿನಗಳಿಂದ ಆತ್ಮೀಯ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ಮಿತ್ರತ್ವವನ್ನು ಧ್ರಡಿಕೊಳಿಸಿಕೊಳ್ಳಲು ನಮ್ಮಿಬ್ಬರ ಕಾಲುಗಳನ್ನು ಒಂದೇ ಹಗ್ಗದಿಂದ ಕಟ್ಟಿಕೊಳ್ಳೋಣ. ಆಗ ನಾವಿಬ್ಬರೂ ಒಬ್ಬರನೊಬ್ಬರು ಅಗಲದೆ ಇರುತ್ತೇವೆ'' ಎಂದು ಹೇಳಿತು. ಅದಕ್ಕೆ ಮೂಢ ಕಪ್ಪೆಯು 'ಸರಿ' ಎಂಬಂತೆ ತಲೆ ಅಲ್ಲಾಡಿಸಿತು. ಕೂಡಲೇ ಇಲಿ ಓಡಿಹೋಗಿ ಇಂದು ಹಗ್ಗದ ತುಂಡನ್ನು ಹುಡುಕಿ ತಂದು ತನ್ನ ಮತ್ತು ಕಪ್ಪೆಯ ಕಾಲುಗಳೆರಡನ್ನು ಬಿಗಿಯಾಗಿ ಕಟ್ಟಿತು. ಅವು ಹೀಗೆ ಪ್ರತಿದಿನ ಆಟ ಆಡಿ ಕುಶಿ ಪಡುತಿದ್ದವು. ಒಂದು ಮಧ್ಯಾನ್ನ ಇವೆರಡು ಆಟ ಆಡುತ್ತಿರುವ ಸಮಯಕ್ಕೆ ಸರಿಯಾಗಿ ಆಕಾಶದಲ್ಲೊಂದು ಹದ್ದು ಹಾರಿ ಬಂದಿತು. ಅದನ್ನು ನೋಡಿದ ಕೂಡಲೇ ಕಪ್ಪೆ ಚಂಗನೆ ಜಿಗಿದು ಕೆರೆಯೊಳಗೆ ಹೋಗಿಬಿಟ್ಟಿತು. ಅದರೊಂದಿಗೆ ಹಗ್ಗದಿಂದ ಕಟ್ಟಲಾಗಿದ್ದ ಇಳಿಯು ಸಹ ಕೆರೆಯಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು. ಅದು ಸತ್ತಿದ್ದರಿಂದಾಗಿ ನೀರಿನಲ್ಲಿ ತೇಲತೊಡಗಿತು. ಅಲ್ಲೇ ಹಾರಾಡುತಿದ್ದ   ಹದ್ದು ತೇಲುತಿದ್ದ ಇಲಿಯನ್ನು ಕಂಡು ಬಿರುಸಿನಿಂದ ಹಾರಿಬಂದು ಅದನ್ನು ಗಬಕ್ ಎಂದು ಹಿಡಿದು ಹಾರಿಕೊಂಡು ಹೋಯಿತು. ಇಲಿಯು ಹದ್ದಿನೊಂದಿಗೆ ಮೇಲೆ ಹೋಗಿದ್ದರಿಂದ ಅದರೊಂದಿಗೆ ಬಂಧಿತವಾಗಿದ್ದ ಕಪ್ಪೆಯು ಅದರೊಂದಿಗೆ ಹೋಗಬೇಕಾಗಿ ಬಂದಿತು. ಹದ್ದಿಗೆ ಎಲ್ಲಿಲ್ಲದ ಸಂತೋಷ.ಒಂದೇ ಬಾಣಕ್ಕೆ ಎರಡು ಹಕ್ಕಿಗಳು.. ಹರ್ಷದಲ್ಲಿ ವೇಗವಾಗಿ ಹಾರಿ ಒಂದು ಮರದ ಮೇಲೆ ಕುಳಿತುಕೊಂಡು ಕಪ್ಪೆ ಮತ್ತು ಇಲಿಗಳನ್ನು ತಿಂದು ತೇಗಿತು. ಹೀಗೆ ಇಲಿಯ ಸಹವಾಸದಿಂದ ಕಪ್ಪೆಯು ತನ್ನ ತನ್ನ ಪ್ರಾಣವನ್ನು ಕಳೆದುಕೊಂಡಿತು. *ಆದ್ದರಿಂದ ಸ್ನೇಹ ಬೆಳೆಸುವಾಗ ವಿಚಾರಮಾಡಿ ಒಳ್ಳೆಯವರ ಸ್ನೇಹ ಬೆಳೆಸುವುದು ಉತ್ತಮವಲ್ಲವೇ ?

38 comments:

ಮನಸಿನಮನೆಯವನು said...

Uttama lekhana..

ಗೆಳತಿ said...

ಕತೆಯ ಮೂಲಕ ಸಂಗದೊಷದ ಪಾಠದ ವಿವರಣೆ ತುಂಬಾ ಚೆನ್ನಾಗಿದೆ ಅಣ್ಣ, ಹಾಗೆಯೇ ಒಬ್ಬ ಮನುಷ್ಯ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ನಿಮ್ಮ ಸಲಹೆಗಳು ಉಪಯುಕ್ತವಾಗಿವೆ

Ashok.V.Shetty, Kodlady said...

@ Vichalitha...

modalaagi pratikriyisiddakke Dhanyavadagalu...

Ashok.V.Shetty, Kodlady said...

@Gelati...

Sundara pratikriyege Dhanayavdagalu..

sunaath said...

Wonderful story.

Ashok.V.Shetty, Kodlady said...

Sunath sir..

Thank u..

ಡಾ. ಚಂದ್ರಿಕಾ ಹೆಗಡೆ said...

olle lekhana...

ಅನಂತ್ ರಾಜ್ said...

ಜ್ಞಾನವು ಸದುಪಯೋಗವಾಗ ಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಅಷ್ಟೇ ಒಳ್ಳೆಯರಾಗಿದ್ದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ. ಉತ್ತಮ ವಿಚಾರಪೂರಿತ ಲೇಖನ ಅಶೋಕ್ ಸರ್. ಕೆಲವು ತಾಣಗಳು (ನಿಮ್ಮ)ನಿಜಕ್ಕೂ ಈ ಕೆಲಸವನ್ನು ಮಾಡುತ್ತಿವೆ. ಧನ್ಯವಾದಗಳು
ಅನ೦ತ್

Ashok.V.Shetty, Kodlady said...

Dhanyavadagalu Chandirika avre..heege barta iri..

Ashok.V.Shetty, Kodlady said...

Ananth Sir,

Nimma aatmeeya pratikriye manassige muda needitu...namma bandhavya heege munduvariyali..

anu said...

lekhana chennagide ashok anna. ಉದಾಹರಣೆ ಜೊತೆ ಹೇಳಿರೊದರಿಂದ ಲೇಖನ ಚೆನ್ನಾಗಿ ಮೂಡಿದೆ. manava sanga jeev. so jeevana sakshathkarakke gnyanarjane jothege uttama snehitara, haagu hiriyaara itha nudigalu, margadarshanada da avasyakathe ide .

http://jyothibelgibarali.blogspot.com said...
This comment has been removed by the author.
http://jyothibelgibarali.blogspot.com said...

chennagide

ಚುಕ್ಕಿಚಿತ್ತಾರ said...

ಕಥೆಯ ಮೂಲಕ ಪಾಠ ..ಚನ್ನಾಗಿದೆ.. ಮಕ್ಕಳಿಗೆ ಹೇಳುತ್ತೇನೆ.

Ashok.V.Shetty, Kodlady said...

Anu...Nanna blog ge bandu sundara pratikriye kottiddakke dhanyavadagalu...heege barta iru....

Ashok.V.Shetty, Kodlady said...

@Jyoti Madam...

Dhanyavadagalu.....

Ashok.V.Shetty, Kodlady said...

@ Chukki Chittara...

Dhanyavadgalu...heege barta iri...

shivu.k said...

ಆಶೋಕ್ ಸರ್,

ಕತೆಯ ಮೂಲಕ ಮಕ್ಕಳ ಪಾಠ ಇಷ್ಟವಾಯಿತು...ಸಲಹೆಗಳು ಕೂಡ ತುಂಬಾ ಚೆನ್ನಾಗಿವೆ..

Pradeep Rao said...

ನಿಮ್ಮ ವಿಚಾರ ಉತ್ತಮವಾದದ್ದು.. ಕೇವಲ ಮಕ್ಕಳಷ್ಟೇ ಅಲ್ಲ ದೊಡ್ಡವರೂ ಸಹ ಸಹವಾಸ ದೋಷದಿಂದ ಕೆಡುವುದು ನಿಜ.. "ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂಬ ಸಾಲುಗಳು ನೆನಪಾದವು.. ಉದಾಹರಣೆಯ ಕಥೆ ಚೆನ್ನಾಗಿದೆ.

Ashok.V.Shetty, Kodlady said...

Shivu sir,

Dhanyavadagalu..

Ashok.V.Shetty, Kodlady said...

@ Pradeep,

Thank u...

shivu.k said...

ಆಶೋಕ್ ಸರ್,
ಒಳ್ಳೆಯ ಗೆಳೆತನದ ಉದಾಹರಣೆಯಾಗಿ ನೀವು ಕೊಟ್ಟ ಕತೆ ತುಂಬಾ ಚೆನ್ನಾಗಿದೆ. ಕಪ್ಪೆಗಾದ ಗತಿಯಿಂದಾಗಿ ಉತ್ತಮ ನೀತಿ ಪಾಠ ಗೊತ್ತಾಗುತ್ತದೆ.

ಜಲನಯನ said...

ಅಶೋಕ್..ಈ ಕಥೆಯನ್ನ ಬಾಲ್ಯದಲ್ಲಿ ಕೇಳಿದ್ದು ನೆನಪಿದೆ...ಮೌಲ್ಯ ಮತ್ತು ನೀತಿ ಯಾವತ್ತಿಗೂ ಹಳೆಯದಾಗೊಲ್ಲ...ಇವನ್ನು ಆಗಾಗ್ಗೆ ನೆನೆಪಿಸಿಕೊಳ್ಳೋದು...ಒಂಥರಾ ಅಲಾರ್ಮ್ ಇದ್ದಾ ಹಾಗೆ,,,ಚನ್ನಾಗಿದೆ,

ಮನಸು said...

tumba chennagide lekhana....

Ashok.V.Shetty, Kodlady said...

Dhanyavadaglu Shivu Sir...

Ashok.V.Shetty, Kodlady said...

Ajad sir,

Dhanyavdagalu Nimma sundar pritikriyege...

Ashok.V.Shetty, Kodlady said...

Suguna Madam,

dhanyavadagalu...barta iri...

ಪ್ರವೀಣ್ ಭಟ್ said...

Hi ashok,

Katheya mukantara buddi heliddeera..

sangadosha koralige donne enno gadeye ide..

olleyavaralli geletana madona..

dhanyavada
Pravi

prabhamani nagaraja said...

ಕಪ್ಪೆ ಮತ್ತು ಇಲಿಯ ಕಥೆ ಚೆನ್ನಾಗಿದೆ ಸರ್, ಉತ್ತಮ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು.

Ashok.V.Shetty, Kodlady said...

Hii Praveen,

Dhanyavdagalu...

Ashok.V.Shetty, Kodlady said...

Prabhamani Madam,

nimma pratikriyege dhanyavadgalu..Barta iri..

V.R.BHAT said...

ಅರಿತವರು ಹೇಳಿದರಲ್ಲವೇ ’ಸಜ್ಜನರ ಸಂಗ ಹೆಜ್ಜೇನು ಸವಿದಂತೇ ಎಂದು’ ಅಥವಾ ’ಗಂಧದೊಡನೆ ಗುದ್ದಾಟ’ ಎಂದು ಎರಡೂ ಅದನ್ನೇ ಹೇಳುತ್ತವೆ, ಲೇಖನ ಉಪಯುಕ್ತ, ಶುಭಹಾರೈಕೆಗಳು

Ashok.V.Shetty, Kodlady said...

Bhatre..

Dhanyavadgalu..

KalavathiMadhusudan said...

"sahavaasadinda sanyaasi ketta"annohaage,kateyalli olleya sandeshavide.

ಸೀತಾರಾಮ. ಕೆ. / SITARAM.K said...

olle kathe. modalu keliralilla. neetige hondikeyaada kathe

Prabhakar. HR said...

ಸಜ್ಜನರ ಸಂಗ ದ ಬಗ್ಗೆ ಲೇಖನ ತುಂಬಾ ಚೆನ್ನಾಗಿದೆ. ಹಾಗೆ ನೀತಿ ಕಥೆಯ ಸಾರಾಂಶ ಒಮ್ಮೆ ನೆನಪಾದರೆ ಸಾಕು ಹೊಸ ಸ್ನೇಹ ಮೂಡುವ ಮುನ್ನ ಈ ಎಚ್ಚರಿಕೆ ಇದ್ದೆ ಇರುತ್ತೆ..ಅಭಿನಂದನೆಗಳು...

Anonymous said...

ಸಜ್ಜನರ ಸಂಗ ದ ಬಗ್ಗೆ ಲೇಖನ ತುಂಬಾ ಚೆನ್ನಾಗಿದೆ. ಹಾಗೆ ನೀತಿ ಕಥೆಯ ಸಾರಾಂಶ ಒಮ್ಮೆ ನೆನಪಾದರೆ ಸಾಕು ಹೊಸ ಸ್ನೇಹ ಮೂಡುವ ಮುನ್ನ ಈ ಎಚ್ಚರಿಕೆ ಇದ್ದೆ ಇರುತ್ತೆ..ಅಭಿನಂದನೆಗಳು...

ಭಾಶೇ said...

ಪಾಪ... ಕಪ್ಪೆಯ ಸಂಗ ಮಾಡಿ ಇಲಿ ತನ್ನ ಪ್ರಾಣ ಕಳಕೊಳ್ಳಲಿಲ್ಲವ?
ಇದರಲ್ಲಿ ಸ್ನೇಹ ಮಾಡಿದ್ದಕ್ಕಿಂತ ತಪ್ಪಾಗಿದ್ದು ಹಗ್ಗ ಕಟ್ಟಿದ್ದರಲ್ಲಿ.