Sunday, February 26, 2012

ಅನಾಥೆ



ರೈಲಿನಲ್ಲಿ ನಾನು ಕಂಡ 'ಕಸ ಹೆಕ್ಕುವ ಹುಡುಗಿ' ಯನ್ನು ಕುರಿತು ಈ ಕವನವನ್ನು ೨೦೦೯ ರಲ್ಲಿ ಬರೆದು ಬ್ಲಾಗ್ ನಲ್ಲಿ ಹಾಕಿದ್ದೆ. ನಾನು  ನನ್ನ ಕೆಲವು  ಗೆಳೆಯರು ಹಾಗು ನನ್ನ' ಬಾಸ್'  ಮಗನ ಸಹಾಯದಿಂದ ಆ ಹುಡುಗಿಯನ್ನು ನಮ್ಮ ಕಛೇರಿಗೆ ಹತ್ತಿರದಲ್ಲಿರುವ ಅನಾಥಶ್ರಮವೊಂದಕ್ಕೆ ೨೦೧೦ ರ ಫೆಬ್ರುವರಿ ೨೭ ರಂದು ಸೇರಿಸ್ಸುವಲ್ಲಿ ಯಶಶ್ವೀಯಾಗಿದ್ದೆ.  ಈಗ ಆ ಆಶ್ರಮದಲ್ಲಿ ಬೇರೆ ಮಕ್ಕಳ ಜೊತೆ ವಿದ್ಯಾಭ್ಯಾಸವನ್ನು ಮಾಡುತ್ತಿರುವ  ಆ ಹುಡುಗಿಗೆ 'ಮಾನಸಿ' ಎಂಬ ಹೆಸರನ್ನಿಟ್ಟು ಆಶ್ರಮದವರು  ಪ್ರತಿ ಫೆಬ್ರುವರಿ ತಿಂಗಳ ೨೭ ನ್ನು ಆಕೆಯ   ಜನ್ಮದಿನವೆಂದು ಆಚರಿಸುತಿದ್ದಾರೆ. ಅದರಂತೆಯೇ ನಾಳೆ ಆಕೆಯ ಜನ್ಮದಿನ......ಅವಳ ಭವಿಷ್ಯ ಸುಂದರವಾಗಿರ ಲೆಂದು ಕೋರುತ್ತಾ, ಶುಭಾಶಯವನ್ನು ಸಲ್ಲಿಸುತ್ತಾ  ಅವಳ ಕುರಿತು ಅಂದು ಬರೆದ ಕವನವನ್ನು ಪುನಃ ಇಲ್ಲಿ ಪ್ರಕಟಿಸುತಿದ್ದೇನೆ. .....










































[ಚಿತ್ರಕೃಪೆ - ಅಂತರ್ಜಾಲ ]




ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಹಿಂದಿನ ಜನ್ಮದಲಿ ನಾ ಮಾಡಿರಬಹುದಾದ
ಘೋರ ಪಾಪಗಳ ಫಲವೋ
............................... ಹಡೆದ ತಾಯಿಗೆ ಬೇಡವಾಗಿ ಜನಿಸಿದೆ ನಾನು




ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ
ತಿಪ್ಪೆಯಿಂದೆತ್ತಿ ತಂದು ಸಂಭಂದ
ಬೆಸೆದ ಪುಣ್ಯಾತ್ಮರು ಯಾರೋ
ಹಸಿದಿರಲು ಹೊಟ್ಟೆ ಬಾಯಿಗೆ
ತುತ್ತು ಇಟ್ಟವರು ಯಾರೋ
ತುಂಡು ಬಟ್ಟೆಯ ಉಡಲು
ಕೊಟ್ಟವರು ಯಾರೋ
.................................. ರಸ್ತೆ ಬದಿಗಳಲಿ ಕಸ ಹೆಕ್ಕುತಿರುವೆ ನಾನು




ದೀಪಾವಳಿ, ಕ್ರಿಸ್ಮಸ್ , ರಂಜಾನ್ ಗಳೆಂಬಾ
ಹಬ್ಬಗಳು ನನಗಿಲ್ಲ
ಹೊಸವರುಷ, ಹೊಸಹರುಷ ಹೊಸ ಉಡುಪುಗಳಾ
ನಾನಿನ್ನು ನೋಡಿಲ್ಲ
ಭೂತ, ವರ್ತಮಾನ, ಭವಿಷ್ಯಗಳ
ಚಿಂತೆಯು ನನಗಿಲ್ಲ
ಕೊಲೆ ಸುಲಿಗೆ ದರೋಡೆಗಳ
ಭಯವಂತೂ ನನಗಿಲ್ಲ
..............................ಹೊಟ್ಟೆ ತುಂಬಾ ಉಂಡರೆ ಹಬ್ಬ ಎಂದುಕೊಂಡವಳು ನಾನು


ಮಳೆ ಗಾಳಿ ಬಿಸಿಲ ತಡೆದು ರಕ್ಷಣೆ ಕೊಡಲು
ನನಗೊಂದು ಸೂರಿಲ್ಲ
ಕಷ್ಟ ಕಾಲದಿ ಒದಗೋ ನೆಂಟರು ಬಂದು ಬಳಗ
ನನಗಿಂದು ಯಾರಿಲ್ಲ್ಲ
ವಿದ್ಯೆಯನು ಕೊಟ್ಟು ಬುದ್ದಿ ಕಲಿಸುವಂಥ
ಗುರುವೆಂಬುವವರಿಲ್ಲ
ಬಿಡುವಿನ ವೇಳೆಯಲಿ ಜೊತೆ ಆಡಲು ನನಗೆ
ಗೆಳೆತಿಯರೆಂಬುವರಿಲ್ಲ
...............................ದಿಕ್ಕು ದೆಸೆಯಿಲ್ಲದ ಅಲೆದಾಡುತಿರುವ ಅನಾಥೆ ನಾನು

45 comments:

ಚುಕ್ಕಿಚಿತ್ತಾರ said...

ಅಶೋಕ್ ಅವರೆ..
ಉತ್ತಮ ಕೆಲಸ ಮಾಡಿದ್ದೀರಿ ಮತ್ತು ಉಳಿದವರಿಗೆ ಪ್ರೇರಣೆಯಾಗಿದ್ದೀರಿ... ಆಕೆಯ ಭವಿಷ್ಯ ಮ೦ಗಳದಾಯಕವಾಗಿರಲಿ.

ವೆಂಕಟೇಶ್ ಹೆಗಡೆ said...

ತುಂಬಾ ಚೆನ್ನಾಗಿದೆ ಸರ್ ...ನಿಜಕ್ಕೂ ಅಂತವರ ಬದುಕು ದುಸ್ತರ ... ನನಗೂ ಈ ತರಹದ ಅನುಭವ ಆಗಿತ್ತು ..ಒಂದು ದಿನ ಟ್ರಾಫಿಕ್ ನಲ್ಲಿ ನಿಂತಾಗ ಒಂದು ಚಿಕ್ಕ ಹುಡುಗಿ ಬೇಡುತ್ತಿದ್ದಳು ದುರಂತ ವೆಂದರೆ ಅವಳಾಗ ಗರ್ಬಿಣಿ ...ಆಗ ಒಂದು ಕವನ ಬರೆದಿದ್ದೆ ಅವಳೊಂದು ತಬ್ಬಲಿ ಹುಡುಗಿ ಅಂತ ನೋಡಿ ...

ಏಕೋ ಏನೋ ಅವಳ ಕಣ್ಣುಗಳು
ತನ್ನ ಹೊಳಪನ್ನು ಕಳೆದುಕೊಂಡಿವೆ
ಬಾಡಿದ ಮುಖ ,ಕಣ್ಣಂಚಿನ ನೀರು ..
ಅವಳ ಅವ್ಯಕ್ತ ನೋವಿನ ಸೆಲೆಯಂತಿದೆ.
ತುತ್ತು ಕೂಳಿಗೂ ,ಹಸಿದ ಕಣ್ಣುಗಳ ಕಾಟ,
ಆದರೂ ಬದುಕಬೇಕಲ್ಲ ,ಎಲ್ಲ ವೇದನೆಗಳ ಮುಚ್ಚಿಟ್ಟು..
ಕನಸಿಗಂತೂ ಬರವಿಲ್ಲ ,ಆದರೇಕೋ ,ಏನೋ ಒಳಗೊಂದು
ಅವ್ಯಕ್ತ ಭೀತಿ ..
ಕನಸ ನನಸಾಗಿಸಲು ಮಾಡುವುದೇನು ಬಂತು?
ಎಲ್ಲ ಬಿಡುವುದು ಮಾತ್ರ ...
ತುತ್ತು ಕೂಳ ತುಂಬಿಸಲು ..
ಬದುಕಬೇಕಲ್ಲ ...ಹಸಿದ ಕಣ್ಣುಗಳ ತಣಿಸಿ .
ಎಲ್ಲ ವೇದನೆಗಳ ಮುಚ್ಚಿಟ್ಟು ....

ಸುಬ್ರಮಣ್ಯ said...

ಒಳ್ಳೇ ಕೆಲಸ.

sunaath said...

ಅಶೋಕರೆ,
ತುಂಬ ಶ್ರೇಷ್ಠವಾದ ಕೆಲಸವನ್ನು ಮಾಡಿದ್ದೀರಿ. ಈ ಪುಣ್ಯಕಾರ್ಯದ ಫಲ ನಿಮಗೆ ಸಿಕ್ಕೇ ಸಿಗುವದು. ನಿಮ್ಮ ಕವನವು ನಿಮ್ಮ ಅಳಲಿನ ದ್ಯೋತಕವಾಗಿದೆ.

Sathisha said...

ಅಶೋಕ್ ಅವರೆ, ನಿಮ್ಮ ಕೆಲಸ, ಕವನ ಎರಡೂ ಮನ ಕಲಕುವಂತಹದು...'ಮಾನಸಿ'ಯ ಭವಿಷ್ಯ ಉಜ್ವಲವಾಗಿರಲಿ...

shivu.k said...

ಅಶೋಕ್ ಸರ್,
ನಿಮ್ಮ ಕೆಲಸ ನಿಜಕ್ಕೂ ಶ್ಲಾಘನೀಯವೆನಿಸುತ್ತದೆ. ಇವತ್ತು ಮತ್ಯಾರೊ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವಂತೆ. ಅದಕ್ಕೆ ಬೆಂಗಳೂರು ಎಷ್ಟು ಟ್ರಾಫಿಕ್ ಜಾಮ್ ಆಗುತ್ತದೋ ಗೊತ್ತಿಲ್ಲ. ಅದಕ್ಕಿಂತ ಹೆಚ್ಚು ಅರ್ಥಪೂರ್ಣ "ಮಾನಸಿ" ಯ ಹುಟ್ಟುಹಬ್ಬ. ಕವನವೂ ಕೂಡ ಚೆನ್ನಾಗಿದೆ.

guru said...

ಇಂದು ಕೂಡ ನಮ್ಮಲ್ಲಿ ಮಾನವೀಯತೆ ಯಾ ಮೌಲ್ಯಗಳು ಉಳಿದುಕೊಂಡಿವೆ ಎಂಬುದಕ್ಕೆ ಆಧಾರ ತಮ್ಮ ಈ ಕಾರ್ಯ ಎಂದು ಹೇಳಬಹುದು .ಪ್ರಚಾರಕ್ಕಾಗಿ ಕಾರ್ಯ ಮಾಡುವ ಹತ್ತು ಜನರ ಮದ್ಯೆ ಈ ಕಾರಣಕ್ಕಗಿಯೇ ತಾವಿಲ್ಲಿ ವಿಬಿನ್ನವಾಗಿ ನಿಲ್ಲುವುದು.ತಮ್ಮ ಈ ಒಳ್ಳೆಯ ಕಾರ್ಯಗಳು ಯಾವುದೇ ಅದೇ ತಡೆ ಇಲ್ಲದೆ ನಿರ್ವಿಗ್ನವಾಗಿ ನೆರವೇರಲಿ ಎಂದು ಆಶಿಸುವೆ.ಹಾಗೆ ತಮ್ಮ ಈ ಮಾನಸಿಯ ಕುರಿತ ಕವನವು ಅದ್ಬುತವಾಗಿ ಬಂದಿದೆ ಅದರಲಿನ ಭಾವ ಬಹಳ ಅರ್ಥ ಪೂರ್ಣವಾಗಿದೆ. ಧನ್ಯವಾದ ಗಳೊಂದಿಗೆ ..ಮಾನಸಿಗೆ ಹುಟ್ಟು ಹಬ್ಬದ ಶುಭಾಶಯಗಳು

ಎನ್.ಆರ್.ಕೆ.ನೇರಳಕಟ್ಟೆ.. said...

Tumba olleya kelasa madidiri Asok anna.
kavan tumba chenagidey..

ಗೆಳತಿ said...

ಜನುಮ ದಿನದ ಹಾರ್ದಿಕ ಶುಭಾಶಯಗಳು ಮಾನಸಿ.
ಅಣ್ಣ ನಿಮ್ಮ ಈ ಕಾರ್ಯ ಅನೇಕರಿಗೆ ಸ್ಫೂರ್ತಿಯಾಗುತ್ತದೆ.

ಕವನ ತುಂಬಾ ಚೆನ್ನಾಗಿದೆ.

Ashok.V.Shetty, Kodlady said...

@ ಚುಕ್ಕಿ ಚಿತ್ತಾರ..

ಮೊದಲ ಪ್ರತಿಕ್ರೀಯೆಗೆ ಧನ್ಯವಾದಗಳು...ನಿಮ್ಮ ಹಾರೈಕೆ ನಿಜವಾಗಲಿ....

Ashok.V.Shetty, Kodlady said...

@ ವೆಂಕಿ.....

ನೀವು ಬರೆದ ಕವನ ಮನ ಕಲಕುವಂತಿದೆ...ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...ಹಾಗೆಯೇ ಸುಂದರ ಪ್ರತಿಕ್ರೀಯೆಗೂ ಧನ್ಯವಾದಗಳು...

Ashok.V.Shetty, Kodlady said...

@ ಸುಬ್ರಮಣ್ಯ ಮಾಚಿಕೊಪ್ಪ ...ಧನ್ಯವಾದಗಳು ಸರ್...

Ashok.V.Shetty, Kodlady said...

@ ಸುನಾಥ್ ಸರ್....

ಪ್ರೀತಿ, ಅಭಿಮಾನಕ್ಕೆ ಚಿರಋಣಿ...ಯಾಕೋ ಆ ಹುಡುಗಿ ಬೇರೆ ಭಿಕ್ಷುಕರ ತರ ಇರಲಿಲ್ಲಾ...ಕಸ ಗುಡಿಸುತ್ತಿರುವಾಗ ನಾನು ಕೊಟ್ಟ ೫೦ ರೂಪಾಯಿಯನ್ನು ತೆಗೆದು ಕೊಳ್ಳದೆ ೧ ಅಥವ ೨ ರೂಪಾಯಿ ಕೊಡಿ ಅಂತ ಹೇಳಿದ ಹುಡುಗಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದಳು....ಅದೇ ಕಾರಣಕ್ಕೆ ಅವಳ ಬಗ್ಗೆ ವಿಚಾರಿಸಿ ಮತ್ತೆ ಅವಳನ್ನು ಅನಾಥಾಶ್ರಮ ಸೇರಿಸುವಲ್ಲಿ ಪ್ರಯತ್ನಿಸಿದೆ.....ಪ್ರತಿಕ್ರೀಯೆಗೆ ಧನ್ಯವಾದಗಳು ಸರ್...

Ashok.V.Shetty, Kodlady said...

@ ಸತೀಶ್....ಧನ್ಯವಾದಗಳು ಮಿತ್ರ....

Ashok.V.Shetty, Kodlady said...

@ ಶಿವು ಸರ್....

ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು....ಬರುತ್ತಾ ಇರಿ...

Ashok.V.Shetty, Kodlady said...

@ ಗುರು

ಧನ್ಯವಾದಗಳು...ತುಂಬಾ ದೊಡ್ಡ ಮಾತು ಹೇಳಿದಿರಿ....ನಿಮ್ಮ ಅಭಿಮಾನಕ್ಕೆ, ಪ್ರತಿಕ್ರೀಯೆಗೆ ಧನ್ಯವಾದಗಳು...

Ashok.V.Shetty, Kodlady said...

@ ರಾಜೇಶ್...

ನನ್ನ ಬ್ಲಾಗ್ ಗೆ ಸ್ವಾಗತ...ಧನ್ಯವಾದಗಳು....ಬರುತ್ತಾ ಇರಿ...

Ashok.V.Shetty, Kodlady said...

@ ಸ್ನೇಹಾ...ನಿನ್ನ ಪ್ರತಿಕ್ರೀಯೆ ನೋಡಿ ಸಂತೋಷವಾಯಿತು... ಧನ್ಯವಾದಗಳು ...

Badarinath Palavalli said...

ಅಶೋಕ್ ಸರ ಮಾನವೀಯ ಕೆಲಸ ಮಾಡಿದ್ದೀರಿ. ದೇವರು ನಿಮ್ಮನ್ನ ತಣ್ಣಗೆ ಇಟ್ಟಿರಲಿ.

ದಿನಂಪ್ರತಿ ಇಂತಹ ದೃಶ್ಯಗಳನ್ನು ನೋಡಿಯೂ ನೋಡದಂತೆ ಸಾಗಿ ಹೋಗುವ ನನ್ನನ್ನೂ ಸೇರಿಸಿಕೊಂಡಂತೆ ನಾಗರೀಕ(!) ಸಮಾಜಕ್ಕೆ ನೀವು ಆದರ್ಶಪ್ರಾಯರಾಗಲಿ.

ಕವನ ಮನ ಮುಟ್ಟುವಂತಿದೆ. ಶೋಷಣೆಯ ಹಲ ಸ್ಥರಗಳನ್ನು ಬಿಡಿಸಿಟ್ಟಿದೆ.

ಮಗುವಿಗೆ ನಮ್ಮ ಕಡೆಯಿಂದಲೂ ಜನ್ಮ ದಿನದ ಶುಭಾಶಯಗಳು.

vaishu said...

Words fall short to tell u how i feel,
Im afraid if they can convery all i ever mean,
While ur poem unfolds many humanly face,
U the poet,exhibhit godly ways,
People say its a bad bad world,there is no shade,
And i say,to take one glimpse at u,befor they fade

Great work bro....im so proud of u!Keep going and going.....lets serve mankind in all best ways possible and also enjoy the joy of giving..cheers!:-)
And manasi sweetz..happiesstt birthday to you...heres me sending a small prayer ur way..am pretty confident ur life is gonna beautiful hereafta.i hope u grow up to be the power which balms the hearts of millions of kids!Hugsss and love!stay blessed.:-)

ಹೇಮಂತ್ ಕುಮಾರ್ ಎನ್. ಎಮ್ said...

Wah hats off to you sir... "ಮಾನವೀಯ" ಕೆಲಸವನ್ನ ಮಾಡಿದ್ದೀರಿ.. ಎಲ್ಲೋ ಏನೋ ನೋಡಿ ಬರೆಯುವದೋಂದಿಗೆ, ಅದನ್ನು ಹಂಚಿಕೊಳ್ಳುವುದರೊಂದಿಗೆ ನಮ್ಮ ನೈತಿಕ ಹೊಣೆ ಮುಕ್ತಾಯಗೊಳ್ಳುವುದಿಲ್ಲ ಈ ರೀತಿಯ ಪ್ರಯತ್ನ ಇನ್ನೊಬ್ಬರಿಗೆ ಉದಾಹರಣೆಯಾಗುತ್ತದೆ, ಪ್ರೇರಣೆಯಾಗುತ್ತದೆ. ಹೃತ್ಪೂರ್ವಕ ಧನ್ಯವಾದಗಳು... :-)

ಇದೇ ವಿಷಯದ ಮೇಲೆ ನಾನೂ ಬರೆಯುವ ಪ್ರಯತ್ನ ಕೊಂಚ ದಿನಗಳ ಹಿಂದೆ ಮಾಡಿದ್ದೆ: http://hemanthkathecorner.blogspot.in/2012/01/blog-post.html

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

ನಿಮ್ಮ ಒಳ್ಳೆ ಯ ಕೆಲಸಕ್ಕೆ ನನ್ನ ವಂದನೆಗಳು.
. ನೀವು ಇನ್ನೊಬ್ಬರಿಗೆ ಪ್ರೇರಣೆಯಾಗಿದ್ದಿರಿ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ

ಜಲನಯನ said...

ಅಶೋಕ್ ಬಹಳ ಚನ್ನಾಗಿದೆ ಲೇಖನ ಮತ್ತು ಚಿತ್ರಗಳು... ಕೆಲ ಸ್ಲಮ್ ಮಕ್ಕಳ ಸ್ಥಿತಿ ನೋಡಿದ್ರಂತೂ ಕೋಟಿ ಬಾಚಿಕೊಳ್ಳೋರಿಗೆ ಇವರ ಬವನೆ ಕಾಣೋಲ್ವೇ...???

Harshith Hegde said...

Great work Ashokanna

ಈಶ್ವರ ಪ್ರಸಾದ said...

ಅಶೋಕ್ ಸರ್ ,
ಎಲ್ಲರು ನುಡಿಯಲ್ಲಿ ಅಷ್ಟೇ ಹೇಳಿದರೆ ನೀವು ನಡೆಯಲ್ಲೂ ಮಾಡಿ ತೋರಿಸಿದ್ದೀರ.
ಎಲ್ಲರೂ ಮೆಚ್ಚುವಂತಹ ಕೆಲಸ ಹಾಗು ಒಳ್ಳೆಯ ಕವನ

ಈಶ್ವರ ಪ್ರಸಾದ said...
This comment has been removed by the author.
V.R.BHAT said...

ಶೆಟ್ಟರೇ, ಒಳ್ಳೇ ಕೆಲಸ ನಡೆಸಿದ್ದೀರಿ, ನಿಮ್ಮ ಅನಿಸಿಕೆ ನಮ್ಮ ಅನಿಸಿಕೆ ಕೂಡಾ.

Pradeep Rao said...

ಅಶೋಕ್ ಸಾರ್ ಹಿಂದೆ ಈ ಕವನವನ್ನು ಓದಿದ್ದೆ ನಿಮ್ಮ ಬ್ಲಾಗಿನಲ್ಲಿ. ನಿಜವಾಗಿಯೂ ನಿಮ್ಮದು ವಿಶಾಲ ಮನಸ್ಸು ಸಾರ್. ಬಹಳ ಪುಣ್ಯದ ಕೆಲಸ! ನನ್ನ ಕಡೆಯಿಂದಲೂ ಆಕೆಗೆ Belated Birthday wishes

bilimugilu said...

Ashok....
Nimma ee kelasa tumbaa mecchuvantaddu. Odi tumbaa khushiyaaytu....
"Maanava Hrudayada KaruNege olavige Dani Goodisuvaase.... Dani Goodisuvaase..."
Very Nice...

bilimugilu said...

Also Also.... Belated Birthday Wishes To Manasi!!

mcs.shetty said...

good work .......well done...

may god bless her and we too wish her a bright future........

mcs.shetty said...

good work .......well done...

may god bless her and we too wish her a bright future........

Anonymous said...

hrudayakke muttuvantide nimma e kavana

ಸೀತಾರಾಮ. ಕೆ. / SITARAM.K said...

ಉತ್ತಮ ಕವಿತೆ..
ಬರೀ ಕಥೆಯಲ್ಲಿ ಮಿಡಿಯದೇ...ಮಾನವತೆಯ ಕೈಕರ್ಯ ಕೊಟ್ಟು ಅವಳ ಬಾಳು ಹಸನಾಗಿಸಲು ಶ್ರಮಿಸಿದ್ದಿರಾ..
ತಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ...

DA RAGHAVENDRA RAO said...

nimma kelasakke namaskara.

DA RAGHAVENDRA RAO said...

nimma kelasakke namaskkara.

Srikanth Manjunath said...

Tumba maanaveeya kelasa..ellaru maduvudakke yochane maaduva aadre maadada..kelasa idu..

nimma shrama nijaakku..shlaaghaneeya..haage kavanada saalugalu haage maanavara tannane jeevanavannu tegedidutte..

Sowmya K A said...

Ashok...... kavana kanniru tharisithu..... :(

Sowmya K A said...

Ashok :) god bless u and that child... :) kavana chennagi moodi bandide. jotege adara bheekarathe jagattina innondu mukhavannu namage torisutte... nijakku aa maguvina jagadalli nintu aa maguvina novannu aksharada mulaka sere hididu namma hrudayakke tattuvanthe varnisuvudu sulabhavalla... yava bhavanegaloo hechu-kadime agada hage najookaagi kavana henediruva nimage shubhashayagalu.. jotege mansigu... :)

ಸುಷ್ಮಾ ಮೂಡುಬಿದಿರೆ said...

ಒಳ್ಳೆಯ ಕಾರ್ಯಕ್ಕಾಗಿ ಮತ್ತು ಸುಂದರ ಕವನಕ್ಕಾಗಿ ಅಭಿನಂದನೆಗಳು ಸರ್..

Lalitha Poojary said...

ನಿಜವಾಗಳು ಮನ ಮಿಡಿಯುವಂತಿದೆ ನಿಮ್ಮ ಮಾತುಗಳು.........
ನೀವು ಆ ಮುಗುವಿಗೆ ಮಾಡಿದ ಸಹಾಯ ಎಂದಾದರೂ ನಿಮ್ಮನ್ನು ಕಾಯುತ್ತದೆ..
ನಿಮ್ಮ ಖುಷಿಯ ಭವಿಷ್ಯಯ ಚೆನ್ನಾಗಿರಲಿ.

ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ... ಈ ಎಲ್ಲಾ ಸಾಲುಗಳು ತುಂಬಾ ಚೆನ್ನಗಿವೆ

ಪದ್ಮಾ ಭಟ್ said...

very nice sir

ಪದ್ಮಾ ಭಟ್ said...

very nice sir

akshaya kanthabailu said...

tuba chennagide sir

KalavathiMadhusudan said...

ashok sir kavanada bhaava
mana kalakuvantide,adbhutavaagi anaatha jivana teredittiddira.dhanyavaadagalu.