Friday, February 17, 2012

ಕುಂದಾಪ್ರ ಜನಪದ

ಕರ್ನಾಟಕದ್ ಕೆಲು ಭಾಷೆಗಳಲ್ ನಮ್ ಕುಂದಾಪ್ರ ಭಾಷಿಯು ಒಂದ್. ಕೆಲ್ವರಿಗ್ ಈ ಭಾಷಿ ಅರ್ಥ ಆತಿಲ್ಲ ಅಂಬ್ರ್...ನಾವ್ ನಮ್ ಭಾಷೆಗ್ ಮಾತಾಡ್ರ್ ಕನ್ನಡ ಬಪ್ಪರು ಕೆಂಬ್ದ್ ಇದ್ ಯಾವ್ ಭಾಷಿ ಮರೆರೆ ಅಂದ್ಹೇಲಿ..'ಕುಂದ ಕನ್ನಡ' ಅಂದ್ರೆ ನಮ್ ಕುಂದಾಪ್ರ ಭಾಷಿ ಕಾಣಿ. ನಾವ್ ಮಾತಡುವತಿಗೆ ಜಾಸ್ತಿ ಎಳುಕ್ ಹ್ವಾತಿಲ್ಲ...ಶಾರ್ಟ್ ಕಟ್ .......ನಮ್ ಕುಂದಾಪ್ರ ಭಾಷಿ ಬಗ್ ಹೇಳುಕ್ ಹ್ವಾರೆ ಒಂದೆರಡ್ ಪೇಜೆಗ್ ಬರ್ದ್ ಹೇಳುಕ್ ಆಪ್ದ್ ಅಲ್ಲ....ನಾನ್ ಇಲ್ ಕುಂದಾಪ್ರ ಭಾಷಿ ಬಗ್ ಬರುವ ಅಂದ್ಹೇಲಿ ಬಂದದಲ್ಲ ....ಕುಂದಾಪ್ರ ಭಾಷಿ ಬಗ್ಗೆ ಇನ್ನೊಂದ್ ಸಲ ಹೇಳ್ತೆ ಅಕಾ....ನಾನ್ ನಿಮ್ಮೊಟ್ಟಿಗೆ ಕೆಲು ನಮ್ ಕುಂದಪ್ರದ್ 'ಜನಪದ' ಹಾಡ್ ಶೇರ್ ಮಾಡ್ಕಂಬ ಅಂದ್ಹೇಲಿ ಬಂದದ್...


ನಮ್ ಕುಂದಾಪ್ರದೆಗೆ ಮೊದ್ಲ್ ಭತ್ತ ತೊಳುವತಿಗೆ, ಮಗುವಿನ್ ತೊಟ್ಲ್ ತೂಗುವತಿಗೆ ಹೆಂಗ್ಸ್ರ್ ಪದ್ಯ ಹೇಳ್ತಾ ಇದ್ರ್. ಈಗ ಇದೆಲ್ಲಾ ಕೈದ್ ಐತ್.....ಅಂತ ಕೆಲು ಪದ್ಯಗಳನ್ ನಿಮ್ ಒಟ್ಟಿಗೆ ಹಂಚ್ಕಂಬಕೆ ನಂಗೆ ಖುಷಿ ಆತಿತ್......


ಭತ್ತ ತೊಳು ಕೈಗೆ ಬಯ್ಣಿ ಮುಳ್ಳ ಹೆಟ್ಟಿತ, ಮದ್ದಿಗ್ ಹ್ವಾದಣ್ಣ ಬರಲಿಲ್ಲಾ
ಮದ್ದಿಗ್ ಹ್ವಾದಣ್ಣ ಬರಲಿಲ್ಲಾ ಬಸರೂರ್ ಸೂಳಿ ಕಂಡಲ್ಲೇ ಒರಗಿದಾ....
ಹ್ಯಾo ಹ್ಞೂ..... ಹ್ಯಾ ಹ್ಞೂ .....

ಅಕ್ಕ ಸಾಕಿದ ಕೋಳಿ ಅಂಕದಲರ್ಜುನಾ, ನಾ ಸಾಕಿದ ಕೋಳಿ ಉರಿ ಹುಂಜಾ...
ನಾ ಸಾಕಿದ ಕೋಳಿ ಉರಿ ಹುಂಜಾ ಕೂಗಿದರೆ ಲಂಕಾ ಪಟ್ಟಣವೇ ಬೆಳಗೈತು....
ಹ್ಯಾo ಹ್ಞೂ ಹ್ಯಾ ಹ್ಞೂ ...

ಒಂದ್ ಮಲ್ಲಿಗಿ ಮಿಟ್ಟಿ ಅಲ್ಲಿಟ್ಟಿ ಇಲ್ಲಿಟ್ಟಿ, ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ..
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ ಮಂದಾರ್ತಿ ತೇರ ಮೇಲಿಟ್ಟಿ ಕೈ ಮುಗ್ದಿ ..
ಹ್ಯಾಂ ಹ್ಞೂ ...ಹ್ಯಾಂ ಹ್ಞೂ .....

ಹಳ್ಳಿ ಮೇಲಿನ ಹುಡುಗ ಹಲ್ಲೆಲ್ಲ ಬೆಳ್ಳಗೆ ಬೆಳ್ಳುಳ್ಳಿ ಗೆಂಡೆ ಬಗಲಾಗೆ,
ಬೆಳ್ಳುಳ್ಳಿ ಗೆಂಡೆ ಬಗಲಾಗೆ ಇಟ್ಕೊಂಡು ಮರಳು ಮಾಡಿದನೆ ಹುಡುಗೀರ ....
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಹಾದಿ ಮೇಲ್ ಹ್ವಾಪರೆ ಹಾಡೆಂದು ಕಾಣಬೇಡಿ, ಹಾಡಲ್ಲ ನನ್ನ ಒಡಲೂರಿ
ಹಾಡಲ್ಲ ನನ್ನ ಒಡಲೂರಿ ದೇವರೇ ಬೆವರಲ್ಲ ನನ್ನ ಕಣ್ಣೀರು ...
ಹ್ಯಾಂ ಹ್ಞೂ ....ಹ್ಯಾಂ ಹ್ಞೂ....

ನಮ್ಮನಿ ಸುತ್ತಲೂ ಕೆಮ್ಮಣ್ಣಿನ ಪಾಗಾರ, ಧೂಳ ಕಾಲವರೆ ಬರಬೇಡಿ ...
ಧೂಳ ಕಾಲವರೆ ಬರಬೇಡಿ ನಮ್ಮನೆಗೆ ಚಿನ್ನದ ಕಾಲ್ ಒಡೆಯರು ಬರುತಾರೆ ...
ಹ್ಯಾಂ ಹ್ಞೂ ...ಹ್ಯಾಂ ಹ್ಞೂ........

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲು ಕೆಂಪು
ಅತ್ತಿಯ ಹಣ್ಣು ಬಲು ಕೆಂಪು ಅಣ್ಣಯ್ಯ
ಬಿಚ್ಚಿ ಕಂಡರೆ ಹುಳು ಬಾಳ ......
ಹ್ಯಾಂ ಹ್ಞೂ ಹ್ಯಾಂ ಹ್ಞೂ...........

ಹೊಸ ನೆಂಟ್ರ ಬಂದೀರ್, ಹಸಿ ಹಾಕಿ ನೀರ್ ಕೊಡಿ
ಹಸಿನ್ ಹಾಲೆಗ್ ಎಸರಿಡಿ
ಹಸಿನ್ ಹಾಲೆಗೆ ಎಸರಿಡಿ ನಮ್ಮನಿ
ಹೆಸರು ಹತ್ತುರೇ ನೆನೆಯಲಿ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ..................


ಭತ್ತ ತೊಳು ಹೆಣ್ಮಕ್ಳೆ ಅತ್ತಿತ್ತ ಕಾಣ್ಬೇಡಿ
ಬರ್ತಾರೆ ನಿಮ್ಮ ಬಗಿಯರ್
ಬರ್ತಾರೆ ನಿಮ್ಮ ಬಗಿಯರ್ ಹೆಣ್ಮಕ್ಳೆ
ತರ್ತಾರೆ ನಿಮಗೆ ತೌಡ್ ಹಿಟ್ಟ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ........


ಒಂದಕ್ಕಿ ಬೆಂದಿತ್ ಒಂದಕ್ಕಿ ಬೈಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚೆಕ್ಕಿ ಒಡಕ್ಕೋಡ...
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಪಾರಿಜಾತದ ಹೂಗು ಪಾಗಾರಕೆರಗಿತು
ಯಾರಮ್ಮ ಹೂಗು ಕೊಯ್ಯಿಬ್ಯಾಡಿ
ಯಾರಮ್ಮ ಹೂಗು ಕೊಯ್ಯಿಬ್ಯಾಡಿ ನಮ್ಮಾನಿ
ದೇವ್ರಿಗೆ ಬೇಕು ಹೊಸ ಹೂಗು...
ಹ್ಯಾಂ ಹ್ಞೂ...ಹ್ಯಾಂ ಹ್ಞೂ

ಅಪ್ಪೈನ ಮನೆಯಲ್ಲೋ ಎಪ್ಪತ್ತು ತೆಂಗಿನ ಮರ
ಕೊನಿ ನೂರ್ ಅದ್ಕೆ ಹೆಡಿ ನೂರು
ಕೊನಿ ನೂರ್ ಅದ್ಕೆ ಹೆಡಿ ನೂರು ಅಪ್ಪಯ್ಯ
ನಂಗೂ ನನ್ ತಂಗಿಗೂ ಸರ್ ಪಾಲು....
ಹ್ಯಾಂ ಹ್ಞೂ...ಹ್ಯಾಂ ಹ್ಞೂ...

ಕೆಳ ಗೆದ್ದಿ ಕೆಸರೆಂದ ಮೇಲ್ ಗೆದ್ದಿ ಬಿಸಿಲೆಂದ
ಹೂಗಿನ್ ಹೆದ್ದರೀನೆ ಹಿಡಿದಾನ
ಹೂಗಿನ್ ಹೆದ್ದರೀನೆ ಹಿಡಿದಾನ ನನ್ ತಮ್ಮ
ಅದ್ ನಮ್ಮ ತಾಯಿ ತವರೂರು
ಹ್ಯಾಂ ಹ್ಞೂ...ಹ್ಯಾಂ ಹ್ಞೂ... [ಇನ್ನೂ ಇತ್ತ್...ಇನ್ನೊಂದ್ ಸಲ ಬರೀತೆ]



55 comments:

ಜಲನಯನ said...

ವಾವ್ ಅಶೋಕ್ ಸೂಪರ್..ಕುಂದಾಪ್ರಕಂಡ....ಭಾಳ್ ಪಸಂದಾಯ್ತಪ್ಪಾ...ತಮಾ...

Ashok.V.Shetty, Kodlady said...

ಆಜಾದ್ ಸರ್.....ನಿಮ್ ಫಸ್ಟ್ ಕಾಮೆಂಟ್ ಕಂಡ್ ಖುಷಿ ಐತ್ .....ನಮ್ ಭಾಷಿ ಬಾಳ ಚಂದ ಇತ್ತ್....ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ....

ದೀಪಸ್ಮಿತಾ said...

ಕುಂದಾಪ್ರ ಕನ್ನಡ್ದ್ ಲೇಖ್ನ ಓದಿ ಖುಷಿ ಆಯ್ತ್ ಮರ್ರೆ. ಹೌದ್ ಕಾಣಿ, ಕುಂದಾಪುರ, ಬೈಂದೂರ್, ಶಿರೂರ್ ಸುತ್ತಮುತ್ಲದ ಈ ಭಾಷೆ ಬ್ಯಾರೆ ಕನ್ನಡದವ್ರಿಗೇ ಅರ್ಥ ಆಗ್ತಿಲ್ಲೆ

sunaath said...

ಅಶೋಕರೆ,
ಕುಂದಾಪ್ರ ಚೆಂದಾಗ್ ಇತ್ತ. ನಿಮ್ ಹಾಡೂ ಚೆಂದಾಗ್ ಇತ್ತ.

Ashok.V.Shetty, Kodlady said...

ದೀಪಸ್ಮಿತ ಮೇಡಂ....

ಹೌದ್....ತುಂಬಾ ಜನ್ರೀಗೆ ನಮ್ ಭಾಷಿ ಅರ್ಥ ಆತಿಲ್ಲ...ನಮ್ ಭಾಷಿ ಎಲ್ಲರಿಗೂ ಗೊತ್ತೈಕ್, ಎಲ್ಲರಿಗೂ ಅರ್ಥ ಅಯ್ಕ್ ಅಂಬದೆ ನಮ್ಮಾಸಿ...ಧನ್ಯವಾದಗಳು.....

Ashok.V.Shetty, Kodlady said...

ಸುನಾಥ್ ಸರ್ ,

ಧನ್ಯವಾದಗಳು ಸರ್.....ನಮ್ಮ ಭಾಷೆ ಯಲ್ಲಿರುವ ಇಂತ ಹಾಡುಗಳು ತುಂಬಾ ಅರ್ಥಪೂರ್ಣವಾಗಿರುತ್ತವೆ... ಇವುಗಳು ಓದಲು ಬರೆಯಲು ತಿಳಿಯದ ಮಹಿಳೆಯರ ಬಾಯಿಂದ, ಅವರೇ ಕಟ್ಟಿಕೊಂಡು ಹಾಡುವ ಹಾಡುಗಳು....

Swarna said...

ಅತ್ತಿಯ ಹಣ್ಣಿನ ಪದ ಕೇಳಿದ್ದೆ.
ಬೆರೆದು ಕೇಳಿರಲಿಲ್ಲ ಚೆನ್ನಾಗಿದೆ.
ಹಟ್ಟಿ ಅಂಗಡಿ ಕುಂದಾಪುರದ ಹತ್ರ ಅಲ್ಲ?
ನಂಗೆ ತುಂಬಾ ಇಷ್ಟದ ಕ್ಷೇತ್ರ ಅದು..ಆನೆಗುಡ್ಡೆ ಕೂಡ
ಬರೆಯುತ್ತಿರಿ
ಸ್ವರ್ಣಾ

Swarna said...

ಅತ್ತಿಯ ಹಣ್ಣಿನ ಪದ ಕೇಳಿದ್ದೆ.
ಬೆರೆದು ಕೇಳಿರಲಿಲ್ಲ ಚೆನ್ನಾಗಿದೆ.
ಹಟ್ಟಿ ಅಂಗಡಿ ಕುಂದಾಪುರದ ಹತ್ರ ಅಲ್ಲ?
ನಂಗೆ ತುಂಬಾ ಇಷ್ಟದ ಕ್ಷೇತ್ರ ಅದು..ಆನೆಗುಡ್ಡೆ ಕೂಡ
ಬರೆಯುತ್ತಿರಿ
ಸ್ವರ್ಣಾ

Ashok.V.Shetty, Kodlady said...

ಸ್ವರ್ಣಾ ಮೇಡಂ,

ಹೌದು, ಹಟ್ಟಿ ಅಂಗಡಿ ಕುಂದಾಪುರದಲ್ಲೇ ಬರುತ್ತೆ, ನಮ್ಮ ಮನೆಗೆ ಹತ್ತಿರವೇ ಇರುವ ಕ್ಷೇತ್ರ, ಆನೆಗುಡ್ಡೆ, ಕೊಲ್ಲೂರು, ಮಾರಣಕಟ್ಟೆ ,ಕಮಲಶಿಲೆ, ಸೌಕೂರು ಹೀಗೆ ಅನೇಕ ಸುಂದರ ದೇವಸ್ಥಾನಗಳು ಕುಂದಾಪುರದಲ್ಲಿವೆ... ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು...ಬರುತ್ತಾ ಇರಿ...

anu said...

ಹ್ಯಾಂ ಹ್ಞೂ ಹ್ಯಾಂ ಹ್ಞೂ........
chenda ait ri . kushi aat kundapur padakeli......

ಮನದಾಳದಿಂದ............ said...

ಹ್ವಾಯ್ ಶೆಟ್ರೆ,
ಲಾಯ್ಕಿತ್ತು ಕಾಣಿ,
ಊರನ್ಗೆಲ್ಲ ಓದು ಬರ ಕಲ್ತ್ ಜನ ಜಾಸ್ತಿ ಆಯಿರ್ ಮರೆರೆ! ನಮಗೆ ಹೊಸ್ತು ಬೇಕು ಕಾಣಿ,ಹಳ್ತ್ ಯಾರ್ ಕೆಂತ್ರ್?
ಹಳೆ ಜನಪದದ್ ಸೊಗಡು ಈಗಂತೂ ಕಾಮ್ಬುಕೆ ಇಲ್ಲೇ. ಯಾರೋ ಅಲ್ಲೊಂದ್ ಇಲ್ಲೊಂದ್ ಹಳೀ ತಲಿ ಇದ್ದಲ್ ಕೆಮ್ಬುಕಿತ್ತ್.
ಎನ್ತಾರ್ ಆಯಿಲೆ. ನೀವ್ ಒಂದ್ ಹಳೀ ಜನಪದ ಹಾಡ್ ಹಾಕಿ ಒಳ್ಳೆ ಕೆಲ್ಸ ಮಾಡೀರ್.

ಹೀಂಗೆ ಬರೂದ್ ಇರ್ಲಿ ಅಕಾ........

Ashok.V.Shetty, Kodlady said...

ಹಾಯ್ ಅನು..

ಮೆಚ್ಚಿದ್ದಕ್ಕೆ ಧನ್ಯವಾದಗಳು...

Ashok.V.Shetty, Kodlady said...

ಹಾಯ್ ಪ್ರವೀಣ್,
ಕರೆಕ್ಟ್ ಹೇಳಿರಿ....ಹಿಂದಿನ್ ಹಾಡ್ ಎಲ್ಲಾ ಯಾರ್ ಕೆಂತ್ರ್ ಈಗ...ಎಲ್ಲರಿಗೂ ಹೊಸ ಹಾಡ್ ಬೇಕ್...ಓದುಕೆ, ಬರುಕೆ ಬರ್ದೆ ಇದ್ದರೂ ಎಸ್ಟ್ ಒಳ್ಳೆ ಅರ್ಥ ಇದ್ದ್ ಹಾಡ್ ಹೇಳ್ತ್ಹ್ರ್ ಇದ್ರ್ ಕಾಣಿ.....ಅದ್ ಈಗ ಎಲ್ ಸಿಕ್ಕತ್... ನಿಮ್ ಕಾಮೆಂಟ್ ಓದಿ ತುಂಬಾ ಖುಷಿ ಐತೆ......ಹೀಂಗೆ ಬತ್ತಾ ಇರಿ.....

ಚುಕ್ಕಿಚಿತ್ತಾರ said...

wow.. good collection...!

guru said...

ಕುಂದಾಪುರದ ಜನಪದ ಗೀತೆ ಬಹಳ ಸೊಗಸಾಗಿದೆ ..ಅದರಲ್ಲಿನ ಗ್ರಾಮ್ಯ ಭಾಷೆ ಬಹಳ ಅದ್ಬುತವಾಗಿದೆ .ಹಾಗೂ ಅದರಲ್ಲಿನ ಅರ್ಥ ಬಹಳ ಸೊಗಸಾಗಿದೆ .ನಮ್ಮ ಬೆಂಗಳೂರಿಗರಿಗೆ ಇದರಲ್ಲಿನ ಸೊಗಡು ಸ್ವಲ್ಪ ಹೊಸದೆಂದೇ ಹೇಳಬಹುದು .ನನಗಂತು ಇದರಲ್ಲಿನ ಸಾಹಿತ್ಯ ಬಹಳ ಮನಸಿಗೆ ಹಿಡಿಸಿದೆ ,ತಮ್ಮ ಈ ಸಾಹಿತ್ಯ ಕೃಷಿ ಹೀಗೆ ಮುಂದುವರೆದು ನಮೆಲ್ಲರ ಮನಗಳನ್ನು ಬೆಳಗಲಿ ,ಧನ್ಯವಾದಗಳು.

Ashok.V.Shetty, Kodlady said...

@ ಚುಕ್ಕಿ ಚಿತ್ತಾರ .....

ಧನ್ಯವಾದಗಳು ಮೇಡಂ....ಬರ್ತಾ ಇರಿ....

Ashok.V.Shetty, Kodlady said...

ಧನ್ಯವಾದಗಳು ಗುರು....ಹೌದು ಈ ಹಾಡುಗಳಲ್ಲಿ ತುಂಬಾನೇ ಅರ್ಥವಿದೆ. ಓದು ಬರಹ ಬರದೆ ಇರುವವರು ಕಟ್ಟಿ ಹಾಡುವ ಹಾಡುಗಳು ಎಂದರೆ ಖಂಡಿತಾ ಆಶ್ಚರ್ಯವಾಗುತ್ತದೆ. ....ಮೆಚ್ಚಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು....ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರೀಯೆ ನೋಡಿ ಖುಷಿ ಆಯಿತು....ಹೀಗೆ ಬರ್ತಾ ಇರಿ.....

Shamita Shetty said...

ಹಾಯ್ ಅಶು

ವೊವ್...ನಮ್ ಭಾಷಿ ಹಾಡ್ ಕಂಡ್ ಕುಶಿ ಐತ್ ...ಈಗೆಲ್ಲ ಈ ಹಾಡ್ ಕೆಮ್ಬುಕ್ ಸಿಕ್ಕುದಿಲ್ಲಾ...ನಮ್ ಜೊತಿ ಹಂಚ ಕಂಡದ್ದಕ್ಕೆ ಥ್ಯಾಂಕ್ಸ್ ....

Shashi jois said...

ಶೆಟ್ರೆ ಪದ ಲಾಯ್ಕಿತ್ತು ಮರ್ರೆ.....
ನನ್ನಜ್ಜಿ ಹೇಳುತ್ತ ಕೆಂಡಿದ್ದೆ...........
ಆದ್ರೆ ನಂಗೆ ಬಾಯಿಗೆ ಬತ್ತಿಲ್ಲ ಹ ಹ ಹ ಹ ಹ

Shashi jois said...

ಶೆಟ್ರೆ ಪದ ಲಾಯ್ಕಿತ್ತು ಮರ್ರೆ.....
ನನ್ನಜ್ಜಿ ಹೇಳುತ್ತ ಕೆಂಡಿದ್ದೆ...........
ಆದ್ರೆ ನಂಗೆ ಬಾಯಿಗೆ ಬತ್ತಿಲ್ಲ ಹ ಹ ಹ ಹ ಹ

Ashok.V.Shetty, Kodlady said...

ಹಾಯ್ ಶಮಿ....

ಥ್ಯಾಂಕ್ಸ್ ...ನಮ್ ಭಾಷಿ ಎಲ್ಲರಿಗೂ ಗೊತ್ತೈಲಿ ಅಂಬ್ದೆ ನನ್ ಆಸೆ...

Ashok.V.Shetty, Kodlady said...

ಶಶಿ ಅಕ್ಕಾ,

ಥ್ಯಾಂಕ್ಸ್,,,,ಬತ್ತಾ ಇರಿ...

Sathisha said...

ಓದಿ ಭಯಂಕರ ಖುಷಿ ಆಯ್ತ್ ಮಾರಾಯ್ರೇ...ಒಂದ್ ಇಪ್ಪತ್ತು ವರ್ಷ ಹಿಂದೆ ನಮ್ಮ ಮನೆಯನ್ಗೂ ಹೀಂಗಿದ್ದೆ ಪದ ಹೇಳ್ತಾ ಇದ್ರು, ಭತ್ತ ಕುಟ್ಟುವತಿಗೆ...ಈ ಸಲ ಮನಿಗ್ ಹ್ವಾದಾಗ ಕೆಳಕ್, ಎಷ್ಟ್ ಪದ ನೆನಪ್ ಇತ್ತ್ ಅಂದೇಳಿ...

ಓ ಮನಸೇ, ನೀನೇಕೆ ಹೀಗೆ...? said...

ನಿಮ್ಮ ಭಾಷೆ ನೋಡಿ ನಂಗೆ ನಮ್ಮ ಹವ್ಯಕ ಭಾಷೆ ನೆನಪಾಯ್ತು.... ಕುಂದಾಪ್ರ ಭಾಷೆ ಓದಿ ರಾಶಿ ಕುಶಿ ಆತು. ರಾಶಿ ಚೋಲೋ ಬರದ್ರಿ. ನೀವು ಒಟ್ಟಾಕಿದ ನಿಂಗ್ಳಾ ಭಾಷೆ ಹಾಡೂ ಚೊಲೋ ಇದ್ದು. :)ಇದು ನಮ್ ಭಾಷೆ.

Badarinath Palavalli said...

ಅಶೋಕಣ್ಣ, ವಿಶಾಲ ಕರ್ನಾಟಕದ ತುಂಬಾ ಹರಡಿರುವ ಕನ್ನಡದ ಹಲವು ಶೈಲಿಗಳಲ್ಲೂ ಅದೆಷ್ಟು ಸಮೃದ್ಧ ಜಾನಪದ ಅಡಗಿದೆಯೋ? ಈ ನಿಟ್ಟಿನಲ್ಲಿ ನಿಮ್ಮ ಈ ಪ್ರಯತ್ನ ನಮಗೆಲ್ಲ ದಾರಿ ದೀಪವಾಗಲಿ.

ಈಶ್ವರ ಪ್ರಸಾದ said...

ಅಶೋಕ್ ಸರ್ , ನಿಮ್ಮ ಕುಂದಾಪುರ ಭಾಷೆ ತುಂಬಾ ಚೆನ್ನಾಗಿದೆ. ಹಿಂದೆ ಗದ್ದೆ ಬೇಸಾಯ ಮಾಡುವಾಗಲೂ ಈ ತರ ಪದಗಳನ್ನು ಹೇಳ್ತಿದ್ರು.ಇವಾಗ ಅದೆಲ್ಲ ಕೇಳಲು ಸಿಗುದು ಅಪರೂಪ..ಚೆನ್ನಾಗಿದೆ

Unknown said...

ನಿಮ್ಮ ಬ್ಲಾಗ್ ಕಂಡ ಖುಷಿ ಆಯ್ತೆ

ಮೊದಲೇ ನನ್ನ್ನ ಖುಷಿ ಹಾಡ ಬರದಿರಿ

ಬತ್ತ ತೊಳುವರ್ ಕೈಗೆ

ಓದಿ ಖುಷಿ ಆಯ್ತ್

ಎಷ್ಟ್ ಅಂತ್ರಿಯಾ ತಡ್ಕಂಬ್ಕ್ ಆಯ್ದಿದ್ದಶ್ತ್ !!

Ashok.V.Shetty, Kodlady said...

ಸತೀಶ್,

ನನ್ನ ಬ್ಲಾಗ್ ಗೆ ಸ್ವಾಗತ....ಹೌದ್ ಮರ್ರೆ ಹಿಂದೆ ಎಲ್ಲಾ ಹಾಡ್ತಾ ಇದ್ರ್...ಈಗ ಇಲ್ಲ......ನಿಮ್ ಪ್ರತಿಕ್ರೀಯೆ ಕಂಡ್ ಕುಶಿ ಐತೆ ...ಈ ಬದೀಗ್ ಬತ್ತಾ ಇರಿ.....

Ashok.V.Shetty, Kodlady said...

@ ಓ ಮನಸೇ ನೀನೇಕೆ ಹೀಗೆ

ನನ್ನ ಬ್ಲಾಗ್ ಗೆ ಸ್ವಾಗತ....ಹೌದ್ ಹವ್ಯಕ ಭಾಷೆ ಮತ್ತೆ ನಮ್ ಭಾಷೆ ಮಧ್ಯೆ ಜಾಸ್ತಿ ಅಂತರ ಇಲ್ಲ...ನಿಮ್ ಪ್ರತಿಕ್ರೀಯೆಗೆ ಧನ್ಯವಾದಗಳು.......ಬತ್ತಾ ಇರಿ.....

Ashok.V.Shetty, Kodlady said...

@ ಬದರೀ ಸರ್ ..

ನಿಮ್ಮ ಮಾತು ನಿಜ...ಪ್ರತಿಕ್ರೀಯೆಗೆ ಧನ್ಯವಾದಗಳು...

Ashok.V.Shetty, Kodlady said...

@ ಈಶ್ವರ್ ಸರ್....

ನನ್ನ ಬ್ಲಾಗ್ ಗೆ ಸ್ವಾಗತ....ಹೌದು ಸರ್, ನಾಟಿ ಮಾಡುವಾಗ, ಕಳೆ ತೆಗೆಯುವಾಗ ಎಲ್ಲಾ ಇಂತಹ ಹಾಡುಗಳನ್ನು ಹಾಡುತ್ತಾರೆ...ಪ್ರತಿಕ್ರೀಯೆಗೆ ಧನ್ಯವಾದಗಳು....

Ashok.V.Shetty, Kodlady said...

@ ವಸಂತ್ ....

ನಮ್ ಭಾಷೆ ಇಷ್ಟ ಆಗಿದ್ದು ಸಂತೋಷ...ಹೀಗೆ ಬರ್ತಾ ಇರಿ...ಧನ್ಯವಾದಗಳು...

Ashok.V.Shetty, Kodlady said...

@ ವಸಂತ್ ....

ನಮ್ ಭಾಷೆ ಇಷ್ಟ ಆಗಿದ್ದು ಸಂತೋಷ...ಹೀಗೆ ಬರ್ತಾ ಇರಿ...ಧನ್ಯವಾದಗಳು...

Ashok.V.Shetty, Kodlady said...

@ ಗೋಪಿ ಸರ್.....

ನನ್ನ ಬ್ಲಾಗ್ ಗೆ ಸ್ವಾಗತ....ನಿಮ್ ಕಾಮೆಂಟ್ ಕಂಡ್ ನಂಗೂ ಖುಷಿ ಐತೆ.....ನಿಮ್ ಬ್ಲಾಗ್ ನಲ್ಲಿ ನಮ್ ಕುಂದಾಪ್ರ ಭಾಷೆ ಕಥಿ ಎಲ್ಲಾ ಓದಿಯೂ ಖುಷಿ ಐತೆ.....ಹಿಂಗೆ ಬತ್ತಾ ಇರಿ....

ಗೋಪಾಲ್ ಮಾ ಕುಲಕರ್ಣಿ said...

ಸೂಪರ್..ತುಂಬಾ ಚೆನ್ನಾಗಿದೆ ....

Pradeep Rao said...

ಅಶೋಕ್ ಸಾರ್... ಯಾಕೋ ನಿಮ್ ಕುಂದಾಪುರ ಭಾಷೆ ಹೆಚ್ಚಿಗೆ ಅರ್ಥ ಆಗ್ಲಿಲ್ಲಾ!! :((

ಆದರೂ ಓದಿದೆ... "ಕೆಂಪು ಹೆಂಡತಿಯೆಂದು ಮೆರಿಬೇಡ..." ಸಾಲು ಇಷ್ಟವಾಯಿತು! :)

Ashok.V.Shetty, Kodlady said...

@ ಗೋಪಾಲ್ ಮಾ ಕುಲಕರ್ಣಿ...

ಧನ್ಯವಾದಗಳು ಸರ್....ಬರ್ತಾ ಇರಿ...

Ashok.V.Shetty, Kodlady said...

@ ಪ್ರದೀಪ್....

ಅರ್ಥ ಆಗಿಲ್ವಾ? ನಿಮಗೆ ಕಲಿಸಿ ಕೊಡ್ತೀನಿ....ಪ್ರತಿಕ್ರೀಯೆಗೆ ಧನ್ಯವಾದಗಳು..

Ammu said...

Anna gottitt adre istond alla alpaswalpa aste, enbekar ayli laik itt kaluk estond ittalla namigella idella gotte irla ondo erdo kelida nenapu. aru nimginnu nenpitt andre nimma nenapinashaktigondu hats off anna.

ರಾಘವೇಂದ್ರ ಹೆಗಡೆ said...

ಲೈಕ್ ಇತ್ತ್ ... :)

Ashok.V.Shetty, Kodlady said...

ಹಾಯ್ ಸುಪ್ಪಿ....

ಥ್ಯಾಂಕ್ ಯೂ....ಹೀಂಗೆ ಬತ್ತಾ ಇರ್ ಈ ಬದಿಗೆ..

Ashok.V.Shetty, Kodlady said...

ಹಾಯ್ ರಾಘವೇಂದ್ರ

ನನ್ನ ಬ್ಲಾಗ್ ಗೆ ಸ್ವಾಗತ .....ಧನ್ಯವಾದಗಳು ....ಬರ್ತಾ ಇರಿ.....

ಗಿರೀಶ್.ಎಸ್ said...

waw waw...nimma kundapurad janapada saahithya chennagide sir ....

bilimugilu said...

hi Ashok.... ishtavaaythu... sooper!

Ashok.V.Shetty, Kodlady said...

ಧನ್ಯವಾದಗಳು ಗಿರೀಶ್....

Ashok.V.Shetty, Kodlady said...

ರೂಪಕ್ಕ ,

ನನ್ನ ಬ್ಲಾಗ್ ಗೆ ಸ್ವಾಗತ....ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು...ಬರುತ್ತಾ ಇರಿ....

Harshith Hegde said...

ಲಾಯ್ಕ್ ಆಯ್ತ್ ಅಶೊಕಣ್ಣ ... ಇನ್ನು ಬರಿನಿ :)

Harshith Hegde said...

ಬತ್ತಿಲ್ಲ ಅಂದರೂ,ಬಪ್ಪುಕೆ ಹೇಲ್ಕಂಡ್
ಬಂದರು ಒಂದೂ ಹುಳ ಇಲ್ಲ
ಬಂದರು ಒಂದೂ ಹುಳ ಇಲ್ಲ ಅಶೋಕಣ್ಣ
ನಾಳಿಂದ ಬಪ್ಪುಕೆ ನಂಗೆಡ್ಯ
.....ಹ್ಜ್ಹಾಂ ಹ್ಜ್ಹೂಹ್ಜ್ಹಾಂ ಹ್ಜ್ಹೂ
ಬೊಂಬಾಯಿ ಅಶೋಕಣ್ಣ ಬಾಯಿಬಿಟ್ರೇ..ಮಕ್ಕಳ್.. ಓಡ್ ಬತ್ತೋ ಏಲ್ಲಿದ್ರೊ.....ಆದರೇ,
ಈ ಪದ ಕೇಂಡ್ರೇ....ಯಕೊ ಕಣ್ಣ್ಕೂರ್ತೋ......
ಹ್ಯಾಂ ಹ್ಜ್ನೂ ಯಾಂ ಹ್ಞೂ ..
ಹ್ಯಾಂ ಹ್ಞೂ ..

vaishu said...

Wow.... refreshing post bro..janapada hadu keli odhi tumba dina agittu...missing ajji!:-)Illi adhu kundapura shailinalli janapada haad odhi innu khushi aytu..nange higu kannada mathadthare anth gothirlilla kaani...layak aith kund kannada...incredible karnataka!:-)

shivu.k said...

ಆಶೋಕ್ ಸರ್,
ಕುಂದಾಪುರ ಭಾಷೆಯಲ್ಲಿ ನಿಮ್ಮ ಪ್ರಯೋಗ ಓದಲು ಕಷ್ಟವಾದರೂ ಸ್ವಲ್ಪ ಅರ್ಥ ಮಾಡಿಕೊಂಡಿ ನಿಮ್ಮ ಪದ್ಯಗಳು ಚೆನ್ನಾಗಿವೆ.

KalavathiMadhusudan said...

sogasad barvangyappa.abhinandanegalu.

Ashok.V.Shetty, Kodlady said...

ಹರ್ಷಿತ್...ಹಹಹಹ...ಲೈಕ್ ಇತ್ತ್ ನಿಮ್ ಹಾಡ ಮರ್ರೆ.....ಥ್ಯಾಂಕ್ಸ್ ...ಬತ್ತಾ ಇರಿ ಈ ಬದಿಗೆ ..

Ashok.V.Shetty, Kodlady said...

ವೈಶು,,,,ಹೌದು, ಕರ್ನಾಟಕದ ತುಂಬೆಲ್ಲಾ ಕನ್ನಡವನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ...ಎಲ್ಲಾ ಕಡೆಯಲ್ಲಿಯೂ ಇಂತಹ ಜನಪದ ಸಾಹಿತ್ಯಗಳಿರಬಹುದು...ನಮ್ಮ ಭಾಷೆ ಮತ್ತು ಸಾಹಿತ್ಯವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ಸುಂದರ ಪ್ರತಿಕೀಯೆಗೆ ಧನ್ಯವಾದಗಳು....

Ashok.V.Shetty, Kodlady said...

ಶಿವು ಸರ್...ಬೇರೆಯವರಿಗೆ ಓದಲು ಸ್ವಲ್ಪ ಕಷ್ಟ ಆಗುತ್ತೆ...ಆದರೆ ಅರ್ಥ ಆಗುತ್ತೆ....ಪ್ರತಿಕ್ರೀಯೆಗೆ ಧನ್ಯವಾದಗಳು...

Ashok.V.Shetty, Kodlady said...

@ ಕಲರವ...ಧನ್ಯವಾದಗಳು ಮೇಡಂ