ಡೈರಿಯ ಪುಟಗಳಲಿ ನಾ ಸತ್ಯ ಬರೆದು
ನನ್ನಾಕೆ ಓದಿದಳು ಪುನಃ ತೆರೆದು ತೆರೆದು
ಡೈರಿಯಾಯಿತೇ ವೈರಿ ನೀ ಹೋದೆ ತೊರೆದು
ಇನ್ನು ಯೋಚಿಸುತಿರುವೆ ತಲೆ ಕೆರೆದು ಕೆರೆದು
ಎಲ್ಲವನು ಬರೆದಿದ್ದೆ ಉಳಿದಿಲ್ಲ ಗುಟ್ಟು
ನಾ ನಿನ್ನ ಪೂಜಿಸಿದ್ದೆ ಹೃದಯದಲಿ ಇಟ್ಟು
ನಿ ಏಕೆ ಹೋದೆ ನನ್ನನ್ನು ಬಿಟ್ಟು
ಎಲ್ಲಿ ದೂರಾಗಿವುವೆ ಏಕಾಂಗಿಯಾಗಿಟ್ಟು
ಅದೇನು ಓದಿದೆ ನೀ ನನ್ನ ಡೈರಿಯಲ್ಲಿ
ಹೇಳಬಾರದೇ ನನಗೆ ನೇರ ಮಾತಿನಲ್ಲಿ
ಮುಚ್ಚಿಟ್ಟುಕೊಂಡಿರುವುದೇನು ಮನಸ್ಸಿನಲ್ಲಿ
ಭರವಸೆ ಇಲ್ಲವೇ ನನ್ನ ಪ್ರೀತಿಯಲ್ಲಿ
ನಿನ್ನ ಪ್ರೀತಿಯ ಸಾಗರದಲ್ಲಿ ಹರುಷದಿ ತೇಲಿದೆ ಅಂದು
ನಿನ್ನಗಲಿಕೆಯ ವಿರಹದ ನೋವಿನಲ್ಲಿ ಬೆಂದಿರುವೆ ಇಂದು
ಮುನಿಸಬಿಟ್ಟು ಆಸರೆಯಗಬಾರದೆ ಬಳಿ ಬಂದು
ದೂರ ಹೋಗಬಿಡೆನು ನಾ ನಿನ್ನ ಎಂದೆಂದೂ
ಅಶಾಂತಿ ಮೋಡಗಳು ಮನ ಮಂಡಲದಲ್ಲಿ
ಚಿಂತೆಯ ಅಲೆಗಳು ಚಿತ್ತ ಸಾಗರದಲ್ಲಿ
ಕಂಬನಿ ಹೆಪ್ಪುಗಟ್ಟಿದೆ ಕಣ್ಣಾಲಿಗಳಲ್ಲಿ
ಎಲ್ಲವೂ ಶೂನ್ಯ ಆಸರೆಯಿಲ್ಲದ ಈ ಬದುಕಿನಲ್ಲಿ
2 comments:
nannake, nee ebur obre thane...........
hoon obrene.....
Post a Comment