Thursday, December 17, 2009

ಪ್ರೀತಿ- ವಿರಹ


ಪ್ರೀತಿಯಾಗಿದೆ ಬರಿ ಒಣ ಹಿಂಸೆ ನನಗೀಗ
ಕನಸಿನ ಗೋಪುರವು ನುಚ್ಚು ನೂರದಾಗ
ಪ್ರೀತಿಯ ಉರಿಯಲಿ ಕೈ ಸುಟ್ಟುಕೊಂಡರು
ಒಬ್ಬನೇ ನಾನಲ್ಲ ಇಹರಿಲ್ಲಿ ಹಲವರು


ಪ್ರೀತಿಯ ಧಾರೆಯ ನನಗಾಗಿ ಕೊಟ್ಟರು
ಕೊಟ್ಟಿಲ್ಲ ಅವರು ಕೊಟ್ಟಂತೆ ನಟಿಸಿದರು
ಒಮ್ಮೆ ಕೊಟ್ಟವರು ಮತ್ತೊಮ್ಮೆ ಕಸಿದರು
ಬದುಕೆಂಬ ಗಾಡಿಯ ಗಾಲಿಯನೆ ಕಿತ್ತರು


ಪದಗಳ ಪೋಣಿಸಿ ಪದ್ಯ ಬರೆಯಲಾರೆ
ಅಕ್ಷರಗಳ ಜೋಡಿಸಿ ಪತ್ರ ಬರೆಯಲಾರೆ
ಪಲ್ಲವಿಯ ಮರೆತಿರುವೆ ನಾ ಹಾಡಲಾರೆ
ವಿರಹದ ಬೇನೆಯನು ನಾ ತಡೆಯಲಾರೆ


ನನಗೆ ಬೇಕಾಗಿಲ್ಲ ನೋಟಿನ ಕಂತೆ
ಹಗಲಿರುಳು ಕೇವಲ ನಿನ್ನದೇ ಚಿಂತೆ
ನಿನ್ನ ನೆನಪಲಿ ದೇಹ ಕೃಶವಾಗುತಿಹುದು
ಅಗಲಿಕೆಯ ಬೆಂಕಿಯಲಿ ಬೆಂದು ಹೋಗಿಹುದು

ನಾ ಹೇಗೆ ಕಳೆಯಲಿ ಈಗ ಏಕಾಂತವನ್ನು
ಹೇಗೆ ಮರೆಯಲಿ ಹೃದಯದೊಡನಾಟವನ್ನು
ಹೇಗೆ ತಣಿಸಲಿ ಈಗ ಪ್ರೀತಿಯ ದಾಹವನು
ನುಂಗಿ ಸಾಕಗಿಹುದು ಕಣ್ಣೀರ ಹನಿಗಳನು

ನನ್ನ ಮನದಂಗಳದ ಹೂದೋಟ ನೀನು
ಹೃದಯ ಪುಟದಲ್ಲಿರುವ ಚಿತ್ತಾರ ನೀನು
ನನ್ನ ಮನದರಮನೆಯ ಮಹಾರಾಣಿ ನೀನು
ನೀನಿಲ್ಲದ ಬದುಕು ಬದುಕಿ ಫಲವೇನು ?


ಹೇಳುವದು ಬಹಳವಿದೆ ಹೇಳಲಾಗುವುದಿಲ್ಲ
ಹೇಳದೆ ಉಳಿದದ್ದು ಎದೆಯಲಿ ಲೆಕ್ಕವಿಲ್ಲ
ಕಣ್ಣುಗಳು ಕಾದಿವೆ ನಿ ಬರುವ ಹಾದಿಯ
ವಿರಹದ ನೋವಲ್ಲಿ ಬಿರಿದಿಹುದು ಹೃದಯ

ದಿನೇ ದಿನೇ ಕಾಡುತಿವೆ ಬಗೆ ಬಗೆಯ ಕನಸು
ನೀ ಬಳಿ ಇದ್ದಿರೇ ಬದುಕೆಸ್ಟು ಸೊಗಸು
ಬಿಟ್ಟು ಬಾರೆಲೇ ಬಳಿಗೆ ನಿನ್ನೆಲ್ಲ ಮುನಿಸು
ಬಳಿಗೆ ಬಂದು ನನ್ನ ಜೀವವ ಉಳಿಸು

6 comments:

Unknown said...

Super bond of love & emotion..simply nice...

Ashok.V.Shetty, Kodlady said...

Thanks....

Shamita Shetty said...

What a feelings...i liked i very much....Keep on writing....Thank u...

Unknown said...

varnane maadalu padagale illa....simply superbbbbbbbbbbbbb.....good lyrics.........

ಗೆಳತಿ said...

Tumba Arthapurnavagide, excelllent poem, thanks brother

Ashok.V.Shetty, Kodlady said...

Shamita, Arun, gELATHI...Thank u very much....