Thursday, September 9, 2010

ನೋವು ಬೆಳಕಾಗಬೇಕು

ಎಂಜಲೆಲೆಗಳನ್ನು ಬೀದಿಗೆಸೆದಾಗ ಹಲವಾರು ನಾಯಿಗಳು ಮುತ್ತಿಕೊಳ್ಳುತ್ತವೆ. ಬಲಿಷ್ಠ ನಾಯಿಯು ದುರ್ಬಲ ನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಒಂದುವೇಳೆ ಎಲ್ಲ ನಾಯಿಗಳು ಸಮಬಲವಾಗಿದ್ದರೆ ಹೋರಾಟಕ್ಕಿಳಿಯುತ್ತವೆ.ಬೆಳೆದ ನಾಯಿಗಳ ಮಧ್ಯೆ ಕೃಶವಾಗಿರುವ ಮರಿನಾಯಿಯ ಪಾಡಂತೂ ಹೇಳತೀರದು. ಎಲ್ಲ ನಾಯಿಗಳಿಂದ ಕಚ್ಚಿಸಿಕೊಂಡು ಓಡಿಹೋಗಿ ಬೀದಿಯ ಒಂದು ಬದಿಯಲ್ಲಿ ಕುಳಿತುಕೊಳ್ಳುತ್ತದೆ. ಎಲ್ಲ ನಾಯಿಗಳು ಎಂಜಲೆಲೆಯನ್ನು ನೆಕ್ಕಿ ಹೊರಟುಹೋದ ಮೇಲೆ ಈ ನಾಯಿಮರಿ ಅಳುಕಿನಿಂದ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತ ಎಂಜಲೆಲೆ ರಾಶಿ ಹತ್ತಿರ ಹೋಗುತ್ತದೆ. ಆದರೆ ಅಲ್ಲೇನಿದೆ?? ಬರಿ ಎಲೆ ಮಾತ್ರ. ಒಂದು ಅಗುಳೂ ಇಲ್ಲ. ಆದರೂ ಆ ಎಲೆಗಳನ್ನು ನೆಕ್ಕಿ ತೃಪ್ತಿಪಡುತ್ತದೆ. ಇದು ಒಂದುದಿನದ ಕಥೆಯಲ್ಲ. ದಿನ ದಿನವೂ ಅನುಭವಿಸುವ ಗೋಳು. ಹೀಗೆಯೇ ಕೆಲವು ದಿನ ಕಳೆಯುತ್ತದೆ. ಮರಿನಾಯಿ ಬೆಳೆದು ಬಲಿಷ್ಠವಾಗುತ್ತದೆ. ಮುಂಚೆ ಬಲಶಾಲಿಯಾಗಿದ್ದ ನಾಯಿಗಳು ದುರ್ಬಲವಾಗುತ್ತವೆ.ಈಗ ಈ ನಾಯಿಯ ಪ್ರಭುತ್ವ. ಮುದಿನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಮರಿನಾಯಿಗಳನ್ನು ಹತ್ತಿರ ಸೇರಿಸುವುದೇ ಇಲ್ಲ. ಹಿಂದೊಮ್ಮೆ ತಾನು ಮರಿಯಾಗಿದ್ದಾಗ ಪಟ್ಟ ಬವಣೆಗಳನ್ನು ಅದು ನೆನೆಯುವುದೇ ಇಲ್ಲ. ತನ್ನ ಈ ಪ್ರಾಯ, ಸಾಮರ್ಥ್ಯ ಶಾಶ್ವತವೆಂದೇ ತಿಳಿದು ಕ್ರೂರವಾಗಿ ವರ್ತಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಇದು ಸಾಮಾನ್ಯ. ಅಲ್ಲಿ ತಪ್ಪು ಒಪ್ಪುಗಳ ಚಿಂತನೆಗೆ ಸ್ಥಳವಿಲ್ಲ.ಪ್ರಾಣಿಗಳಿಗೆ ನ್ಯಾಯ,ನೀತಿ, ಧರ್ಮಗಳ ಸೂತ್ರಗಳು ಅನ್ವಯಿಸುವುದಿಲ್ಲ.
ಇದೆ ಮಾತನ್ನು ನಾವು ಮನುಕುಲದ ಬೇಗೆಗೆ ಹೇಳಲು ಸಾಧ್ಯವಿಲ್ಲ ಏಕೆಂದರೆ ಮಾನವ ಬ್ರಹ್ಮನ ಸರ್ವ ಶ್ರೇಷ್ಠ ಸೃಷ್ಟಿ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಸಾಗುತ್ತಿರುವ ವಿಕಾಸ ಜೀವಿ. ಹೀಗೆ ಹೇಳಿಕೊಂಡು ನಮ್ಮ ಭುಜಗಳನ್ನು ತಟ್ಟಿಕೊಳ್ಳಬಹುದು. ಆದರೆ ನಿಜಸ್ಥಿತಿ ಬೇರೆಯೇ ಇದೆ. ನಮ್ಮ ವರ್ತನೆ ಹಲವಾರು ಸಂದರ್ಭಗಳಲ್ಲಿ ನಾಯಿಯ ನಡತೆಗಿಂತ ಹೀನವಾಗಿರುತ್ತದೆ.ಸೊಸೆಯಾಗಿದ್ದಾಗ ಕಣ್ಣೀರಲ್ಲಿ ಕೈ ತೊಳೆಯುವ ಹೆಣ್ಣು ಅತ್ತೆಯ ಪಟ್ಟಕ್ಕೆ ಬಂದಾಗ ತನ್ನ ಸೊಸೆಗೆ ಇಲ್ಲದ ಕಿರುಕುಳ ಕೊಡುತ್ತಾಳೆ. ಶೂದ್ರಾತಿ ಶೂದ್ರನಾಗಿದ್ದವನು ಇನ್ನೊಂದು ಜಾತಿಗೆ ಮತಾಂತರಗೊಂಡಾಗ ತಾನು ಬಿಟ್ಟು ಬಂದ ಜಾತಿಯವರನ್ನು ಹೀಯಾಳಿಸುತ್ತಾನೆ. ಚುನಾವಣೆಗಳಲ್ಲಿ ಸೋತು ಕೊರಗಿಹೊಗಿದ್ದ ವ್ಯಕ್ತಿಯೊಬ್ಬನು ಅದೃಷ್ಟವಶದಿಂದ ಪಟ್ಟಕ್ಕೆ ಬಂದಾಗ ಸೋತ ಅಭ್ಯರ್ಥಿಯೆದುರು ಮೀಸೆ ತಿರುವುತ್ತಾನೆ.
 
ದಿನ ದಿನವೂ ಹೊಡೆತ ಬಡಿತದಲ್ಲೇ ಕಾಲ ನೂಕಿದ ಬಾಲಕಾರ್ಮಿಕರು ತಾವು ಬೆಳೆದು ದೊಡ್ಡವರಾದ ಮೇಲೆ ಬಾಲ ಕಾರ್ಮಿಕರನ್ನು ದಂಡಿಸುತ್ತಾರೆ. ಗುಲಾಮನು ಒಡೆಯನಾದ ಮೇಲೆ ಇತರರನ್ನು ಗುಲಾಮನಂತೆ ಕಾಣುತ್ತಾನೆ. ಕುರುಡನಿಗೆ ಪಟ್ಟ ಕಟ್ಟಿದರೆ ಅವನು ಇತರರ ಕಣ್ಣು ಕೀಳಿಸುತ್ತಾನೆ. ನಾವು ಏಕೆ ಹೀಗೆ ಮಾಡುತ್ತೇವೆ? ಇದಕ್ಕೆ ಏನು ಕಾರಣ? ನಾವು ಹಿಂದೆ ಅನುಭವಿಸಿದ ಕಷ್ಟಗಳೇ ಮುಂದೆ ಸೇಡಾಗಿ ರೂಪುಗೊಳ್ಳುವುದೇ ಇದಕ್ಕೆ ಕಾರಣ. ಇದು ತಪ್ಪು. ನಾವು ಪಟ್ಟ ಕಷ್ಟಗಳಿಂದ ನಮ್ಮ ಹೃದಯ ಪಕ್ವವಾಗಬೇಕು., ಮೃದುವಾಗಬೇಕು, ಮಾಗಿದ ಹಣ್ಣಾಗಬೇಕು. ಆಗ ನಾವುಂಡ ನೋವು ನಮಗೆ ಬೆಳಕಾಗುತ್ತದೆ. ಈ ಬೆಳೆಕಿನಿಂದ ಇತರರ ಬದುಕನ್ನು ಬೆಳಗಿಸಬಹುದು. ಇಲ್ಲದಿದ್ದರೆ ನಾವು ನಾಯಿಗಿಂತ ಕಡೆ.

36 comments:

Anonymous said...

Asha thumba chennagide...

- ಕತ್ತಲೆ ಮನೆ... said...

ಚೆನ್ನಾಗಿದೆ..
ಘೋರ ಸತ್ಯಗಳನ್ನು ಚೆನ್ನಾಗಿ ಬಿಂಬಿಸಿದ್ದೀರಿ..
"ವಿದ್ಯಾರ್ಥಿಯಾದವನು ತಾನೂ ಶಿಕ್ಷಕನಾದಾಗ ತಾನು ಅನುಭವಿಸಿದ್ದನ್ನೇ ಅವನ ವಿದ್ಯಾರ್ಥಿಗಳಿಗೆ ಧಾರೆಯೆರೆಯುವುದು.."

naveen said...

asha thumba chennagide balakarmikaru hege dina nithya novu anubhavisuthidare antha naaeya mukala thilsidra.......

naveen said...

asha thumba chennagide balakarmikaru hege dina nithya novu anubhavisuthidare antha naaeya mukala thilsidra.......

ಕಣ್ಣು ತೆರೆದು ಕಾಣುವ ಕನಸೇ ಜೀವನ said...

ಭಾವನೆಗಳ ಮತ್ತು ಭಾಂದವ್ಯಗಳ ಸಂಗಮ....

Pradeep Rao said...

ನಿಮ್ಮ ಮಾತು ಜಗತ್ ಸತ್ಯಗಳನ್ನು ಬಿಂಬಿಸುತ್ತವೆ.. ಇಂತಹುದೇ ಇನ್ನೊಂದು ಸನ್ನಿವೇಶ ನೆನಪಾಯಿತು.. ಅಪ್ಪ ಮಧ್ಯವಯಸ್ಕನಾಗಿದ್ದಾಗ ಮಗ ಚಿಕ್ಕವನಾಗಿದ್ದಾಗ ಸಿಟ್ಟು ಬಂದರೆ ಬಯ್ಯುತ್ತಾರೆ.. ಹೆಚ್ಚಿಗೆ ಗಲಾಟೆ ಮಾಡಿದರೆ ಹಿಡಿದು ಬಾರಿಸುತ್ತಾರೆ.. ಆದರೆ ಅದೇ ಮಗ ದೊಡ್ಡವನಾಗಿ ಮುದಿ ತಂದೆಯನ್ನು ನೋಡಿಕೊಳ್ಳುವಾಗ "ನನಗೆ ಸಮಯವಿಲ್ಲ" ಎಂದು ರೇಗುತ್ತಾನೆ.. ತಂದೆ ಮೂಕನಾಗಿರಬೇಕಾಗುತ್ತದೆ.. ಎಂಥ ವಿಪರ್ಯಾಸವಲ್ಲವೆ..

ashokkodlady said...

@ ಕತ್ತಲೆ ಮನೆ.

ಹಿಂದೆ ಎಲ್ಲೋ ಓದಿದ್ದೆ. ಅದನ್ನೇ ವಿಸ್ತರಿಸಿ ನಿಮ್ಮೆಲ್ಲರ ಮುಂದಿಟ್ಟಿದ್ದೀನಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ashokkodlady said...

@ ನವೀನ್,

ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ಹೀಗೆ ಬರುತ್ತಾ ಇರಿ.

ashokkodlady said...

@ ಸ್ನೇಹ....

ನಿಮ್ಮ ಚಿಕ್ಕ ಅರ್ಥಗರ್ಭಿತ ಪ್ರತಿಕ್ರೀಯೆಗೆ ಧನ್ಯವಾದಗಳು.

ashokkodlady said...

@ ಪ್ರದೀಪ್,

ಉತ್ತಮ ಉದಾಹರಣೆ ಕೊಟ್ಟಿದ್ದಿರಿ...ಧನ್ಯವಾದಗಳು.

sunaath said...

ಈ ಜಗತ್ತು ವಿಪರ್ಯಾಸಗಳಿಂದ ಕೂಡಿದೆ ಎನ್ನುವದನ್ನು ಸೊಗಸಾಗಿ ಬಿಂಬಿಸಿದ್ದೀರಿ.

ashokkodlady said...

ಸುನಾಥ್ ಸರ್,

ನೀವು ನನ್ನ ಬ್ಲಾಗ್ ಗೆ ಬಂದು ಪ್ರತಿಕ್ರೀಯೆ ನೀಡಿದ್ದು ತುಂಬಾ ಸಂತೋಷವಾಯಿತು. ಧನ್ಯವಾದಗಳು ಸರ್....

ಪ್ರವೀಣ್ ಭಟ್ said...

Very tru Ashok.. tumba tumba chennag helidri...

navella manaveeyathe maretu pashutvada kadege hogta iddevi.. belaku andkondu.. kattalige nugta iddevi... very very true... ista aythu

pravi

Sneha said...

Very Meanigful articale...Tumbaa Chennagide, ellavu nija, vaastavda nija chitrana....Thank u...

Shamita said...

Good article..tumba arthapurnavaagide.

ashokkodlady said...

@ ಸ್ನೇಹಾ....

ನಿಮ್ಮ ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು...ಹೀಎಗೆ ಬರ್ತಾ ಇರಿ....

ashokkodlady said...

@ ಶಮಿತಾ...ಧನ್ಯವಾದಗಳು....

ಸೀತಾರಾಮ. ಕೆ. / SITARAM.K said...

This is the irony of life.
ಮಾನವ ಬದುಕಿನ ವಿಪರ್ಯಾಸದ ಕ್ಷಣಗಳನ್ನ ಮಾರ್ಮಿಕವಾಗಿ ಬಿಂಬಿಸಿದ್ದಿರಾ...
ಧನ್ಯವಾದಗಳು.

ದಿನಕರ ಮೊಗೇರ.. said...

arthagarbhita maatugaLu sir....
tumbaa chennaagi barediddiraa...

ashokkodlady said...

ಸೀತಾರಾಂ ಸರ್,

ಧನ್ಯವಾದಗಳು....

ashokkodlady said...

ದಿನಕರ ಸರ್....

ಧನ್ಯವಾದಗಳು...

ಮನಮುಕ್ತಾ said...

ಇತ್ತಿಚೆಗೆ ಎಲ್ಲೆಡೆ ಜಾಸ್ತಿ ಕಾಣಸಿಗುತ್ತಿರುವ ಅ೦ಶಗಳನ್ನು ತು೦ಬಾ ಚೆನ್ನಾಗಿ ತಿಳಿಸಿದ್ದೀರಿ.
ನನ್ನ ಬ್ಲಾಗಿಗೆ ಬ೦ದು ನಿಮ್ಮ ಚೆ೦ದದ ಅನಿಸಿಕೆಗಳನ್ನು ತಿಳಿಸಿರುವುದಕ್ಕೆ ಧನ್ಯವಾದಗಳು.ನನ್ನ ಬ್ಲಾಗಿಗೆ ಸದಾ ಸ್ವಾಗತ.

ಸಾಗರದಾಚೆಯ ಇಂಚರ said...

ಸರ್

ತುಂಬಾ ಚೆನ್ನಾಗಿದೆ ಬರಹ

ಮೊದಲ ಭೇಟಿಯಲ್ಲೇ ಸುಂದರ ಬರಹ

ವಿ.ಆರ್.ಭಟ್ said...

ಜನಜೀವನ ಬಗ್ಗೆ ಇವತ್ತಿನ ವಸ್ತವಿಕತೆಯನ್ನು ಬರೆದಿದ್ದೀರಿ, ಹಲವು ವಿಪರ್ಯಾಸಗಳನ್ನು ತನ್ನ ಒಡಲೊಳಗೆ ಅಳವಡಿಸಿಕೊಂಡು ಬದುಕುತ್ತಿರವುದೇ ಇಂದಿನ ಜೀವನ!-ಇದೇ ಒಂದು ವಿಪರ್ಯಾಸ, ಲೇಖನ ಚೆನ್ನಾಗಿದೆ

ashokkodlady said...

ಮನಮುಕ್ತ ಮೇಡಂ ...

ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು...ಹೀಗೆ ನಿಮ್ಮ ಸಹಕಾರ ಮುಂದುವರಿಯಲಿ..

ashokkodlady said...

ಗುರು ಸರ್...

ಧನ್ಯವಾದಗಳು...ನಿಮ್ಮ ಪ್ರತಿಕ್ರೀಯೆ ಖುಷಿ ಕೊಟ್ಟಿತು. ನನ್ನ ಬ್ಲಾಗ್ ಗೆ ಸ್ವಾಗತ....

ashokkodlady said...

ಭಟ್ರೇ,

ನಿಮಗೆ ಲೇಖನ ಇಷ್ಟವಾದದ್ದು ಕೇಳಿ ಸಂತೋಷವಾಯಿತು.Dhanyavadagalu..

ವನಿತಾ / Vanitha said...

ಜಗತ್ತಿನ ವಿಪರ್ಯಾಸವನ್ನು ಚೆನ್ನಾಗಿ ಬರೆದಿದ್ದೀರಿ..ಆದರೆ ನನ್ನ PhD Guideಅವರ ಬಾಸ್ ತುಂಬಾ ಸ್ಟ್ರಿಕ್ಟ್ ಅಂತೆ, ಅದ್ಕೆ ಅವ್ರು ಯಾವಾಗಲೂ ಹೇಳ್ತಿದ್ದರು "ನಾನು ನನ್ನ studentsಗಳಿಗೆ ಯಾವಾಗಲೂ friendlyಯಾಗಿರ್ತೇನೆ" ಎಂದು!

ಬೊಕ್ಕ ಯಾನ್ ಎನ್ನ ಮಾಮಿನ ಮೋಕೆದ ಮರ್ಮಾಲ್:-)

nimmolagobba said...

ಲೇಖನ ಓದುಗರ ಕಣ್ಣು ತೆರೆಸುವಂತಿದೆ . ನಾಯಿಗಳಿಗಿಂತ ಕೆಟ್ಟದಾಗಿ ಅಂಥಾ ಬರೆದಿದ್ದೀರಿ ಆದ್ರೆ ನಾಯಿಗಳಿಗೆ ಮಾತು ಬಂದಿದ್ದರೆ??? ಮನುಷ್ಯರ ಕಥೆ ಹೇಗಿರ್ತಿತ್ತು ??ಆಲ್ವಾ .ಉತ್ತಮ ನಿರೂಪಣೆ . ಗುಡ್

Badarinath Palavalli said...

1. bahala vicharavantha baraha sir. mumbai yanthrikathe nimmannu yanthra madilla annuvudhakke idhe sakshi
2. nanna blogge bandhu comment madidhri thanx sir. eegalu bengaluru hage idhe, adhakke hale kavanavanne mathe post madidhe
3. again i will come back to ur blog for older posts

ashokkodlady said...

ವನಿತಕ್ಕ,
ನನ್ನ ಬ್ಲಾಗ್ ಗೆ ಸ್ವಗತ , ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು. ನೀವು ಹೇಳಿದ್ದು ಸರಿ ಎಲ್ಲರೂ ಒಂದೇ ತರ ಇರೋಲ್ಲ ನೋಡಿ. ಖುಷಿ ಆಂಡ್ ಈರನ ಮಾತ್ ಕೆಂದ್..

ashokkodlady said...

ಬಾಲು ಸರ್,.

ನಿಮ್ಮ ಸುಂದರ ಪ್ರತಿಕೀಯೆಗೆ ಧನ್ಯವಾದಗಳು. ಹೀಗೆ ಬರ್ತಾ ಇರಿ .

ashokkodlady said...

ಬದ್ರಿ ಸರ್ ,

ಧನ್ಯವಾದಗಳು, ನಿಮ್ಮಂತ ಬ್ಲಾಗ್ ಸ್ನೇಹಿತರ ಗೆಳೆತನವೇ ಇದಕ್ಕೆಲ್ಲ ಕಾರಣ, ಹೀಗೆ ಬರ್ತಾ ಇರಿ.

Doddamanimanju said...

ಚಂದದ ಲೇಖನ ಚನ್ನಾಗಿದೆ ಮುಂದುವರೆಯಲಿ ;)

ಗೋಪಾಲ್ ಮಾ ಕುಲಕರ್ಣಿ said...

ಸೂಪರ್.. ತುಂಬಾ ಚೆನ್ನಾಗಿದೆ.

prabhamani nagaraja said...

ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.