Saturday, December 26, 2009

ಅನಾಥೆ


ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಹಿಂದಿನ ಜನ್ಮದಲಿ ನಾ ಮಾಡಿರಬಹುದಾದ
ಘೋರ ಪಾಪಗಳ ಫಲವೋ
............................... ಹಡೆದ ತಾಯಿಗೆ ಬೇಡವಾಗಿ ಜನಿಸಿದೆ ನಾನು


ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ
ತಿಪ್ಪೆಯಿಂದೆತ್ತಿ ತಂದು ಸಂಭಂದ
ಬೆಸೆದ ಪುಣ್ಯಾತ್ಮರು ಯಾರೋ
ಹಸಿದಿರಲು ಹೊಟ್ಟೆ ಬಾಯಿಗೆ
ತುತ್ತು ಇಟ್ಟವರು ಯಾರೋ
ತುಂಡು ಬಟ್ಟೆಯ ಉಡಲು
ಕೊಟ್ಟವರು ಯಾರೋ
.................................. ರಸ್ತೆ ಬದಿಗಳಲಿ ಕಸ ಹೆಕ್ಕುತಿರುವೆ ನಾನು


ದೀಪಾವಳಿ, ಕ್ರಿಸ್ಮಸ್ , ರಂಜಾನ್ ಗಳೆಂಬಾ
ಹಬ್ಬಗಳು ನನಗಿಲ್ಲ
ಹೊಸವರುಷ, ಹೊಸಹರುಷ ಹೊಸ ಉಡುಪುಗಳಾ
ನಾನಿನ್ನು ನೋಡಿಲ್ಲ
ಭೂತ, ವರ್ತಮಾನ, ಭವಿಷ್ಯಗಳ
ಚಿಂತೆಯು ನನಗಿಲ್ಲ
ಕೊಲೆ ಸುಲಿಗೆ ದರೋಡೆಗಳ
ಭಯವಂತೂ ನನಗಿಲ್ಲ
..............................ಹೊಟ್ಟೆ ತುಂಬಾ ಉಂಡರೆ ಹಬ್ಬ ಎಂದುಕೊಂಡವಳು ನಾನು

ಮಳೆ ಗಾಳಿ ಬಿಸಿಲ ತಡೆದು ರಕ್ಷಣೆ ಕೊಡಲು
ನನಗೊಂದು ಸೂರಿಲ್ಲ
ಕಷ್ಟ ಕಾಲದಿ ಒದಗೋ ನೆಂಟರು ಬಂದು ಬಳಗ
ನನಗಿಂದು ಯಾರಿಲ್ಲ್ಲ
ವಿದ್ಯೆಯನು ಕೊಟ್ಟು ಬುದ್ದಿ ಕಲಿಸುವಂಥ
ಗುರುವೆಂಬುವವರಿಲ್ಲ
ಬಿಡುವಿನ ವೇಳೆಯಲಿ ಜೊತೆ ಆಡಲು ನನಗೆ
ಗೆಳೆತಿಯರೆಂಬುವರಿಲ್ಲ
...............................ದಿಕ್ಕು ದೆಸೆಯಿಲ್ಲದ ಅಲೆದಾಡುತಿರುವ ಅನಾಥೆ ನಾನು

Friday, December 18, 2009

ಕವನ ಪ್ರಪಂಚಕವನ ಪ್ರಪಂಚದ ಎಲ್ಲ ಕವಿ ಬಾಂಧವರಿಗೆ ಹೃದಯಪೂರ್ವಕ ನಮನಗಳು .....ನಿಮಗಾಗಿ ಈ ಪುಟ್ಟ ಕವನ .....


ಕವನಗಳ ಬರೆಯಲು ನಾನೇನು ಕವಿಯೇ ?
ನಿಮ್ಮಗಳ ಎದುರಿಗೆ ನಾನೊಂದು 'ಇರುವೆ'
ನಿಮ್ಮಯ ಕವನಗಳ ಸವಿದೆ ಮನದಣಿಯೆ
ಹೋಗುತಿರಿ ಮುಂದೆ ನೀವ್ ನಾ ಹಿಂದೆ ಬರುವೆ

ದಿನೇ ದಿನೇ ಬರುತಿದೆ ಕವಿಗಳ ದಂಡು
ಬಗೆ ಬಗೆ ಕವಿತೆಗಳ ಹಿಂಡು ಹಿಂಡು
ಅಪರಿಮಿತ ಸಂತೋಷ ಹೊಸಬಗೆಯ ಕಂಡು
ಮನಕಿಹುದು ಶಾಂತಿ ಮಲಗಿದರೆ ತಿಂದುಂಡು

ಮನದಲ್ಲಿ ಮುದವು ಮನೆ ಮಾಡಿ ಕೊಂಡಿಹುದು
ನಿಮ್ಮೆಲ್ಲ ಕವಿತೆಗಳ ಮೆಲುಕು ಹಾಕುತಿಹುದು
ಧನ್ಯನಾದೆನು ಇಂದು ನಿಮ್ಮೆಲ್ಲರ ಜೊತೆಗೆ
ಸಾಟಿ ಎಲ್ಲಿದೆ ನಿಮ್ಮ ಅಗಾಧ ಕಲೆಗೆ

ಬರೆಯಬೇಕೆಂದಿರುವೆ ಮಹಾ ಕವಿತೆ ಇಲ್ಲಿ
ನೀವ್ ಹೀಗೆ ಬರೆಯುತಿರೆ ಪದಗಳೇ ನನಗೆಲ್ಲಿ
ಬರೆಯಬೇಕೆಂದಿರುವೆ ಎಲ್ಲರಿಗು ಮೊದಲು
ನಿಮ್ಮದೇ ಸಾಲುಗಳ ಮಾಡಿ ಅದಲು-ಬದಲು

ನಮ್ಮ ನಿಮ್ಮ ಬಾಂಧವ್ಯ ಹಸಿರಾಗಿ ಇರಲಿ
ಸ್ನೇಹದ ಕಡಲು ಎಂದೂ ಬತ್ತದಿರಲಿ
ನಿಮ್ಮಿಂದ ಹೆಚ್ಚು ಹೆಚ್ಚು ಕವನಗಳು ಬರಲಿ
ಎಲ್ಲರ ಮನಕೂ ಮುದವನ್ನು ತರಲಿ

ನನ್ನ ಒಲವಿನ ಕಥೆ


ಒಲವಿನ ಕಥೆ ಎನ್ನ ವ್ಯಥೆಯಾಗಿದೆ
ಮನದ ಭಾವನೆಗಳೆಲ್ಲ ವಿಕೃತವಾಗಿವೆ
ಒಲವಿನ ಹಾದಿಯು ಕವಲೊಡೆಡಿದೆ
ಪ್ರೀತಿಯ ನೆನಪು ಎರಡು-ಕನಸಾಗಿದೆ
ಬದುಕಿನಲಿ ನೆಮ್ಮದಿಯು ಚುಟುಕಾಗಿದೆ
ಒಲವಿನ ಕಥೆ ಎನ್ನ ವ್ಯಥೆಯಾಗಿದೆ

ಅಲೆದು ಅರಸಿ ಈಗ ಸಾಕಾಗಿದೆ
ದಿಕ್ಕು ತೋಚದೆ ಇಂದು ದಿಗಿಲಾಗಿದೆ
ನಿನ್ನ ಮೋಹದ ಪಾಶ ಬಿಗಿಯಾಗಿದೆ
ಮೆಲ್ಲುಸಿರು ಬಿರುಗಾಳಿಯಂತಾಗಿದೆ
ಎದೆ ಬಡಿತ ಭೂಕಂಪದಂತಾಗಿದೆ
ಒಲವಿನ ಕಥೆಯೆನ್ನ ವ್ಯಥೆಯಾಗಿದೆ

ನನ್ನೆರಡು ತುಟಿಗಳಿಗೂ ಜ್ವರ ಬಂದಿದೆ
ಕಲ್ಲು ಸಕ್ಕರೆಯ ರುಚಿಯು ಕಹಿಯಾಗಿದೆ
ನೀ ಕೊಟ್ಟ ಸಿಹಿ ಮುತ್ತು ನೆನಪಾಗಿದೆ
ಬೆಚ್ಚನೆಯ ಅಪ್ಪುಗೆಯು ಬೇಕಾಗಿದೆ
ನಿನ್ನ ನೆನಪಲಿ ದೇಹ ಬಡವಾಗಿದೆ
ಒಲವಿನ ಕಥೆಯೆನ್ನ ವ್ಯಥೆಯಾಗಿದೆ

ಕಂಡೆ ಅವಳ ಕನಸ- ಹೋಯಿತು ನನ್ನ ಕೆಲಸನಾ ಕಂಡೆ ನಿನ್ನೆ 'ಬಸ್ ಸ್ಟಾಪ್ ' ನಲ್ಲಿ ನಿನ್ನ
ಮೊದಲ ನೋಟದೆ ಸೂರೆಗೊಂಡೆ ಮನವೆನ್ನ
ಇಟ್ಟಿರುವೆ ನೇರ ನನ್ನ ಹೃದಯಕ್ಕೆ ಕನ್ನ
ಕಷ್ಟವಾಗುತಿದೆ ಕಳೆಯೇ ಈ ರಾತ್ರಿಗಳನ್ನ ...

ನಿಂತೈದು ನಿಮಿಷದಿ ಬಂದಿತ್ತು ಬಸ್ಸೆನಗೆ
ಅದಬಿಟ್ಟು ನಾ ಕಾದೆ ನಿನ ಬಸ್ಸು ಬರುವರೆಗೆ
ಮನದಲ್ಲಿ ಅನಿಸಿತ್ತು ಆ ಬಸ್ಸು ಬರದಿರಲಿ
ಬಂದರೂ ಅದ್ರಲ್ಲಿ ನೀ ಹತ್ತದಂತಿರಲಿ

ಹಾಗೇನೂ ಆಗಿಲ್ಲ ನಾ ಎಣಿಸಿದಂತೆ
ಖಾಲಿ ಬಸ್ಸದು ಬಂತು ನೀ ಹತ್ತಿ ಕುಳಿತೆ
ಇನ್ನೇನು ಮಾಡುವುದು ನಾ ನೋಡುತ್ತಾ ನಿಂತೆ
ನನ್ನೆಲ್ಲಾ ಕೆಲಸಗಳ ನಾನಲ್ಲೇ ಮರೆತೆ....

ಗಟ್ಟಿಯಾಗಿ ಹಾರ್ನು ಹಾಕಿತ್ತು ಬಸ್ಸು
ತಟ್ಟನೆ ನೆನಪಾಯಿತು ನನ್ನ ಆಫೀಸು
ಬೇಗ ಬರಬೇಕೆಂದು ಹೇಳಿದ್ದ 'ಬಾಸು'
ಈವಾಗಲೇ ತಡವು ಒಂದುವರೆ ತಾಸು

ಆಫೀಸು ತಲುಪಿದ್ದೆ ಏದುಸಿರು ಬಿಡುತಾ
ಮುಂದೇನು ಗ್ರಹಚಾರ ಕಾದಿದೆಯೋ ಎನುತಾ
ಕುಳಿತಿದ್ದ ನನ ಬಾಸು ಬುಸು ಬುಸುಗುಡುತಾ
ಏನೇನೋ ಶಬ್ದಗಳ ಮನದಲ್ಲೇ ಗೊಣಗುತಾ....

ಹೊರಟೆ ಕ್ಯಾಬಿನ್ಗೆ ಹಿಡಿದು ಫೈಲುಗಳ ಕಡಿತ
ಅತಿ ವೇಗದಲ್ಲಿತ್ತು ನನ್ನ ಹೃದಯದ ಬಡಿತ
ನಾನಿಂತೆ ಅವರೆದುರು ಹುಸಿನಗೆಯ ಬೀರುತಾ
ತಡವೇಕೆ ಕೇಳಿದರು ಹುಬ್ಬು ಗಂಟಿಕ್ಕುತಾ

ಕಣ್ಮುಂದೆ ಸುಳಿದಿತ್ತು ಅವಳದೇ ಬಿಂಬ
ಹೆಣ್ಣಲ್ಲ ಅವಳು ದೇವತೆಯ ಪ್ರತಿಬಿಂಬ
ಅವಳದೇ ನಶೆಯು ಮೈ ಮನದ ತುಂಬ
ಬಲವಾಗುತಿದೆ ಬಯಕೆ ಮತ್ತೆ ನೋಡಬೇಕೆಂಬ

ಅವಳದೇ ಧ್ಯಾನದಲಿ ನಾನಾಗಿದ್ದೆ ಮಗ್ನ
'ಬಾಸ್' ನ ಕೂಗೊಂದು ತಂದಿತ್ತು ವಿಘ್ನ
ಅವ್ಯಾಚ್ಯ ಪದಗಳಿಂದ ಮಾಡಿದ್ದ ನಗ್ನ
ನನ್ನೆಲ್ಲ ನೆನಪುಗಳು ಆಗಿಹವು ಭಗ್ನ

ಹೊರಡಲಿಲ್ಲ ನನ್ನ ಬಾಯಿಂದ ನಿಜ
ಆಗಿದ್ದೆ ನಾನು ಕೆಲಸದಿಂದ 'ವಜಾ'
ಸಿಕ್ಕಿತ್ತು ನನಗೀಗ ಶಾಶ್ವತ ರಜಾ
ಮನಸ್ಸಿಗೆ ಆಗಿತ್ತು ಬೇಸರವು ಸಹಜ

Thursday, December 17, 2009

ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ
ಚಳಿಯಲ್ಲೂ ಬೇಗೆದ್ದು
ಮಸಿಯಲ್ಲಿ ಹಲ್ಲುಜ್ಜಿ
ತಂಗಳನ್ನವ ಉಂಡು ಖುಷಿ ಪಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಹರಕು ಬಟ್ಟೆಯ ತೊಟ್ಟು
ಚೀಲವ ಹೆಗಲಿಟ್ಟು
ಮನಸ್ಸಿಲ್ಲದ ಮನಸ್ಸಿಂದ ಶಾಲೆಗೋಗುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಗುರುಗಳಿಗೆ ಗಿಣಿಪಾಠವ ಕೊಟ್ಟು
ಶಭಾಶ್ ಗಿಟ್ಟಿಸಿಕೊಂಡು
ಅಮ್ಮನಿಂದ ಸಿಹಿಮುತ್ತು ಪಡೆಯುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಶಾಲೆ ಬಿಟ್ಟ ಕ್ಷಣ
ಓಡೋಡಿ ಮನೆ ಬಂದು
ಚೀಲವ ಬಿಸುಟು, ಅಮ್ಮ ನೋಡದಂತೆ ಮೈದಾನಕ್ಕೊಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಜಾತಿ ಮತ ಭೇದವಿಲ್ಲದೆ
ಗಂಡು ಹೆಣ್ಣೆಂಬ ಪರಿವಿಲ್ಲದೆ
ಎಲ್ಲರೊಂದಾಗಿ ಗೋಲಿ ಆಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಕನಸಿಂದ ಭಯಗೊಂಡು
ಕನವರಿಸಿ ಕುಳಿತಿದ್ದು
ಅಮ್ಮನಪ್ಪುಗೆಯಲ್ಲಿ ಭಯಮರೆತು ನಿದ್ರಿಸುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಆ ಕರಾಳವಾದ ಶನಿವಾರದಂದು
ನಾ ಕೂತ ರಿಕ್ಷಾಕ್ಕೆ ಬಡಿಯಿತು ಕಾರೊಂದು
ಅವಘಡವು ನಡೆದಿತ್ತು ಕ್ಷಣದಲ್ಲಿ ಅಲ್ಲೊಂದು
ತಿಳಿದಿಲ್ಲ ಎಲ್ಲರಿಗು ಕಾರಿನ brake fail ಎಂದು

ರಿಕ್ಷಾವು ಅಲ್ಲಿ ಮಗುಚಿ ಬಿದ್ದಿತ್ತು
ಚಾಲಕನು ಇನ್ನಿಲ್ಲ ಹೋಗಿದ್ದ ಸತ್ತು
ಸುತ್ತ ಮುತ್ತಲೆಲ್ಲ ವಿಷಯ ಹರಡಿತ್ತು
ಕೆಲವರು ಮಾಡಿದರು ರಂಪಾಟ ಅತ್ತು

ಅನಿಸಿತ್ತು ನನಗೆ ಸಿಡಿಲು ಬಡಿದಂತೆ
ಯಾರ್ಯಾರೋ ಬಂದು ಹೊತ್ತು ಒಯ್ದಂತೆ
ಕವರಿಸುತಿದ್ದೆ ನಾ ನಿದ್ದೆಯಲ್ಲಿದ್ದಂತೆ
ಕಣ್ ಬಿಡೇ ಕಂಡಿತು 'ಆಸ್ಪತ್ರೆ' ಯಂತೆ

ಗಂಟು ಕೀಲುಗಳಲಿ ನೋವಾಗುತಿತ್ತು
ನರ ನಾಡಿಗಳೆಲ್ಲ ಸೆಳೆಯುತ ಇತ್ತು
ಬೆನ್ನು ಮೂಳೆಗೆ ಕಲ್ಲೊಂದು ಬಡಿದಿತ್ತು
ಕೈಕಾಲುಗಳಲ್ಲಿ ರಕ್ತ ತೊಟ್ಟಿಕ್ಕುತ್ತಿತ್ತು

ಎಲ್ಲೆಲ್ಲೂ ನೋಡಿದರು ಗಾಯವಾಗಿದೆ ದೇಹ
ಮೊದಲಿನಂತಾಗುವೆನೆ ಎಂಬ ಸಂದೇಹ
ವೈದ್ಯರು ನರ್ಸುಗಳು ನಿಂತಿಹರು ಸನಿಹ
ತಪಾಸಣೆ ಚಿಕಿತ್ಸೆ ಅದು ತರಹ ತರಹ

ಆಸ್ಪತ್ರೆಯಲ್ಲಿ ರೋಗಿಗಳ ನೂಕು-ನುಗ್ಗಲು
ನೋವಾಗುತಿದೆ ನನಗೆ ಬದಲಾಯಿಸೇ ಮಗ್ಗುಲು
ಕಷ್ಟವಾಗುತಿದೆ ನನಗಿಲ್ಲಿ ಮಲಗಲು
ಆಗೊಮ್ಮೆ ಈಗೊಮ್ಮೆ ತಿಗಣೆಗಳು ಕಚ್ಚಲು

ನಾನಿರುವ ಈ ಸ್ಥಿತಿಯನ್ನು ನೋಡಿ
ನನ್ನಾಕೆ ಕಂಗಳಲಿ ಕಣ್ಣೀರ ಕೋಡಿ
ಬಹಳ ದಿನವಾಯ್ತು ಮುದ್ದು ಮಗಳನ್ನು ನೋಡಿ
ಕುಶಿಪಡುವ ಬಯಕೆಯು ಅವಳ ಮುದ್ದಾಡಿ

ಬಹುತೇಕ ಗುಣಮುಖನು ನಾನೀಗ ಆಗಿಹೆನು
ಆಸ್ಪತ್ರೆಯಿಂದ ಬಿಡುಗಡೆಯ ಪಡೆದಿಹೆನು
ನನ್ನಾಕೆ ಮನದಲ್ಲಿ ನೆಮ್ಮದಿಯ ಕಂಡಿಹೆನು
"ಕುಶಿ" ಯ ಮುದ್ದು ಮೊಗದಲ್ಲಿ ಹರುಷವ ಕಂಡಿಹೆನು (ಕುಶಿ- ನನ್ನ ಮಗಳು)

ನನಗಾಗಿ ಪ್ರಾರ್ಥಿಸಿದ ಸರ್ವರಿಗೂ ನಮನ
ಸ್ನೇಹಲೋಕದ ಎಲ್ಲಾ ಗೆಳೆಯರಿಗೂ ನಮನ
ಆರಂಭಿಸಿರುವೆ ಹೊಸದೊಂದು ಜೀವನ
ಬಹುಬೇಗ ಆಗಲಿ ನಮ್ಮ-ನಿಮ್ಮೆಲ್ಲರ ಮಿಲನ

ಸ್ನೇಹಲೋಕ

ತಿಳಿದಿರಲಿಲ್ಲ ಅಂದು ಯಾರು-ಯಾರೆಂದು
ತಿಳಿದುಕೊಂಡರು ಇಂದು ಅವರು-ಇವರೆಂದು
ಆಗೊಮ್ಮೆ ಈಗೊಮ್ಮೆ 'ಚಾಟ್ ರೂಂ' ಗೆ ಬಂದು
ಆಗುತಿದೆ ಚರ್ಚೆ ಕಷ್ಟ ಸುಖಗಳ ತಂದು
ಅನಿಸಿತಿವರಿಗೆ ಒಂದು ಹೆಸರುಬೇಕೆಂದು
ಆ ಹೆಸರು ಈ ಹೆಸರು ಚರ್ಚೆಗೆ ಬಂದು
ಕೊನೆಗೂ ಇಟ್ಟರು ಹೆಸರ "ಸ್ನೇಹಲೋಕವೆಂದು "

ಪ್ರೀತಿ- ವಿರಹ


ಪ್ರೀತಿಯಾಗಿದೆ ಬರಿ ಒಣ ಹಿಂಸೆ ನನಗೀಗ
ಕನಸಿನ ಗೋಪುರವು ನುಚ್ಚು ನೂರದಾಗ
ಪ್ರೀತಿಯ ಉರಿಯಲಿ ಕೈ ಸುಟ್ಟುಕೊಂಡರು
ಒಬ್ಬನೇ ನಾನಲ್ಲ ಇಹರಿಲ್ಲಿ ಹಲವರು


ಪ್ರೀತಿಯ ಧಾರೆಯ ನನಗಾಗಿ ಕೊಟ್ಟರು
ಕೊಟ್ಟಿಲ್ಲ ಅವರು ಕೊಟ್ಟಂತೆ ನಟಿಸಿದರು
ಒಮ್ಮೆ ಕೊಟ್ಟವರು ಮತ್ತೊಮ್ಮೆ ಕಸಿದರು
ಬದುಕೆಂಬ ಗಾಡಿಯ ಗಾಲಿಯನೆ ಕಿತ್ತರು


ಪದಗಳ ಪೋಣಿಸಿ ಪದ್ಯ ಬರೆಯಲಾರೆ
ಅಕ್ಷರಗಳ ಜೋಡಿಸಿ ಪತ್ರ ಬರೆಯಲಾರೆ
ಪಲ್ಲವಿಯ ಮರೆತಿರುವೆ ನಾ ಹಾಡಲಾರೆ
ವಿರಹದ ಬೇನೆಯನು ನಾ ತಡೆಯಲಾರೆ


ನನಗೆ ಬೇಕಾಗಿಲ್ಲ ನೋಟಿನ ಕಂತೆ
ಹಗಲಿರುಳು ಕೇವಲ ನಿನ್ನದೇ ಚಿಂತೆ
ನಿನ್ನ ನೆನಪಲಿ ದೇಹ ಕೃಶವಾಗುತಿಹುದು
ಅಗಲಿಕೆಯ ಬೆಂಕಿಯಲಿ ಬೆಂದು ಹೋಗಿಹುದು

ನಾ ಹೇಗೆ ಕಳೆಯಲಿ ಈಗ ಏಕಾಂತವನ್ನು
ಹೇಗೆ ಮರೆಯಲಿ ಹೃದಯದೊಡನಾಟವನ್ನು
ಹೇಗೆ ತಣಿಸಲಿ ಈಗ ಪ್ರೀತಿಯ ದಾಹವನು
ನುಂಗಿ ಸಾಕಗಿಹುದು ಕಣ್ಣೀರ ಹನಿಗಳನು

ನನ್ನ ಮನದಂಗಳದ ಹೂದೋಟ ನೀನು
ಹೃದಯ ಪುಟದಲ್ಲಿರುವ ಚಿತ್ತಾರ ನೀನು
ನನ್ನ ಮನದರಮನೆಯ ಮಹಾರಾಣಿ ನೀನು
ನೀನಿಲ್ಲದ ಬದುಕು ಬದುಕಿ ಫಲವೇನು ?


ಹೇಳುವದು ಬಹಳವಿದೆ ಹೇಳಲಾಗುವುದಿಲ್ಲ
ಹೇಳದೆ ಉಳಿದದ್ದು ಎದೆಯಲಿ ಲೆಕ್ಕವಿಲ್ಲ
ಕಣ್ಣುಗಳು ಕಾದಿವೆ ನಿ ಬರುವ ಹಾದಿಯ
ವಿರಹದ ನೋವಲ್ಲಿ ಬಿರಿದಿಹುದು ಹೃದಯ

ದಿನೇ ದಿನೇ ಕಾಡುತಿವೆ ಬಗೆ ಬಗೆಯ ಕನಸು
ನೀ ಬಳಿ ಇದ್ದಿರೇ ಬದುಕೆಸ್ಟು ಸೊಗಸು
ಬಿಟ್ಟು ಬಾರೆಲೇ ಬಳಿಗೆ ನಿನ್ನೆಲ್ಲ ಮುನಿಸು
ಬಳಿಗೆ ಬಂದು ನನ್ನ ಜೀವವ ಉಳಿಸು

ಅಮ್ಮ೯ ತಿಂಗಳು ನಮ್ಮನ್ನು ಹೊತ್ತವಳೇ ಅಮ್ಮ
ನೋವನ್ನು ಸಹಿಸಿ ಹೆತ್ತವಳೇ ಅಮ್ಮ
ಮಮತೆಯ ಮುತ್ತನ್ನು ಇಟ್ಟವಳೇ ಅಮ್ಮ
ಮೊದಲನೆಯ ತುತ್ತನ್ನು ಕೊಟ್ಟವಳೇ ಅಮ್ಮ
ಆಡುವ ಭಾಷೆಯ ಕಲಿಸಿದವಳೇ ಅಮ್ಮ
ನಾಡು ನುಡಿ ಪರಿಚಯವ ಕೊಟ್ಟವಳೇ ಅಮ್ಮ
ಅಳತೆ ಮೀರಿದ ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ .........ಅಮ್ಮ...

ಪರಿಸರ

ನಮ್ಮ ಸುತ್ತಲಿರುವ ಗಾಳಿ, ನೀರು, ಮರ
ಇದಕ್ಕೆ ಎನ್ನುವರು ಪರಿಸರ
ಯಾಕಿಲ್ಲ ನಿಮಗೆ ಇದರ ಮೇಲೆ ಕನಿಕರ
ನೀನೆ ಕಾಪಾಡಬೇಕು ಹರ ಹರಾ.

ಬಂದಿತೆಂದರೆ ಕಾರೊಂದು ಸಚಿವರ
ಪಟಾಕಿ ಸಿಡಿಮದ್ದುಗಳ ಅಬ್ಬರ
ಯಾಕೆ ಬೇಕು ಇಂತಹ ಸಡಗರ
ಯಾರಿಗೂ ಇಲ್ಲವೆ ಪರಿಸರದ ಮೇಲೆ ಕನಿಕರ...

ಎಲ್ಲೆಂದರಲ್ಲಿ ತಲೆ ಎತ್ತಿ ಖಾರ್ಖನೆ
ನೀಡುತಿವೆ ಪರಿಸರಕೆ ಹೊಗೆ,ಧೂಳು, ತ್ಯಾಜ್ಯವನೆ
ಕೇಳುವವರಾರಿಲ್ಲ ಪರಿಸರ ಪ್ರೇಮಿಗಳ ರೋಧನೆ
ಆಗುತಿದೆ ಮನಕೆ ಅದೆಷ್ಟೋ ವೇದನೆ

ಅರಿವಿದೆಯೇ ನಿಮಗೆ ಓಜೋನ ಪದರಗಳ
ತಡೆಯುವವು ರವಿಯ ನೆರಳಾತೀತ ಕಿರಣಗಳ
ಹೊಗೆ ಧೂಳು ಮಾಡುತಿವೆ ಪದರದಲಿ ರಂಧ್ರಗಳ
ಪಲಿತಾಮ್ಶವಿದು ಹುಟ್ಟು ಹೊಸ ಹೊಸ ರೋಗಗಳ

ಶುಭ್ರತೆಯು ಸತ್ತಿರುವ ನೀಲಿಯಾಕಾಶ
ಆಗುತಿದೆ ಜೀವಿಗಳಿಗೆ ಬಿಡಿಸಲಾಗದ ಪಾಶ
ಬುದ್ದಿಜೀವಿಗಳಿಂದ ಆಗುತಿದೆ ನಾಶ
ವಿನಾಶದೆಡೆಗೆ ನಡೆಯುತಿದೆ ದೇಶ

ರಾಜಕೀಯ
ಬಿ ಜೆ ಪಿ , ಕಾಂಗ್ರೆಸ್ಸು, ಜೆ ಡಿ ಎಸ್, ಅಲ್ಲಲ್ಲಿ
ಬಿ ಎಸ್ ಪಿ, ಜೆ ಡಿ ಯು ಬಹುಪಕ್ಷ ನಮ್ಮಲ್ಲಿ
ಕೈ ಮುಗಿದು ಬರುವವರು ಮನೆ ಮನೆ ಬಾಗಿಲಲ್ಲಿ
ಮತದಾನ ನಂತರ ಅದ್ರಶ್ಯರಾಗುವರೆಲ್ಲಿ ?

ಪೊಳ್ಳು ಭರವಸೆಗಳ ಸರಮಾಲೆ ಇಲ್ಲಿ
'ಪ್ರಣಾಳಿಕೆ' ಎಂಬ ಭಿತ್ತಿಪತ್ರದಲ್ಲಿ
ಭ್ರಷ್ಟ ನಾಯಕರುಗಳ 'ರಾವಣ ರಾಜ್ಯ'ವಿಲ್ಲಿ
ಗಾಂಧೀಜಿ ಕನಸಿನ 'ರಾಮ ರಾಜ್ಯ' ದಲ್ಲಿ

ಡೈರಿ
ಡೈರಿಯ ಪುಟಗಳಲಿ ನಾ ಸತ್ಯ ಬರೆದು
ನನ್ನಾಕೆ ಓದಿದಳು ಪುನಃ ತೆರೆದು ತೆರೆದು
ಡೈರಿಯಾಯಿತೇ ವೈರಿ ನೀ ಹೋದೆ ತೊರೆದು
ಇನ್ನು ಯೋಚಿಸುತಿರುವೆ ತಲೆ ಕೆರೆದು ಕೆರೆದು

ಎಲ್ಲವನು ಬರೆದಿದ್ದೆ ಉಳಿದಿಲ್ಲ ಗುಟ್ಟು
ನಾ ನಿನ್ನ ಪೂಜಿಸಿದ್ದೆ ಹೃದಯದಲಿ ಇಟ್ಟು
ನಿ ಏಕೆ ಹೋದೆ ನನ್ನನ್ನು ಬಿಟ್ಟು
ಎಲ್ಲಿ ದೂರಾಗಿವುವೆ ಏಕಾಂಗಿಯಾಗಿಟ್ಟು

ಅದೇನು ಓದಿದೆ ನೀ ನನ್ನ ಡೈರಿಯಲ್ಲಿ
ಹೇಳಬಾರದೇ ನನಗೆ ನೇರ ಮಾತಿನಲ್ಲಿ
ಮುಚ್ಚಿಟ್ಟುಕೊಂಡಿರುವುದೇನು ಮನಸ್ಸಿನಲ್ಲಿ
ಭರವಸೆ ಇಲ್ಲವೇ ನನ್ನ ಪ್ರೀತಿಯಲ್ಲಿ

ನಿನ್ನ ಪ್ರೀತಿಯ ಸಾಗರದಲ್ಲಿ ಹರುಷದಿ ತೇಲಿದೆ ಅಂದು
ನಿನ್ನಗಲಿಕೆಯ ವಿರಹದ ನೋವಿನಲ್ಲಿ ಬೆಂದಿರುವೆ ಇಂದು
ಮುನಿಸಬಿಟ್ಟು ಆಸರೆಯಗಬಾರದೆ ಬಳಿ ಬಂದು
ದೂರ ಹೋಗಬಿಡೆನು ನಾ ನಿನ್ನ ಎಂದೆಂದೂ

ಅಶಾಂತಿ ಮೋಡಗಳು ಮನ ಮಂಡಲದಲ್ಲಿ
ಚಿಂತೆಯ ಅಲೆಗಳು ಚಿತ್ತ ಸಾಗರದಲ್ಲಿ
ಕಂಬನಿ ಹೆಪ್ಪುಗಟ್ಟಿದೆ ಕಣ್ಣಾಲಿಗಳಲ್ಲಿ
ಎಲ್ಲವೂ ಶೂನ್ಯ ಆಸರೆಯಿಲ್ಲದ ಈ ಬದುಕಿನಲ್ಲಿ

ಮನಸ್ಸು


ಅದೆಷ್ಟೋ ಭಾವನೆಗಳ ತುಂಬಿ ಕೊಂಡಿರುವ
ಹೊಸ ಹೊಸ ಕನಸುಗಳ ಕಟ್ಟಿ ಕೊಂಡಿರುವ
ಕನಸು ನನಸಾಗಿಸಲು ಪ್ರೇರೆಪಿಸುತಿರುವ
ನಗು ಬಾರದಿದ್ದರೂ ಮುಗುಳ್ನಗೆಯ ಬೀರುವ
ಅಳಲಾಗದಿದ್ದರು ಒಮ್ಮೊಮ್ಮೆ ಅಳುವ
ತಪ್ಪು ಸರಿಗಳನೆಲ್ಲ ಜೀರ್ಣಿಸಿ ಕೊಂಡಿರುವ
ಬದುಕಿನ ದಾರಿಯಲಿ ಮುಖವಾಡವ ಧರಿಸಿರುವ
ಓ ಮನಸ್ಸೇ ನೀನೆಷ್ಟು ಕಠಿಣ ..........

Saturday, November 21, 2009

ಹನಿಗವನಗಳು

ನಾ ನಿನ್ನವನು

ಪ್ರೀತಿಯು ಬತ್ತಿ ಬರಡಾಗುವ ಮುನ್ನ
ನಂಬಿಕೆಯು ಸತ್ತು ಕೊರಡಾಗುವ ಮುನ್ನ
ಸತ್ತು ಶವವಾಗಿ ಚಿತೆಯೇರುವ ಮುನ್ನಒಮ್ಮೆ ,
"ನಾ ನಿನ್ನವನೆಂದು" ಗಟ್ಟಿಯಾಗಿ ಕರೆಯನ್ನ..


ಮೊಡವೆ-ಒಡವೆ

ನೀ ನನ್ನ ಜೀವ ಓ ನನ್ನ ಚೆಲುವೆ

ಅದು ಬೇಕು ಇದು ಬೇಕು ಎಂದೇಕೆ ಕಾಡುವೆ ??
ಮುಖದಲ್ಲಿ ಇರಲು ಇಷ್ಟೊಂದು ಮೊಡವೆ
ಹೇಳು ನೀ ಉತ್ತರವ ನಿನಗೇಕೆ ಒಡವೆ ??


ಗೆಳತಿ ನೀ ಯಾರು ?

ದಿನ ರಾತ್ರಿ ನಾ ಮಲಗೇ ನೀ ಬರುವೆ ಕನಸಿನಲಿ
ನಾ ಎದ್ದು ಕುಳಿತಿರೆ ನೀ ಬರುವೆ ಮನಸಿನಲಿ
ಯಾರು ನೀ ಯಾರು ಗೆಳತಿ ನೀ ಎಲ್ಲಿರುವೆ ?
ಹೀಗೆನ್ನ ಕಾಡದೇ ಎದುರೆಂದು ಬರುವೆ ?