Thursday, December 17, 2009

ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಚಳಿಯಲ್ಲೂ ಬೇಗೆದ್ದು
ಮಸಿಯಲ್ಲಿ ಹಲ್ಲುಜ್ಜಿ
ತಂಗಳನ್ನವ ಉಂಡು ಖುಷಿ ಪಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಹರಕು ಬಟ್ಟೆಯ ತೊಟ್ಟು
ಚೀಲವ ಹೆಗಲಿಟ್ಟು
ಮನಸ್ಸಿಲ್ಲದ ಮನಸ್ಸಿಂದ ಶಾಲೆಗೋಗುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಗುರುಗಳಿಗೆ ಗಿಣಿಪಾಠವ ಕೊಟ್ಟು
ಶಭಾಶ್ ಗಿಟ್ಟಿಸಿಕೊಂಡು
ಅಮ್ಮನಿಂದ ಸಿಹಿಮುತ್ತು ಪಡೆಯುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಶಾಲೆ ಬಿಟ್ಟ ಕ್ಷಣ
ಓಡೋಡಿ ಮನೆ ಬಂದು
ಚೀಲವ ಬಿಸುಟು, ಅಮ್ಮ ನೋಡದಂತೆ ಮೈದಾನಕ್ಕೊಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಜಾತಿ ಮತ ಭೇದವಿಲ್ಲದೆ
ಗಂಡು ಹೆಣ್ಣೆಂಬ ಪರಿವಿಲ್ಲದೆ
ಎಲ್ಲರೊಂದಾಗಿ ಗೋಲಿ ಆಡುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

ಕನಸಿಂದ ಭಯಗೊಂಡು
ಕನವರಿಸಿ ಕುಳಿತಿದ್ದು
ಅಮ್ಮನಪ್ಪುಗೆಯಲ್ಲಿ ಭಯಮರೆತು ನಿದ್ರಿಸುತಿದ್ದ
ಆ ದಿನಗಳೆಷ್ಟು ಚಂದ, ಬಾಲ್ಯದ ಆ ದಿನಗಳೆಷ್ಟು ಚಂದ

4 comments:

Naveen Kodlady said...

Very nice Ashok. i too remember those finest days; of Mardi shale too. Explore a lot more.Take care

Ashok.V.Shetty, Kodlady said...

Thanks Navin...those days were really great....

Unknown said...

nijawaagiyu aa dinagalestu chennagiddavu...uttama varnane...baalyada nenapu marukalisuvanthe maadithu...

Ashok.V.Shetty, Kodlady said...

Thanks Arun...