
ನಮ್ಮ ಸುತ್ತಲಿರುವ ಗಾಳಿ, ನೀರು, ಮರ
ಇದಕ್ಕೆ ಎನ್ನುವರು ಪರಿಸರ
ಯಾಕಿಲ್ಲ ನಿಮಗೆ ಇದರ ಮೇಲೆ ಕನಿಕರ
ನೀನೆ ಕಾಪಾಡಬೇಕು ಹರ ಹರಾ.
ಬಂದಿತೆಂದರೆ ಕಾರೊಂದು ಸಚಿವರ
ಪಟಾಕಿ ಸಿಡಿಮದ್ದುಗಳ ಅಬ್ಬರ
ಯಾಕೆ ಬೇಕು ಇಂತಹ ಸಡಗರ
ಯಾರಿಗೂ ಇಲ್ಲವೆ ಪರಿಸರದ ಮೇಲೆ ಕನಿಕರ...
ಎಲ್ಲೆಂದರಲ್ಲಿ ತಲೆ ಎತ್ತಿ ಖಾರ್ಖನೆ
ನೀಡುತಿವೆ ಪರಿಸರಕೆ ಹೊಗೆ,ಧೂಳು, ತ್ಯಾಜ್ಯವನೆ
ಕೇಳುವವರಾರಿಲ್ಲ ಪರಿಸರ ಪ್ರೇಮಿಗಳ ರೋಧನೆ
ಆಗುತಿದೆ ಮನಕೆ ಅದೆಷ್ಟೋ ವೇದನೆ
ಅರಿವಿದೆಯೇ ನಿಮಗೆ ಓಜೋನ ಪದರಗಳ
ತಡೆಯುವವು ರವಿಯ ನೆರಳಾತೀತ ಕಿರಣಗಳ
ಹೊಗೆ ಧೂಳು ಮಾಡುತಿವೆ ಪದರದಲಿ ರಂಧ್ರಗಳ
ಪಲಿತಾಮ್ಶವಿದು ಹುಟ್ಟು ಹೊಸ ಹೊಸ ರೋಗಗಳ
ಶುಭ್ರತೆಯು ಸತ್ತಿರುವ ನೀಲಿಯಾಕಾಶ
ಆಗುತಿದೆ ಜೀವಿಗಳಿಗೆ ಬಿಡಿಸಲಾಗದ ಪಾಶ
ಬುದ್ದಿಜೀವಿಗಳಿಂದ ಆಗುತಿದೆ ನಾಶ
ವಿನಾಶದೆಡೆಗೆ ನಡೆಯುತಿದೆ ದೇಶ
No comments:
Post a Comment