
ಆ ಕರಾಳವಾದ ಶನಿವಾರದಂದು
ನಾ ಕೂತ ರಿಕ್ಷಾಕ್ಕೆ ಬಡಿಯಿತು ಕಾರೊಂದು
ಅವಘಡವು ನಡೆದಿತ್ತು ಕ್ಷಣದಲ್ಲಿ ಅಲ್ಲೊಂದು
ತಿಳಿದಿಲ್ಲ ಎಲ್ಲರಿಗು ಕಾರಿನ brake fail ಎಂದು
ರಿಕ್ಷಾವು ಅಲ್ಲಿ ಮಗುಚಿ ಬಿದ್ದಿತ್ತು
ಚಾಲಕನು ಇನ್ನಿಲ್ಲ ಹೋಗಿದ್ದ ಸತ್ತು
ಸುತ್ತ ಮುತ್ತಲೆಲ್ಲ ವಿಷಯ ಹರಡಿತ್ತು
ಕೆಲವರು ಮಾಡಿದರು ರಂಪಾಟ ಅತ್ತು
ಅನಿಸಿತ್ತು ನನಗೆ ಸಿಡಿಲು ಬಡಿದಂತೆ
ಯಾರ್ಯಾರೋ ಬಂದು ಹೊತ್ತು ಒಯ್ದಂತೆ
ಕವರಿಸುತಿದ್ದೆ ನಾ ನಿದ್ದೆಯಲ್ಲಿದ್ದಂತೆ
ಕಣ್ ಬಿಡೇ ಕಂಡಿತು 'ಆಸ್ಪತ್ರೆ' ಯಂತೆ
ಗಂಟು ಕೀಲುಗಳಲಿ ನೋವಾಗುತಿತ್ತು
ನರ ನಾಡಿಗಳೆಲ್ಲ ಸೆಳೆಯುತ ಇತ್ತು
ಬೆನ್ನು ಮೂಳೆಗೆ ಕಲ್ಲೊಂದು ಬಡಿದಿತ್ತು
ಕೈಕಾಲುಗಳಲ್ಲಿ ರಕ್ತ ತೊಟ್ಟಿಕ್ಕುತ್ತಿತ್ತು
ಎಲ್ಲೆಲ್ಲೂ ನೋಡಿದರು ಗಾಯವಾಗಿದೆ ದೇಹ
ಮೊದಲಿನಂತಾಗುವೆನೆ ಎಂಬ ಸಂದೇಹ
ವೈದ್ಯರು ನರ್ಸುಗಳು ನಿಂತಿಹರು ಸನಿಹ
ತಪಾಸಣೆ ಚಿಕಿತ್ಸೆ ಅದು ತರಹ ತರಹ
ಆಸ್ಪತ್ರೆಯಲ್ಲಿ ರೋಗಿಗಳ ನೂಕು-ನುಗ್ಗಲು
ನೋವಾಗುತಿದೆ ನನಗೆ ಬದಲಾಯಿಸೇ ಮಗ್ಗುಲು
ಕಷ್ಟವಾಗುತಿದೆ ನನಗಿಲ್ಲಿ ಮಲಗಲು
ಆಗೊಮ್ಮೆ ಈಗೊಮ್ಮೆ ತಿಗಣೆಗಳು ಕಚ್ಚಲು
ನಾನಿರುವ ಈ ಸ್ಥಿತಿಯನ್ನು ನೋಡಿ
ನನ್ನಾಕೆ ಕಂಗಳಲಿ ಕಣ್ಣೀರ ಕೋಡಿ
ಬಹಳ ದಿನವಾಯ್ತು ಮುದ್ದು ಮಗಳನ್ನು ನೋಡಿ
ಕುಶಿಪಡುವ ಬಯಕೆಯು ಅವಳ ಮುದ್ದಾಡಿ
ಬಹುತೇಕ ಗುಣಮುಖನು ನಾನೀಗ ಆಗಿಹೆನು
ಆಸ್ಪತ್ರೆಯಿಂದ ಬಿಡುಗಡೆಯ ಪಡೆದಿಹೆನು
ನನ್ನಾಕೆ ಮನದಲ್ಲಿ ನೆಮ್ಮದಿಯ ಕಂಡಿಹೆನು
"ಕುಶಿ" ಯ ಮುದ್ದು ಮೊಗದಲ್ಲಿ ಹರುಷವ ಕಂಡಿಹೆನು (ಕುಶಿ- ನನ್ನ ಮಗಳು)
ನನಗಾಗಿ ಪ್ರಾರ್ಥಿಸಿದ ಸರ್ವರಿಗೂ ನಮನ
ಸ್ನೇಹಲೋಕದ ಎಲ್ಲಾ ಗೆಳೆಯರಿಗೂ ನಮನ
ಆರಂಭಿಸಿರುವೆ ಹೊಸದೊಂದು ಜೀವನ
ಬಹುಬೇಗ ಆಗಲಿ ನಮ್ಮ-ನಿಮ್ಮೆಲ್ಲರ ಮಿಲನ
2 comments:
Nijana edu..hope you are fine...
Houdu...but now i am fine.....
Post a Comment