ಜೀವನದಲ್ಲಿ ನಾವು ಅದೆಷ್ಟೋ ಕನಸುಗಳನ್ನು ಕಾಣುತ್ತೇವೆ. ಕಂಡ ಕನಸುಗಳೆಲ್ಲಾ ನನಸಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಕನಸುಗಳಲ್ಲೂ ಮಾರ್ಪಾಡಾಗುತ್ತವೆ. ನಾನು ಹೈಸ್ಕೂಲ್ ಹೋಗುತ್ತಿರುವಾಗ 'ವೈದ್ಯ' ನಾಗಬೇಕೆಂಬ ಕನಸು ಕಂಡವ. ಆದರೆ ಅದು ನನಸಾಗಲಿಲ್ಲ. ಹಾಗೇಯೇ ಕಂಡ ಇನ್ನು ಕೆಲವು ಕನಸುಗಳಲ್ಲಿ ಒಂದು ಕನಸು ಈಗ ನನಸಾಗುತ್ತಿದೆ....ಅದೇ ಸಂತೋಷದಲ್ಲಿ ಮನಸ್ಸಿಗೆ ಬಂದ ಕೆಲವು ಸಾಲುಗಳನ್ನು ನಿಮ್ಮ ಮುಂದಿಡುತಿದ್ದೇನೆ..........
![]() |
ಚಿತ್ರ ಕೃಪೆ - ಅಂತರ್ಜಾಲ |
ಜೀವನದಿ ಕಂಡೆ ಕನಸು ಹತ್ತು ಹಲವನು
ಅದರಲ್ಲೊಂದ ಬೆನ್ನ ಹತ್ತಿ ಮುಂದೆ ನಡೆದೆನು
ದಾರಿ ಮಧ್ಯೆ ಸಾವಿರಾರು ತೊಡಕು ಕಂಡೆನು
ಬಾಂಧವ್ಯಗಳ ನಡುವಿನಲ್ಲೂ ಒಡಕು ಕಂಡೆನು
ಎಷ್ಟೋ ವ್ಯರ್ಥ ಯತ್ನಗಳು ನಿರಾಸೆ ತಂದವು
ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು
ಹೃದಯದೊಳಗೆ ವೇದನೆಯು ಮನೆಯ ಮಾಡಲು
ಮನಸು ಹೇಳುತಿತ್ತು ಮರಳಿ ಯತ್ನ ಮಾಡಲು
ಜೀವನದ ಕಟು ಸತ್ಯಗಳು ಅರ್ಥವಾದರೂ
ಇಷ್ಟರಲ್ಲೇ ತುಂಬಾ ಸಮಯ ವ್ಯರ್ಥವಾಯಿತು
ಬಂಧುಗಳ ಅಸಹಕಾರ ಸ್ಪಷ್ಟವಾದರೂ
ಮುನ್ನುಗ್ಗೋ ಆಸೆ ಮನಸ್ಸಿನಲ್ಲಿ ದಟ್ಟವಾಯಿತು
ದೇಹಕ್ಕೀಗ ಒಂದು ಹೊಸ ಹುರುಪು ಬಂದಿದೆ
ಮಾಸಿ ಹೋದ ಕಣ್ಣುಗಳಲೂ ಹೊಳಪು ಕಂಡಿದೆ
ಕೃಶ ದೇಹದಲ್ಲೂ ಈಗ ಕಸುವು ಮೂಡಿದೆ
ಮರಳಿ ಮಾಡಿದ ಯತ್ನವು ಯಶವ ತಂದಿದೆ
ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....
36 comments:
ನೈಸ್....ತುಂಬಾ ಚೆನ್ನಾಗಿದೆ....
ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....................ಈ ಸಾಲುಗಳು ಇಷ್ಟವಾದವು....
Nice poem
nanasaada khushigintaloo kanasu kaanuvaagina khushi hechchu.. adakke mithiye illa..
ಗೆಡ್ಡೆಯಾದ ಹಿಮವೂ ಕರಗತೊಡಗಿದೆ....
ನಿಜ ಎಲ್ಲದಕೂ ತನ್ನದೇ ಆದ ಸೀಮಾ ಗರಿಷ್ಟತೆ ಅದರ ಆಚೆ ಈಚೆ ..ಹೇಳಲಾಗದು...ಸಾಲುಗಳಲ್ಲಿ ಜೀವನಸಾರ ಬಿಂಬಿಸೋ ಕವನ ಪಂಕ್ತಿಗಳು...ಇಷ್ಟವಾದವು
ಆಶಾವಾದ ತುಂಬಿದ ನಿಮ್ಮ ಕವನವು ಖುಶಿಯನ್ನು ನೀಡುತ್ತಿದೆ.
ಕನಸು ಕೈ ಗೂಡಿದ ಮೇಲೆ ಇನ್ನೇನು ಅಡ್ಡಿ?ಸ್ವರ್ಗಕ್ಕೆ ಕಿಚ್ಚು ಹಚ್ಚಿ!!
@ ಸ್ನೇಹಾ ...
ಧನ್ಯವಾದಗಳು...
@ ಚುಕ್ಕಿ ಚಿತ್ತಾರ
ನಿಜ...ಕನಸು ಕಾಣುವುದರಲ್ಲೇ ಜಾಸ್ತಿ ಖುಷಿ ಇರುತ್ತೆ...ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು ..
@ ಅಜಾದ್ ಸರ್...
ನಿಮ್ಮ ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು..
@ ಸುನಾಥ್ ಸರ್...
ನಿಮಗೆ ಖುಷಿ ಆಯಿತು ಎನ್ನೋದು ನಂಗೆ ಹೆಮ್ಮೆಯ ವಿಚಾರ... ಧನ್ಯವಾದಗಳು ಸರ್..ನಿಮ್ಮ ಹಾರೈಕೆ, ಬೆಂಬಲ ಹೀಗೆ ಇರಲಿ....
ಮೂರ್ತಿ ಸರ್,
ನಿಮ್ಮ ಪ್ರತಿಕ್ರೀಯೆಯನ್ನು ನೋಡದೆ ಕೆಲವು ದಿನಗಳಾಗಿತ್ತು..ನಿಮ್ಮ ಆಗಮನ ಖುಷಿ ಕೊಟ್ಟಿತು...ಸ್ವರ್ಗಕ್ಕೆ ಕಿಚ್ಚು ಹಾಕುವ ತಯಾರಿಯಲ್ಲೇ ಇದ್ದೀನಿ...ಧನ್ಯವಾದಗಳು ...
Uttama saalugalu.
"Krushadehadalli nashe moodide.."
illi 'nashe'ge badalaagi bere pada balasiddare innoo chandaviruttittenisuttade.
@ ವಿಚಲಿತ ...
ನಿಮ್ಮ ಸಲಹೆಗೆ ಧನ್ಯವಾದಗಳು....
'ಕೃಶ ದೇಹದಲ್ಲೂ ಈಗ ಕಸುವು ಮೂಡಿದೆ' ಅಂತ ಬದಲಾವಣೆ ಮಾಡಿದ್ದೀನಿ....ಧನ್ಯವಾದಗಳು.....
oh super..............
Thanks Bhatre...
ಪ್ರೀತಿಯ ಅಶೋಕ್...
ತುಂಬಾ ಅರ್ಥಪೂರ್ಣ ಸಾಲುಗಳು..
"ಆಶಾವಾದ"ದ ಕವನ ಇಷ್ಟವಾಯಿತು..
ಜೈ ಹೋ !
ಪ್ರಕಾಶಣ್ಣ,
ನಿಮಗೆ ಕವನ ಇಷ್ಟ ಆಗಿದ್ದು ಖುಷಿ ಆಯಿತು...ನಿಮ್ಮ ಪ್ರೀತಿಯ ಪ್ರತಿಕ್ರೀಯೆಗೆ ಧನ್ಯವಾದಗಳು...ಜೈ ಜೈ ಹೊ...
asha jeevanada aaneka sathya gatanegalu helidera nange thumba esta aythu.....thumba chennagide...
Chennagide..
very nice kavana....
@ Naveen....
Dhanyavadagalu...heege barta iri...
@ Hemanth....
nanna blog ge swagata...Pratikreeyege Dhanyavadagalu..
Suguna Medam...
Dhanyavadagalu..
:-)
chennagide Ashok anna. ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು ee line tumba ista ayta. & last pyara ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ , ista ayta.
ಪ್ರೆಶ್ನೆ ಮೂಡಿದರೇನೆ ಅದಕ್ಕೆ ಉತ್ತರ ಹುಡುಕುತ್ತ , ನಮ್ಮ ಗುರಿ ಮುಟ್ಟಲು ಸಾಧ್ಯ ಅಲ್ವಾ ಅಶೋಕ್ ಅಣ್ಣ .
ಅಶೋಕರೇ, ನಿಮ್ಮ ಬ್ಲಾಗ್ ನಿಜಕ್ಕೂ 'ಖುಷಿ' ಕೊಡುವ ಬ್ಲಾಗ್.
ಸಾಧನೆ ನಿಜಕ್ಕೂ ಸಂತಸಕರ, ಆದರೆ ನಿರಂತರ ಪ್ರಯತ್ನದಿಂದಾಗುವ ಸಂತಸ ಹೆಚ್ಚಿನದು!
tumba aashaadaayakavaada kavana sir.abhinandanegalu.
ಜೀವನದಲ್ಲಿ ಅದೆಷ್ಟೋ ಕನಸನ್ನು ಕಾಣುತ್ತೇವೆ...ನೆರವೆರದಾಗ ಆಗುವ ಮನಸ್ಸಿನ ನೋವೆ ನಮಗೆ ಸಾದಿಸಬೇಕೆಂಬ ಛಲವನ್ನು ತರಿಸುತ್ತದೆ.ಕರಗಿದ ಹಿಮದ ನೀರು ಬೆಚ್ಚನೆಯ ಮನಕ್ಕೆ ತಂಪನ್ನು ನೀಡಿ ಮನಸ್ಸಿಗೆ ಮುದವನ್ನ ನೀಡುತ್ತದೆ.. ಚೆನ್ನಾಗಿದೆ ಆಶಾವಾದ..
ಆಶಾಭಾವನ್ನು ಹೊ೦ದಿರುವ ಕವನ ಚೆನ್ನಾಗಿದೆ. ಅಭಿನ೦ದನೆಗಳು.
Hi Ashok,
Olle Ashavdada baraha... kanasannu nanasu madikolluvalli adetade iddidde adanna dati nededavane yashasviyagodu..
neevu yashasviyagiddera..
Pravi
tumbaa chennaagide aashaavaada kavana.
ತುಂಬಾ ದಿನಗಳ ನಂತರ ಬ್ಲಾಗ್ ದುನಿಯಕ್ಕೆ ಬಂದಿದ್ದೇನೆ..
ಕನಸು ಕಾಣ್ತಾ ಇರಬೇಕು..ಆಗ ಮಾತ್ರ ಈ ಬದುಕಿಗೆ ಒಂದು ಅರ್ಥ ಇರುತ್ತೆ..
ತುಂಬಾ ಚೆನ್ನಾಗಿದೆ ನಿಮ್ಮ ಕುಶಿಯ ಸಾಲುಗಳು...
ನಿಮ್ಮವ,
ರಾಘು.
ಶೆಟ್ರೆ, ಬಹಳ ಭಾವಪೂರ್ಣವಾಗಿ ಬರೆದದ್ದನ್ನು ’ಕುಶಿ’ಯಲ್ಲಿ ಖುಷಿಯಿಂದ ಕಂಡೆ, ಒಳ್ಳೇ ಊಟ ಹೊಡ್ದು ಆಮೇಲೊಂದು ಒಳ್ಳೇ ಕವಳ ಹಾಕಿದ ಹಾಗಿತ್ತು ನನ್ನ ಮನಸ್ಥಿತಿ. ಪರವಾಗಿಲ್ಲರೀ ಸ್ವಲ್ಪ ಹೊತ್ತು ಕೂತರೆ ಪದಜೋಡಣೆ ಚೆನ್ನಾಗೇ ಮಾಡ್ತೀರಿ, ನಿಮ್ಮ ಮುಂದಿನ ಬರಹಗಳು ಇನ್ನಷ್ಟು ಚೆನ್ನಾಗಿ ಬರಲಿ, ದಾರಿ ಕಾಯ್ತಾ ಇರ್ತೇನೆ ಆಗ್ದಾ ?
sundara, aashayavulla kavana ashokravare,abhinandanegalu.
sundara, aashayavulla kavana ashokravare,abhinandanegalu.
sundara, aashayavulla kavana ashokravare,abhinandanegalu.
Post a Comment