Thursday, September 13, 2012

ಮುಂಬೈ ಡೈರಿ- ನೆನಪಿನಾಳದಿಂದ -1


ನಾನು ಎಂದಿನಂತೆ  ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ  ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು  ಕುಳಿತುಕೊಂಡಿದ್ದೆ. ಮುಂಬಯಿಯಲ್ಲಿ ಬೆಳಿಗ್ಗಿನ ಅವಧಿಯಲ್ಲಿ ಲೋಕಲ್ ರೈಲಿನಲ್ಲಿ ಸೀಟು ಹಿಡಿಯುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದು ಎಲ್ಲರಿಗೂ ಆಗುವ ಕೆಲಸವೂ ಅಲ್ಲ....ಅದಕ್ಕೂ ಅನುಭವ ಬೇಕು....೧೫ ವರುಷಗಳಿಂದ ಮುಂಬಯಿ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಅನುಭವವೇ ನನಗೆ ಸೀಟು ಗಿಟ್ಟಿಸಿಕೊಳ್ಳುವಲ್ಲಿ ನೆರವು ಮಾಡಿದ್ದು. ರೈಲಿನಲ್ಲಿ ನಮ್ಮ ಕಚೇರಿ ತಲುಪಲು ೪೦ ನಿಮಿಷ ಬೇಕಾಗುವುದರಿಂದ  'ಉದಯವಾಣಿ' ದಿನಪತ್ರಿಕೆಯ  ಎಲ್ಲಾ ಪುಟಗಳ ಇಂಚು ಇಂಚು ಬಿಡದೇ ಓದುವುದಕ್ಕೆ ಆ ಸಮಯವನ್ನು ಬಳಸಿಕೊಳ್ಳುತಿದ್ದೆ. ಹೀಗೆ ಪತ್ರಿಕೆ ಓದುತಿದ್ದಾಗ ಜನರ  ನುಗ್ಗಾಟದ   ನಡುವೆ ಹೇಗೋ ಹೇಗೋ ಒದ್ದಾಡಿಕೊಂಡು ನಾನಿರುವ ಸೀಟಿನ ಬಳಿ ಬರುತ್ತಿರುವ ಒಬ್ಬರು ೬೦-೭೦ ರ ಹರೆಯದ ವ್ಯಕ್ತಿಯೊಬ್ಬರು ನನ್ನ ಕಣ್ಣಿಗೆ ಬಿದ್ದರು. ಕುಳಿತಿರುವ ಮಹಾನುಭಾವರುಗಳು ಯಾರೂ ಅವರ ಬಗ್ಗೆ ಗಮನ ಹರಿಸಲೇ ಇಲ್ಲ, ಅಥವಾ ಕಂಡರೂ ಕಾಣದ ಹಾಗೆ ಇದ್ದರೂ ಎನ್ನಬಹುದು. ಮುಂಬೈ ಮಹಾನಗರಿಯ ಬಸ್ಸಿನಲ್ಲಿ, ರೈಲಿನಲ್ಲಿ ಓಡಾಡುವಾಗ ವಯಸ್ಸಾದವರು, ಮಹಿಳೆಯರು ಎಂದು ಅವರಿಗೆ ತಮ್ಮ ಸೀಟನ್ನು ಬಿಟ್ಟು  ಕೊಡುವುದನ್ನು   ನಾನು ನೋಡಿದ್ದು ತುಂಬಾ ವಿರಳ. ನಾನು ಆ ವ್ಯಕ್ತಿಯ ವಯಸ್ಸಿಗೆ ಬೆಲೆ ಕೊಟ್ಟು ಅವರು ಕುಳಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಅವರಿಗೆ ಸನ್ನೆ ಮಾಡಿ ಎದ್ದು ನಿಂತೆ. ತಕ್ಷಣ ಅಲ್ಲೇ ನಿಂತಿದ್ದ ೨೦-೨೪ ರ ವಯಸ್ಸಿನ ತರುಣ ಆ ಸೀಟಿನಲ್ಲಿ ಧೊಪ್ಪೆಂದು ಕುಳಿತುಕೊಂಡೇ ಬಿಟ್ಟ. ನಾನು ಆ ಯುವಕನನ್ನು ಕುರಿತು   'ಅರೆ ಭಾಯ್ಸಾಬ್  ಮೈ ವೋ ಅಂಕಲ್ ಕೇಲಿಯೆ ಸೀಟ್ ಚೋಡಾ ತಾ...ಉನಕೋ ಬೈಟ್ನೇ ದೋ' (ಸಹೋದರ, ನಾನು ಆ ಅಂಕಲ್ ಗೆಂದು ಸೀಟು ಬಿಟ್ಟಿದ್ದು, ಅವ್ರಿಗೆ ಕುಳಿತುಕೊಳ್ಳಲು ಬಿಡು)  ಎಂದು ಹೇಳಿದೆ. ಆಗ ಆತ ಸಿಟ್ಟಿನಲ್ಲಿ  'ಸೀಟ್ ಕೆ ಊಪರ್  ಕಿಸೀಕಾ ನಾಮ್ ಲಿಖಾ ನಹಿ ಹೈ' (ಸೀಟ್ ಮೇಲೆ ಯಾರ ಹೆಸರು ಬರೆದಿಲ್ಲ)  ಎಂದುಬಿಟ್ಟ. ನಾನು  'ವೋ ತೋ ಮುಜ್ಹೆ ಭಿ ಪತಾ ಹೈ....ಏಜ್ಡ್ ಆದ್ಮಿ ಹೈ ...ಉನಕೋ ಬೈಟ್ ನೇ ದೋ....ನಹಿನ್ ತೋ ಮೈ ಸೀಟ್ ಕ್ಯೋo ಚೋಡ್ತಾ" ( ಅದು ನನಗೂ ಗೊತ್ತು....ಅವರು ವಯಸ್ಸಾದವರು ಅವರು ಕುಳಿತುಕೊಳ್ಳಲಿ ...ಇಲ್ಲದಿದ್ದರೆ ನಾನ್ಯಾಕೆ ಸೀಟು ಬಿಡ್ತಾ ಇದ್ದೆ) ಎಂದೆ. ನಾನು ಆ ಯುವಕನಲ್ಲಿ  ಆ ವ್ಯಕ್ತಿ ಗಾಗಿ ಇಷ್ಟೆಲ್ಲಾ ಜಗಳ ಮಾಡುತ್ತಾ ಇದ್ದರೂ  ಅಲ್ಲಿ ಕುಳಿತ ಉಳಿದವರಾರೂ ಈ ಬಗ್ಗೆ ಏನೂ ಮಾತಾಡಲೇ ಇಲ್ಲ. [ರಸ್ತೆಯ ಮೇಲೆ  ಗರ್ಭಿಣಿ ಹೆಂಗಸೊಬ್ಬಳನ್ನು ೩-೪ ಜನ ಸೇರಿ ಕ್ಷುಲ್ಲಕ ಕಾರಣಕ್ಕಾಗಿ ಥಳಿಸುತಿದ್ದರೂ ಸುಮ್ಮನೆ ನೋಡುತ್ತಾ ಆ ಮಹಿಳೆಯ ಸಹಾಯಕ್ಕೆ ಧಾವಿಸದ  ಜನರೇ ಇಲ್ಲಿರುವಾಗ ಇದೇನು ಮಹಾ ಅಲ್ಲಾ ಬಿಡಿ] . ಆದರೂ ಅಲ್ಲಿಗೆ ಬಿಟ್ಟು ಬಿಡುವ ಮನಸ್ಸು ನನಗೆ ಬರಲಿಲ್ಲ. ಆ ಯುವಕ ನಾನು ಹೇಳಿದ ಮಾತಿಗೆ ಪ್ರತಿಯಾಗಿ  'ಯೆ ತೇರ ಬಾಪ್ ಕ ಸೀಟ್ ನಹಿ ಹೈ'  ಎಂದುಬಿಟ್ಟ.  ನನಗೆ ಸಿಟ್ಟು ಬರುವುದು ಬಹಳ ಕಡಿಮೆ...ಅಪರೂಪಕ್ಕೆ ಎಲ್ಲಾದರೂ ಸಿಟ್ಟು ಬಂತೆಂದರೆ ನಾನೇನು ಮಾಡುತ್ತೇನೋ  ನನಗೂ ತಿಳಿಯದ ಹಾಗೆ ವರ್ತಿಸುವ ಸ್ವಭಾವ ನನ್ನದು. ಕೋಪದ ಬರದಲ್ಲಿ ಗೋಡೆಗೆ ಗುದ್ದುವುದು, ಟಿ.ವಿ. ರಿಮೋಟ್ ನ್ನು ನೆಲಕ್ಕೆ ಬಡಿಯುವುದು ಹೀಗೆಲ್ಲಾ ಮಾಡಿದ್ದೂ ಉಂಟು. ಇಲ್ಲಿ ಆಗಿದ್ದು ಹಾಗೆ ...ಮುಂಬೈ ನಲ್ಲಿ  'ಮಾ' ಕ  'ಬೆಹನ್'  ಕ , 'ಬಾಪ್ 'ಕ   ಇಂತಹ ಬೈಗುಳ ಗಳನ್ನು [ಅವರಿಗೆ ಅದು ಬೈಗುಳ ಅನ್ನಿಸೋದೇ ಇಲ್ಲ] ಉಪಯೋಗಿಸದೆ ಮಾತಾಡುವುದು ತುಂಬಾ ವಿರಳ....ಅವುಗಳನ್ನು ಪ್ರಯೋಗಿಸದೆ  ಮಾತಾಡಿದರೆ ಆ  ಮಾತಿಗೆ ಬೆಲೆ ಇರೋಲ್ಲವೆನ್ನುವಂತೆ ಮಾತಾಡುತ್ತಾರೆ.  ಚಿಕ್ಕ ಚಿಕ್ಕ ಮಕ್ಕಳು  ಕೂಡ ಆಟ ಆಡುವಾಗ ಈ ಬೈಗುಳಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ.  ಆದರೆ ನನಗೆ ಅಂತಹ  ಶಬ್ಧ ಗಳನ್ನು ಬಳಸುವುದು ಹಾಗೂ ಕೇಳುವುದು ಸಹ ಇಷ್ಟವಾಗದ ಕಾರಣ ಅವನು ಹೇಳಿದ  'ಬಾಪ್ ಕ' ಎನ್ನುವ ಶಬ್ಧ  ಕೆರಳುವಂತೆ ಮಾಡಿತ್ತು.    ಆತ ಮಾತಾಡಿ ಬಾಯಿ ಮುಚ್ಚುವಷ್ಟರಲ್ಲಿ ನನ್ನ ಬಲಗೈ ಆತನ ಕೆನ್ನೆಗೆ ಬಲವಾಗಿ ಬಿದ್ದಿತ್ತು. ನನ್ನಿಂದ ಇದನ್ನು ನಿರೀಕ್ಷಿಸದಿದ್ದ ಆ ಯುವಕ  ಅವಾಕ್ಕಾಗಿ ಹೋಗಿದ್ದ......ನನಗೆ ಕೋಪ ಎಷ್ಟು ಬಂದಿತ್ತು ಎಂದರೆ ಆತನನ್ನು ಸೀಟಿನಿಂದ ಎಳೆದು ಕೆನ್ನೆಗೆ ಮತ್ತೆರಡು ಕೊಟ್ಟುಬಿಟ್ಟೆ. ಅಷ್ಟರಲ್ಲಿ ಉಳಿದವರೆಲ್ಲರೂ 'ಜಾನೇ ದೋ ಜಾನೇ ದೋ' (ಹೋಗಲಿ ಬಿಡಿ, ಹೋಗಲಿ ಬಿಡಿ )   ಎಂದು ನನ್ನ ಬಿಗಿಮುಷ್ಟಿಯಿಂದ ಆ ಯುವಕನನ್ನು ಬಿಡಿಸುವ ಪ್ರಯತ್ನ ಮಾಡುತಿದ್ದರು. ಅಷ್ಟರಲ್ಲಿ ನನ್ನ ಕೋಪವು ತಣ್ಣಗಾಗಿತ್ತು. ಆ ವಯಸ್ಸಾದ ವ್ಯಕ್ತಿಯನ್ನು ಅಲ್ಲಿ ಕೂರಿಸಿ ನಾನು ನನ್ನ ಪೇಪರ್ ನತ್ತ ಕಣ್ಣು ಹಾಯಿಸತೊಡಗಿದೆ.  ನನ್ನ ಪಕ್ಕದಲ್ಲೇ ನಿಂತಿದ್ದ ಆ ಯುವಕ  ನಾನು ಓದುತಿದ್ದ ಪತ್ರಿಕೆಯನ್ನು ನೋಡಿ (ಅದು 'ಕನ್ನಡ' ಎಂದು ಅರ್ಥೈಸಿ ಕೊಂಡಿರಬೇಕು)  'ಕಿಧರ್ ಕಿಧರ್ ಸೆ ಇಧರ್ ಆಕೆ ದಾದಾಗಿರಿ ಕರ್ತೆ ಹೈ ,ಸಬಕೋ ಭಗಾನ ಚಾಹಿಯೇ   (ಎಲ್ಲೆಲ್ಲಿಂದೋ ಇಲ್ಲಿ ಬಂದು ದಾದಾಗಿರಿ ಮಾಡ್ತಾರೆ, ಎಲ್ಲರನ್ನೂ ಓಡಿಸಬೇಕು)  ಎಂದ.  ನಾನು 'ದೇಖೋ ದಾದಾಗಿರಿ ಮೈ ನಹಿ ಕರ್ ರಹನ್ ಹ್ಞೂ, ತುಂ ಹೀ ಕರ್ ರಹೇ ಹೊ'  (ದಾದಾಗಿರಿ ನಾನು ಮಾಡ್ತಾ ಇಲ್ಲ, ನೀನೆ ಮಾಡ್ತಾ ಇದ್ದೀಯ) ಎಂದಷ್ಟೇ ಹೇಳಿ ಪೇಪರ್ ಓದುವುದನ್ನು ಮುಂದುವರಿಸಿದೆ.  ಮಹಾರಾಷ್ಟ್ರ ಮತ್ತು ಕರ್ನಾಟಕ ದ ಗಡಿ ವಿವಾದ ತಾರಕಕ್ಕೇರಿದ ಸಮಯವದು.  ಆ ಯುವಕ 'ಮರಾಠಿ' ಗ ನಾಗಿದ್ದು ತನ್ನ ಭಾಷೆಯಲ್ಲೇ ಈ ವಿಷಯದ ಬಗ್ಗೆ ಗೊಣಗಾಡುತಿದ್ದ. ಸೌತ್ ನಿಂದ, ನಾರ್ತ್ ನಿಂದ ಎಲ್ಲಾ ಇಲ್ಲಿಗೆ ಬಂದು ನಮ್ ಮೇಲೆ ದಾದಾಗಿರಿ ಮಾಡ್ತಾರೆ .ಬೆಳಗಾಂ ನಲ್ಲಿ ನಮ್ ಜನಕ್ಕೆ ಹಿಂಸೆ ಕೊಡ್ತಾ ಇದ್ದಾರೆ ..ಹೀಗೆ ಏನೇನೋ ಹೇಳ್ತಾ ಇದ್ದ....ಆತನು 'ಮರಾಠಿ' ವ್ಯಕ್ತಿ ಎಂದು ತಿಳಿದ ಉಳಿದವರು ಅವನ ಬಗ್ಗೆ ಸೌಮ್ಯ ಭಾವನೆ ತಳೆದು ಅವನ ಮಾತಿಗೆ ಹೌದು ಹೌದು ಎಂಬಂತೆ ತಲೆ ಆಡಿಸಲು ಪ್ರಾರಂಭಿಸಿದರು. ನೋಡು-  ನೋಡುತಿದ್ದಂತೆ ಅಲ್ಲಿದ್ದ ಎಲ್ಲರೂ ನನ್ನನ್ನು  'ವಿಲನ್' ತರ ನೋಡಲು ಶುರು ಮಾಡಿದರು. (ನಾನು ಅಲ್ಲಿಯವರೆಗೆ  'ಹೀರೋ ' ಆಗಿರಲಿಲ್ಲ ಎಂಬ ಪ್ರಶ್ನೆ ಬೇರೆ ) . ನಾನು ಹಿಡಿದಿದ್ದ 'ಕನ್ನಡ' ಪತ್ರಿಕೆ ಎಲ್ಲರ ಕಣ್ಣಿಗೂ ಪತ್ರಿಕೆಯಾಗಿ ಕಾಣದೆ  ವೈರಿ ಹಿಡಿದಿರುವ 'ಅಸ್ತ್ರ' ದ ತರ ಕಾಣಿಸುತ್ತಿತ್ತು. ಅವರೆಲ್ಲಾ ಅದನ್ನು ನೋಡುವ ದೃಷ್ಟಿಯೇ ಬದಲಾಗಿ ಹೋಗಿತ್ತು. ಪರಿಸ್ಥಿತಿ ತನಗೆ ಅನುಕೂಲವಾಗುತ್ತಿದೆ ಎಂಬುದನ್ನು ಗ್ರಹಿಸಿದ ಯುವಕ  ಮತ್ತೆ ನನ್ನನ್ನು ಕುರಿತು ಮಾತನಾಡಲಾರಂಭಿಸಿದ.   'ಆಪ್ ಲೋಗ್ ಕೋ ಹಮ್ ಲೋಗೋ ನೇ ಜ್ಯಾದ ಹಿ ಛೂಟ್ ದೆ ಕೆ ರಖಾ ಹೈ..ಇಸ್ಲಿಯೇ ತುಂ ಲೋಗ್ ಉಡಿ ಮಾರ್ ರಹ ಹೈ....ಪೆಹೇಲೆ ಸೆ ನಾಕ್ ದಬಾಕೆ ರಖತಾ ತೊ ಇತ್ನಾ ಹಿಮ್ಮತ್ ನಹಿ ಹೋತಿ ತುಂ ಲೋಗೊನ್ ಕೋ'   [ನಿಮಗೆಲ್ಲಾ ನಾವು ಸಲಿಗೆ ಕೊಟ್ಟಿದ್ದು ಜಾಸ್ತಿ ಆಯಿತು...ಅದ್ಕೆ ನೀವೆಲ್ಲ ಜಾಸ್ತಿ ಹಾರಾಡ್ತಾ  ಇದ್ದೀರಾ, ಮೊದಲೇ ಮೂಗು ಒತ್ತಿ ಬಿಟ್ಟಿದ್ರೆ ಇಷ್ಟು ಧೈರ್ಯ ಬರ್ತಾ ಇರ್ಲಿಲ್ಲ ನಿಮಗೆ]  ಎಂದ. ನಾನು ಜಾಸ್ತಿ ಏನು ಹೇಳೋಕೆ ಹೋಗಲಿಲ್ಲ . ಗಲ್ತಿ ತುಮಾರ ತಾ ಇಸ್ಲಿಯೇ ಮಾರ್ ಖಾಯ...ಅವ್ರ್ ಜ್ಯಾದ ಬೋಲೇಗಾ ಅವ್ರ್ ಖಾಯೇಗಾ [ ತಪ್ಪು ನಿನ್ನದಿತ್ತು. ಅದಕ್ಕೆ ಪೆಟ್ಟು ತಿಂದೆ...ಮತ್ತೆ ಜಾಸ್ತಿ ಮಾತಡಿದ್ರೆ ಮತ್ತೆ ತಿಂತೀಯ] ಅಂದೆ. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂದು ಬಿಟ್ಟಿತ್ತು. ಅವನು ಇನ್ನೇನೋ ಬಡಬಡಿಸುತಿದ್ದ.  ಉಳಿದವರೆಲ್ಲರೂ ಹೌದು ಹೌದು ಎಂಬಂತೆ ತಲೆ ಆಡಿಸುತಿದ್ದರು.  ಆದರೆ ಇಷ್ಟೆಲ್ಲಾ ವಾದ ಯಾರಿಗಾಗಿ ನಾನು ಮಾಡುತಿದ್ದೆನೋ ಆ ವಯಸ್ಸಾದ ವ್ಯಕ್ತಿ ಕೂಡ 'ಮರಾಠಿ'  ಗ ರಾಗಿದ್ದು  ಸೌಜನ್ಯಕ್ಕಾದರೂ   ಒಂದು 'ಥ್ಯಾಂಕ್ಸ್' ಅಂತ ಹೇಳಲಿಲ್ಲ, ಮುಗುಳ್ನಗಲಿಲ್ಲ......ಅಷ್ಟೇ ಆಗಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ...... ಆ ಯುವಕ ಹೊರರಾಜ್ಯ ದವರ ಬಗ್ಗೆ ಮಾತನಾಡುತಿದ್ದಾಗ, ಅವರಿಗೆ ಬಯ್ಯುತಿದ್ದಾಗ ಅವನು ಹೇಳಿದ್ದು ಸರಿ ಎನ್ನುವಂತೆ ತಲೆ ಆಡಿಸಿದ್ದು ಮಾತ್ರವಲ್ಲ 'ಯೇ ಲೋಗ್ ಕೋ ಚರ್ಬಿ ಜ್ಯಾದ   ಹೋ ಗಯಾ ಹೈ' [ ಈ ಜನರಿಗೆ ಸೊಕ್ಕು ಜಾಸ್ತಿ ಆಗಿದೆ] ಎಂದು ಹೇಳಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು.   ನಾನು ಆ ವಯಸ್ಸಾದ ವ್ಯಕ್ತಿಯ ಮುಖವನ್ನೊಮ್ಮೆ ಗಂಭೀರನಾಗಿ ನೋಡಿ  ರೈಲಿನ ದ್ವಾರದೆಡೆಗೆ ಮುನ್ನೆಡೆದೆ. 
 


43 comments:

ಗೆಳತಿ said...

ಅನುಭವದ ಲೇಖನ ತುಂಬಾ ಚೆನ್ನಾಗಿದೆ ಅಣ್ಣ... ಇತ್ತೀಚೆಗೆ ಮನುಷ್ಯರಲ್ಲಿ ಮಾನವೀಯತೆಯ ಗುಣಗಳು ಕಣ್ಮರೆಯಾಗುತ್ತಿವೆ.. ಇದಕ್ಕೆ ನಮ್ಮ ಸುತ್ತ ನಡೆಯುತ್ತಿರುವ ಇಂತಹ ಘಟನೆಗಳೇ ಸಾಕ್ಷಿ... ಇದು ಮುಂಬೈಯಲ್ಲಿ ಮಾತ್ರವಲ್ಲ... ನಮ್ಮ ತುಮಕೂರು ನಗರದಲ್ಲೂ ಆಗಾಗ ನೋಡಬಹುದು....

ಅದರಲ್ಲೂ ಕಾಲೇಜು ಹುಡುಗರು-ಹುಡುಗಿಯರು(ಕ್ಷಮಿಸಿ ಕೆಲವರು ಮಾತ್ರ)ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಸೌಜನ್ಯತೆ/ಮಾನವೀಯತೆಯನ್ನೆ ಮರೆತಿರುತ್ತಾರೆ...ಮರೆತಂತ್ತೆ ನಟಿಸುತ್ತಾರೆ... ಇಲ್ಲಿ ಜಗಳದ ಮಟ್ಟಿಗೆ ಹೋಗುವುದಿಲ್ಲ.. ನಾವಾಗಿ ನಾವು ಒತ್ತಾಯ ಮಾಡಿ ವಯಸ್ಸಾದವರಿಗೆ/ಗರ್ಭಿಣಿಯರಿಗೆ/ಚಿಕ್ಕ ಮಕ್ಕಳನ್ನು ಎತ್ತುಕೊಂಡು ಇರುವವರಿಗೆ ಜಾಗ ಬಿಡಿ ಅಂತ ಹೇಳಿದರೆ ಮಾತ್ರ ಬಿಡುವುದು...

ಮಾನವೀಯತೆಯಿಂದ ನೀವು ಪ್ರತಿಕ್ರಿಯೆ ನೀಡಿದ್ದನ್ನು ಅರ್ಥಮಾಡಿಕೊಳ್ಳದೇ ಆ ಜನ ಆ ಹುಡುಗನಿಗೆ ಸರ್ಪೋಟ್ ಗಡಿ ವಿವಾದದಂತೆ ಬಿಂಬಿಸಿದ್ದು ಬೇಸರದ ವಿಷಯ...

ನೀವು ಯಾವಗಲೂ ನಗುವುದನ್ನೇ ನೋಡಿದ್ದೇನೆ.. ಕೋಪ ಬಂದಾಗ ಒಂದು ಸಾರಿ ನಿಮ್ಮನ್ನು ನೋಡಬೇಕಲ್ಲ?

ಗಿರೀಶ್.ಎಸ್ said...

ಮೊಟ್ಟ ಮೊದಲಿಗೆ ನನಗೆ ಆಶ್ಚರ್ಯ ಆಗಿದ್ದು ನಿಮಗೆ ಅವನ ಕೆನ್ನೆಗೆ ಹೊಡೆಯುವಷ್ಟು ಕೋಪ ಬಂದಿದ್ದು....ಅದೇಗೆ ಸಾಧ್ಯ ಅಂತ ಇನ್ನೂ ಗಾತಗ್ತಾ ಇಲ್ಲ..ಇದೆ ರೀತಿಯ ಅನುಭವ ನನಗೂ ಕೆಲವೊಮ್ಮೆ ಆಗಿದೆ..ಸೀಟ್ ಬಿಟ್ಟು ಕೊಟ್ಟ ತಪ್ಪಿಗೆ ಬೈಸಿಕೊಂಡಿದ್ದೇನೆ....ಅಂದ ಹಾಗೆ ಇನ್ನು ಮುಂದೆ ನಿಮ್ಮ ಬ್ಲಾಗಿನಲ್ಲಿ ನಿಮ್ಮ ಮುಂಬೈ ನೆನಪಿನ ಡೈರಿ ಬಿಚ್ಚಿಕೊಳ್ಳಬಹುದು ಎಂಬ ಭರವಸೆ ಇದೆ.....

Ramesh Rammy said...

Thumba channagidhe Ashok...

umesh desai said...

khushi aatu neevu torida kaalaji inda
igella raj thackrey prabhaava ide alve

sunaath said...

Ashok,
Your experience is eye-opening. I am thrilled that you had the courage to hit the guilty. It is surprising how parochial emotions cloud the reasoning of people.

ಮನಸು said...

ನನಗೂ ಈ ರೀತಿ ಆಗಿದೆ ಅಶೋಕ್.. ನಾನು ಮೊದಲೇ ಖಂಡಿತವಾದಿ ತರವಾಡ್ತೀನಿ ಜನಕ್ಕೆ ವಿರೋಧಿಯೂ ಕೂಡಾ ಆಗಿದ್ದೇನೆ. ನೀವು ಮಾಡಿದ್ದರಲ್ಲಿ ತಪ್ಪಿಲ್ಲ ಅಲ್ಲಿ ಜನ ಸತ್ಯವನ್ನು ಪರಾಮರ್ಶಿಸಿ ನೋಡಬೇಕಿತ್ತು. ಹೀಗೆ ತಪ್ಪುತಿಳುವಳಿಕೆಯಿಂದ ಬಾಂಬೆಯಲ್ಲಿರುವ ಹೊರ ನಾಡಿನ ಜನರಿಗೆ ಕಷ್ಟವಾಗುತ್ತಿರುವುದು.

Ashok.V.Shetty, Kodlady said...

ಗೆಳತಿ .....

ಮುದ್ದು ಸಹೋದರಿ, ಮೊದಲ ಪ್ರತಿಕ್ರೀಯೆಗೆ ಧನ್ಯವಾದಗಳು.....ಹೌದು ಮಾನವೀಯತೆ ನಮ್ಮಲ್ಲಿ ಕಡಿಮೆ ಆಗುತ್ತಿದೆ....ನಾವು , ನಮ್ಮದು ಎಂಬ ಭಾವನೆ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಅಲ್ಲವೇ ನಾವು ಹಿಂದುಳಿದಿರುವುದು.....ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು.....

Ashok.V.Shetty, Kodlady said...

ಹಾಯ್ ಗಿರೀಶ್,

ಹಹಹ ....ನಾನು ಇನ್ನೊಬ್ಬರ ಮೇಲೆ ಕೈ ಎತ್ತಿದ್ದು ಅದೇ ಮೊದಲ ಬಾರಿ....ನಂಗೂ ಆಶ್ಚರ್ಯ ನಾನು ಅವರಿಗೆ ಕಪಾಳಮೋಕ್ಷ ಮಾಡಿದ್ದು.....ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು.....ಇನ್ನು ಕೆಲವು ಅನುಭವಗಳನ್ನು ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಹಂಚಿ ಕೊಳ್ಳಲಿದ್ದೇನೆ...ಬರುತ್ತಾ ಇರಿ....

Ashok.V.Shetty, Kodlady said...

ಧನ್ಯವಾದಗಳು ರಾಮ್....

Ashok.V.Shetty, Kodlady said...

ದೇಸಾಯಿ ಸರ್...

ರಾಜ್ ಠಾಕ್ರೆ ಅವರು ನಮ್ಮ ಕರ್ನಾಟಕದವರ ಬಗ್ಗೆ ಇನ್ನೂ ಮಾತಾಡಿಲ್ಲ......ಅವರಿಗೆ ಏನಿದ್ರೂ ಉತ್ತರ ಭಾರತದವರ ಮೇಲೆ ಕೋಪ ಕಣ್ರೀ.....ಪ್ರತಿಕ್ರೀಯೆ ಗೆ ಧನ್ಯವಾದಗಳು....ಬರ್ತಾ ಇರಿ...

Ashok.V.Shetty, Kodlady said...

ಸುನಾಥ್ ಸರ್,

ಈಗ ನಮ್ಮಲ್ಲಿ ಅನ್ಯಾಯವಾಗುತಿದ್ದರೂ ಅದನ್ನು ಪ್ರತಿಭಟಿಸದೇ ಹಾಗೆ ನೋಡಿಕೊಂಡು ಸುಮ್ಮನಿರುವವರೇ ಜಾಸ್ತಿ ಇದ್ದಾರೆ ಸರ್....ಹಾಗೆಯೇ ಯಾರಾದರೂ ಪ್ರತಿಭಟಿಸಿದರೂ ಅವರು ಸಹ ತೊಂದರೆಗೆ ಸಿಲುಕಿ ಕೊಳ್ಳುತಿದ್ದಾರೆ....ಈ ಕಾರಣದಿಂದ ಅನ್ಯಾಯವನ್ನು ಪ್ರತಿಭಟಿಸಲು ಯಾರೂ ಮುಂದೆ ಬರುವುದಿಲ್ಲ. .....

ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು ಸರ್...

Ashok.V.Shetty, Kodlady said...

ಸುಗುಣ ಮೇಡಂ....

ಸತ್ಯವನ್ನು ಪರಾಮರ್ಶಿ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ ಈಗ....ಎಲ್ಲರೂ ತಮ್ಮ ಬಗ್ಗೆಯೇ ಯೋಚಿಸುತ್ತಾರೆಯೇ ಹೊರತು ಬೇರೆಯವರ ಬಗ್ಗೆ ಅಲ್ಲ....ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು...

Srikanth Manjunath said...

ನಿಜ..ಚಿಕ್ಕ ಒಂದು ಘಟನೆ..ಮನೆಯವರೆನ್ನಲ್ಲ ಹೊರಗೆ ಕರೆತರುತ್ತದೆ...ಮಾಧ್ಯಮ, ಪತ್ರಿಕೆ..ಇವೆಲ್ಲದರಿಂದ ಗಬ್ಬೆದ್ದು ಹೋಗಿದೆ..ಮನುಜರ ಮನಸು..ಯಾವುದಕ್ಕೆ ಯಾವುದನ್ನೂ ಗಂಟು ಹಾಕಿ..ಹಿಂಸೆ ಮಾಡುತ್ತಾರೆ..ಮಾಡಿಸಿಕೊಳ್ಳುತ್ತಾರೆ..
ಸುಂದರ ಕಥಾನಕ..ಅಷ್ಟೇ ಹೆದರಿಕೆಯೂ ಆಗುತ್ತದೆ..ಅಲ್ಲಿನ ನಂಟು ಎಲ್ಲಿಂದ ಎಲ್ಲಿಯ ತನಕ ಹಬ್ಬಿರುತ್ತದೆ...ಕೊಂಚ ಹುಷಾರಾಗಿರಿ..ಒಳ್ಳೆಯ ಲೇಖನ ಅಶೋಕ್ ಸರ್..

ಗೋಪಾಲ್ ಮಾ ಕುಲಕರ್ಣಿ said...


nimma kalaji kalakalige abhinandanegalu .... omme nanna geleya railinalli biscuit tinnutta idda .. pakkdalli idda chikka hudugige kodalu hodaaga avara amma naveno makkala kallaru anno taraha nodiddaru... nimma lekhana tumba chennagide

Manu. said...

ಲೇಖನ ತುಂಬಾ ಚೆನ್ನಾಗಿದೆ ಅಶೋಕಣ್ಣ... ನೀವು ಸಿಟ್ಟು ಬಂದು ಹೊಡೆದಿದ್ದು ಅಂದರೆ ಆಶ್ಚರ್ಯವಾಗುತ್ತಿದೆ ಬ್ರದರ್..ಸಹಾಯ ಮಾಡಲ್ಲಿಕ್ಕೆ ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಬಿಳುತ್ತಿದ್ದೀರಿ ಅಲ್ವಾ..ಇನ್ನು ಮುಂದೆ ಇಂಥ ವಿಷಯಗಳಿಗೆ ಹೋಗಬೇಡಿ.ಸಹಾಯ ಪಡೆಯಲು ಯೋಗ್ಯರಲ್ಲದವರಿಗೆ ಯಾಕೆ ಸಹಾಯ ಮಾಡಬೇಕು ಬ್ರದರ್...

balasubramanya said...

ನಿಮ್ಮ ಬಗ್ಗೆ ನನಗೆ ಹೆಮ್ಮೆ ಅನ್ನಿಸಿದೆ. ನಿಮ್ಮ ಆ ಸಮಯದ ಸ್ಪೂರ್ತಿಯ ಔದಾರ್ಯದಿಂದ ನೀವು ಹೀರೋ ಆಗಿದ್ದು ನಿಜ. ಆದರೆ ಉಪಕಾರ ಪಡೆದ ಮಹನೀಯ ತನ್ನ ಸಲುವಾಗಿ ಪಾಡುಪಟ್ಟ ನಿಮ್ಮ ಮಾನವೀಯ ಗುಣಗಳನ್ನು ಗುರುತಿಸದೆ ಸಣ್ಣವನಾಗಿ ಬಿಟ್ಟರು. ಬಹಳ ಒಳ್ಳೆಯ ಅನುಭವ. ನಿಮಗೆ ಜೈ ಹೋ

Ashok.V.Shetty, Kodlady said...

ಶ್ರೀಕಾಂತ್ ಸರ್,

ನಿಜ ಸರ್...ಮನುಜನ ಮನಸ್ಸು ಗಬ್ಬೆದ್ದು ಹೋಗಿದೆ.....ವಿವೇಚನೆ ಇಲ್ಲದಂತೆ ವರ್ತಿಸುವುದೇ ಹೆಚ್ಚಾಗಿದೆ.....ಸುಂದರ ಪ್ರತಿಕ್ರೀಯೆ ಮುದ ಕೊಟ್ಟಿತು....

Ashok.V.Shetty, Kodlady said...

ಗೋಪಾಲ್ ಸರ್,

ನಿಮ್ಮ ಅನುಭವವನ್ನು ಹಂಚಿಕೊಂಡು ಪ್ರತಿಕ್ರೀಯೆ ನೀಡಿದ್ದಕ್ಕೆ ಧನ್ಯವಾದಗಳು.....ಬರುತ್ತಾ ಇರಿ...

Ashok.V.Shetty, Kodlady said...

ಹಾಯ್ ರಾಜೇಶ್,

ಸಹಾಯ ಮಾಡುವಾಗ ಅವರು ಯೋಗ್ಯರೋ, ಅಲ್ಲವೋ ಎನ್ನುವುದು ಗೊತ್ತಾಗುವುದಿಲ್ಲ....ಗೊತ್ತಾದರೂ ಕೆಲವೊಮ್ಮೆ ಮಾಡಬೇಕಾಗುತ್ತದೆ...ನನಗೆ ಕೋಪ ಬರುವುದರಲ್ಲಿ ಹೊಸತೇನಿಲ್ಲ .....ನೀವು ನೋಡಿಲ್ಲ ಅಷ್ಟೇ......ಮೆಚ್ಚಿ ಬರೆದಿರುವುದಕ್ಕೆ ಧನ್ಯವಾದಗಳು.....

Ashok.V.Shetty, Kodlady said...

ಬಾಲು ಸರ್,

ನಿಮ್ಮ ಅಭಿಮಾನ ಮೆಚ್ಚುಗೆಯ ಮಾತುಗಳು ಖುಷಿ ಕೊಟ್ಟಿತು.....ಸುಂದರ ಪ್ರತಿಕ್ರೀಯೆಗೆ ಧನ್ಯವಾದಗಳು....ಜೈ ಹೊ...

Badarinath Palavalli said...

ಮನುಷ್ಯ ಮನುಷ್ಯನನ್ನು ಈ ಗಡಿ-ಭಾಷೆ ಹೇಗೆ ಬೇರೆ ಬೇರೆ ಮಾಡಿಡುತ್ತದಲ್ಲ ಸಾರ್.

ಯಾರೋ ರಾಜಕಾರಣಿಗಳ ಸ್ವಾರ್ಥ ಸಾಧನೆಗೆ ನಾವು ವಿಭಜನೆಗೊಂಡ ದೇಹದ ಭಾಗಗಳು ಎಂದೇಕೆ ಇವರಿಗೆ ಅರ್ಥವಾಗುವುದಿಲ್ಲ?

ಮನಸ್ಸು ವಿಹ್ವಲವಾಯಿತು.

Lalitha Poojary said...

ತುಂಬಾ ಚೆನ್ನಾಗಿ ಬರೆದಿದ್ದಿರಾ ನಿಮ್ಮ ಪ್ರಯಾಣದ ಅನುಭವದ ಬಗ್ಗೆ. ನಿಮ್ಮ ಲೇಖೆನ ಓದುತಿದ್ದರೆ ನಿಜವಾಗಲೂ ಯಾರಿಗೂ ಸಹಾಯ ಮಾಡ್ಲಿಕ್ಕೆ ಹೋಗಬಾರ್ದು ಅನಿಸುತ್ತೆ.

shivu.k said...

ಆಶೋಕ್ ಸರ್,
ಪರಿಸ್ಥಿತಿ ಕೆಲವೊಮ್ಮೆ ನಮ್ಮ ಕೈಮೀರುವಂತೆ ಆಗುತ್ತದೆ. ಚಿಕ್ಕ ವಿಚಾರವಾಗಿ ಹೀಗೆ ಗಡಿ ವಿವಾದದವರೆಗೆ ಎಳೆತಂದ ಆ ಹುಡುಗನ ಕ್ಷುಲಕತನಕ್ಕೆ ಮತ್ತು ಅದಕ್ಕೆ ಸಪೋರ್ಟ್ ಮಾಡಿದ ಅವರಿಗೆ ಯಾವಾಗ ಬುದ್ದಿಬರುವುದು ಎನ್ನಿಸುತ್ತದೆ. ಆದ್ರೂ ನೀವು ದೂರದ ಊರಿನಲ್ಲಿರುವುದರಿಂದ ಸ್ವಲ್ಪ ಹುಷಾರಿಗಿರುವುದು ಒಳ್ಳೆಯದು. ನೈಜ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ..

vaishu said...
This comment has been removed by the author.
vaishu said...

Hmmm bro... nice article about ur encounter with the pathetic crowd.And thank god u r safe to share dis experience with us..was jus wondering if ppl from other states do or not face similar situation back here in karnataka.I somewhat feel its almost the same everywhere(might be of slightly lower degree here)as no country state language caste creed religion teaches us the law of dicrimination it all basically orginates like all other evils from the human mind which is in a race to conquer the world rather insecure of its own roots.Irrespective of where we hail from its obligatory for every human to embrace humanity and i appreciate u for standing by it.but it looks like all the risk taken wasn worth considering the elderly persons insincere reaction or lack of gratitude.On the contrary worst could have thrashed upon u for the courtesy showered.I think its time we modify the lessons imbibed from our old schools HELP PEOPLE SHOW KINDNESS with a small tagline...' to those who truely deserve'!

ಸೀತಾರಾಮ. ಕೆ. / SITARAM.K said...

ನಿನ್ನೆ ಮೆಟ್ರೋದಲ್ಲಿ ಇಂತಹ ಘಟನೆ ನಡೆಯಿತು.. ವೃದ್ಧರಿಗೆ ನಿಗದಿಸಲ್ಪತ್ತ ಆಸನದಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದಾ..ವೃದ್ಧರೊಬ್ಬರು ಬಂದು ಅಲ್ಲಿ ಸ್ಥಳ ಕೇಳಿದರೆ ಜಾಗು ಕೊಡದೆ ಸಿಕ್ಕಾಪಟ್ಟೆ ಬಯ್ದುಬಿಟ್ಟ...
ಅವರು ಅನಾಗರಿಕ ಅನಕ್ಷರಿಕ ಎಂದು ಗೊಣಗುತ್ತಾ ಸುಮ್ಮನೆ ನಿಂತರು.. ಅವನು ಓದಿದ್ದ ಮೊತ್ತು ಸುಸುಂಕ್ರುತನ ವೇಷಭೂಷಣ ಹೊಂದಿದ್ದಾ...
ಮಗನನ್ನು ಎತ್ತಿಕೊಂಡು ನಿಂತಿದ್ದ ನಾನು ಹೇಳಿದ...ಇಂತಹ ಜನರು ಎಲ್ಲರಲ್ಲೂ ಇದ್ದಾರೆ ಹೆಚ್ಚು ಸುಸಂಸ್ಕ್ರುತರಲ್ಲೇ ಎಂದು...

Anonymous said...

Hello Anna. Namaskara. Yeradu reethi santhosha aitu. Prathamavagi nimma manasinalli obba vayasada vaikthi ge seat kodalu Mundadaddu. Yeardanedu neevu a yuvaka(raskal) ge kalapala moksha madiddu.
Bejar aggidu andre aa manusha marathiga nadaru aa yuvakanige buddhi helalilla. Good thing is that you did not fold the kannada paper and kept in. That shows wat u are.
Look at bangalore and Karnataka and our people. From Kashmir to Kanyakumari. Assam to gujarat, MH to Bihar all people come here everyday for work and we invite them. If that incident had happened in our karnataka then certainly if the old man would have been kannadiga then he would have slapped two more and said."Listen, he has given me seat to sit. No matter he is a migrant but he has respected me as a old man and as kannadiga. So learn that first." This would have been the outcome if that was happened here. India is not united, because its divided by the way people think.Not just standing up when we hear "Jana Gana Mana" and saying jai hind, inkilab on August 15th. Who said we have the freedom. August 15th is just a day for politicians to rest at home. God know where our country is heading. No surprise if the british comes back!!! Politicians have divided people on RELIGION, LANGUAGE and border of states. It feels very bad to write about our country no matter if its good or bad. But one thing I appreciate you being in "Bombay"[I call it as bombay as I like. I dont want to fear for anyone. Its Bombay for me. Freedom of speech :) ] is that you are swimming with the sharks and that what is the brave move.I appreciate your courage and ur spirit of what is to be done "Right". Great. Good day.I will call u sometime.(learing tulu is on-the-way with ur book ha ha) God bless us all!
Thanks
Srinidhi(Bengaluru)

ಅನಂತ್ ರಾಜ್ said...

ಉತ್ತಮ ಲೇಖನ ಅಶೋಕ್. ನಿಮಗೆ ಅಷ್ಟು ಸಿಟ್ಟು ಬ೦ದಿತ್ತೇ?ಮಾನವೀಯ ಮೌಲ್ಯಗಳು ಅಧೋಪತನಕ್ಕೆ ಒಳಗಾದಾಗ ಸಾತ್ವಿಕ ಭಾವಗಳು ಕೂಡ ಸಿಟ್ಟಿಗೇಳುತ್ತವೆ ಎನ್ನುವುದಕ್ಕೆ ಇದು ಒ೦ದು ಉದಾಹರಣೆ.ಜಾಗೃತಗೊಳಿಸುವ ಇ೦ತಹ ಲೇಖನಗಳು ಮತ್ತಷ್ಟು ಮೂಡಿ ಬರುತ್ತಿರಲಿ. ಅಭಿನ೦ದನೆಗಳು.

ಅನ೦ತ್

KalavathiMadhusudan said...

tumba uttamavaada anubhavada lekhana ashok sir,dhanyavaadagalu.

ಮೌನರಾಗ said...

ಚೆನ್ನಾಗಿದೆ ಅಶೋಕ್ ಸರ್...

nanda hegde said...
This comment has been removed by the author.
nanda hegde said...

ಒಳ್ಳೆಯವರಿಗೆ ಇದು ಕಾಲವಲ್ಲ ಅಶೋಕ್ ಸರ್.ಅನಾದಿ ಕಾಲದಿಂದಲೂ ಈ ಮಾತು ಪ್ರಚಲಿತವಿದ್ದರೂ, ಮರಳಿ ಮರಳಿ ಅದೇ "ಒಳ್ಳೆಯ ಗುಣ " ಪ್ರದರ್ಶಿಸುವ ಒಳ್ಳೆಯತನ ತೋರಿಸುವುದು ನಮ್ಮ ಒಳ್ಳೆಯತನಕ್ಕೆ ಹಿಡಿದ ಕನ್ನಡಿ.

nanda hegde said...
This comment has been removed by the author.
Sowmya K A said...

ಅಶೋಕ್ ಸರ್
ಲೇಖನ ಓದಿ ತುಂಬಾ ಬೇಜಾರಾಯಿತು. ನೀವು ಸೀಟ್ ಬಿಟ್ಟು ಕೊಟ್ಟು ಹೀರೋ ಆಗಿದ್ದರೂ ನೀವು ಕನ್ನಡಿಗರೆಂದು ತಿಳಿದ ಮೇಲೆ ತೋರಿಸಿದ ವರ್ತನೆ ಎಲ್ಲರೂ ನಾಚುವಂತದ್ದು. ಅತಿಥಿ ದೇವೋಭವ ಎನ್ನುತ್ತಾ ಪರದೇಶದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ನಾವು ಪರ ರಾಜ್ಯದವರ ಮೇಲೆ ಈ ರೀತಿ ದ್ವೇಷ ಸಾಧಿಸುವುದು ಸರಿಯಾ ? ಕೆಟ್ಟತನ ಇರುವುದು ಮನುಷ್ಯನಲ್ಲಿ ಹೊರತು ಯಾವುದೇ ಭಾಷೆಯಲ್ಲಿ ಅಲ್ಲ. ಪ್ರತಿ ನಿತ್ಯ ಇಂಥ ಮನಸ್ಥಿತಿ ಹೊಂದಿರುವವರ ಮಧ್ಯೆ ನೀವು ಓಡಾಡಬೇಕಲ್ಲ ಅಂತ ಬೇಸರವಾಗುತ್ತಿದೆ ಅಷ್ಟೇ.. ದೇಶವನ್ನು ಒಡೆಯುವ ಇಂಥಹ ಸ್ವಾರ್ಥ ಬುಧ್ಧಿಯವರಿಗೆ ನನ್ನ ಧಿಕ್ಕಾರವಿದೆ.

ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು... ಯಾವುದೊ ಒಂದು ರೀತಿಯಲ್ಲಿ ನಮ್ಮಲ್ಲಿ ಒಂದು ಅರಿವನ್ನು ಉಂಟು ಮಾಡುವ ಹಾಗಿದೆ ನಿಮ್ಮ
ಬರಹ..

ವಂದನೆಗಳೊಂದಿಗೆ

ಸೌಮ್ಯ ಕೆ ಎ , ಮೈಸೂರು

Sowmya K A said...

ಅಶೋಕ್ ಸರ್
ಲೇಖನ ಓದಿ ತುಂಬಾ ಬೇಜಾರಾಯಿತು. ನೀವು ಸೀಟ್ ಬಿಟ್ಟು ಕೊಟ್ಟು ಹೀರೋ ಆಗಿದ್ದರೂ ನೀವು ಕನ್ನಡಿಗರೆಂದು ತಿಳಿದ ಮೇಲೆ ತೋರಿಸಿದ ವರ್ತನೆ ಎಲ್ಲರೂ ನಾಚುವಂತದ್ದು. ಅತಿಥಿ ದೇವೋಭವ ಎನ್ನುತ್ತಾ ಪರದೇಶದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ನಾವು ಪರ ರಾಜ್ಯದವರ ಮೇಲೆ ಈ ರೀತಿ ದ್ವೇಷ ಸಾಧಿಸುವುದು ಸರಿಯಾ ? ಕೆಟ್ಟತನ ಇರುವುದು ಮನುಷ್ಯನಲ್ಲಿ ಹೊರತು ಯಾವುದೇ ಭಾಷೆಯಲ್ಲಿ ಅಲ್ಲ. ಪ್ರತಿ ನಿತ್ಯ ಇಂಥ ಮನಸ್ಥಿತಿ ಹೊಂದಿರುವವರ ಮಧ್ಯೆ ನೀವು ಓಡಾಡಬೇಕಲ್ಲ ಅಂತ ಬೇಸರವಾಗುತ್ತಿದೆ ಅಷ್ಟೇ.. ದೇಶವನ್ನು ಒಡೆಯುವ ಇಂಥಹ ಸ್ವಾರ್ಥ ಬುಧ್ಧಿಯವರಿಗೆ ನನ್ನ ಧಿಕ್ಕಾರವಿದೆ.

ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು... ಯಾವುದೊ ಒಂದು ರೀತಿಯಲ್ಲಿ ನಮ್ಮಲ್ಲಿ ಒಂದು ಅರಿವನ್ನು ಉಂಟು ಮಾಡುವ ಹಾಗಿದೆ ನಿಮ್ಮ
ಬರಹ..

ವಂದನೆಗಳೊಂದಿಗೆ

ಸೌಮ್ಯ ಕೆ ಎ , ಮೈಸೂರು

Sowmya K A said...

ಅಶೋಕ್ ಸರ್
ಲೇಖನ ಓದಿ ತುಂಬಾ ಬೇಜಾರಾಯಿತು. ನೀವು ಸೀಟ್ ಬಿಟ್ಟು ಕೊಟ್ಟು ಹೀರೋ ಆಗಿದ್ದರೂ ನೀವು ಕನ್ನಡಿಗರೆಂದು ತಿಳಿದ ಮೇಲೆ ತೋರಿಸಿದ ವರ್ತನೆ ಎಲ್ಲರೂ ನಾಚುವಂತದ್ದು. ಅತಿಥಿ ದೇವೋಭವ ಎನ್ನುತ್ತಾ ಪರದೇಶದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ನಾವು ಪರ ರಾಜ್ಯದವರ ಮೇಲೆ ಈ ರೀತಿ ದ್ವೇಷ ಸಾಧಿಸುವುದು ಸರಿಯಾ ? ಕೆಟ್ಟತನ ಇರುವುದು ಮನುಷ್ಯನಲ್ಲಿ ಹೊರತು ಯಾವುದೇ ಭಾಷೆಯಲ್ಲಿ ಅಲ್ಲ. ಪ್ರತಿ ನಿತ್ಯ ಇಂಥ ಮನಸ್ಥಿತಿ ಹೊಂದಿರುವವರ ಮಧ್ಯೆ ನೀವು ಓಡಾಡಬೇಕಲ್ಲ ಅಂತ ಬೇಸರವಾಗುತ್ತಿದೆ ಅಷ್ಟೇ.. ದೇಶವನ್ನು ಒಡೆಯುವ ಇಂಥಹ ಸ್ವಾರ್ಥ ಬುಧ್ಧಿಯವರಿಗೆ ನನ್ನ ಧಿಕ್ಕಾರವಿದೆ.

ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು... ಯಾವುದೊ ಒಂದು ರೀತಿಯಲ್ಲಿ ನಮ್ಮಲ್ಲಿ ಒಂದು ಅರಿವನ್ನು ಉಂಟು ಮಾಡುವ ಹಾಗಿದೆ ನಿಮ್ಮ
ಬರಹ..

ವಂದನೆಗಳೊಂದಿಗೆ

ಸೌಮ್ಯ ಕೆ ಎ , ಮೈಸೂರು

Sowmya K A said...

ಅಶೋಕ್ ಸರ್
ಲೇಖನ ಓದಿ ತುಂಬಾ ಬೇಜಾರಾಯಿತು. ನೀವು ಸೀಟ್ ಬಿಟ್ಟು ಕೊಟ್ಟು ಹೀರೋ ಆಗಿದ್ದರೂ ನೀವು ಕನ್ನಡಿಗರೆಂದು ತಿಳಿದ ಮೇಲೆ ತೋರಿಸಿದ ವರ್ತನೆ ಎಲ್ಲರೂ ನಾಚುವಂತದ್ದು. ಅತಿಥಿ ದೇವೋಭವ ಎನ್ನುತ್ತಾ ಪರದೇಶದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ನಾವು ಪರ ರಾಜ್ಯದವರ ಮೇಲೆ ಈ ರೀತಿ ದ್ವೇಷ ಸಾಧಿಸುವುದು ಸರಿಯಾ ? ಕೆಟ್ಟತನ ಇರುವುದು ಮನುಷ್ಯನಲ್ಲಿ ಹೊರತು ಯಾವುದೇ ಭಾಷೆಯಲ್ಲಿ ಅಲ್ಲ. ಪ್ರತಿ ನಿತ್ಯ ಇಂಥ ಮನಸ್ಥಿತಿ ಹೊಂದಿರುವವರ ಮಧ್ಯೆ ನೀವು ಓಡಾಡಬೇಕಲ್ಲ ಅಂತ ಬೇಸರವಾಗುತ್ತಿದೆ ಅಷ್ಟೇ.. ದೇಶವನ್ನು ಒಡೆಯುವ ಇಂಥಹ ಸ್ವಾರ್ಥ ಬುಧ್ಧಿಯವರಿಗೆ ನನ್ನ ಧಿಕ್ಕಾರವಿದೆ.

ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು... ಯಾವುದೊ ಒಂದು ರೀತಿಯಲ್ಲಿ ನಮ್ಮಲ್ಲಿ ಒಂದು ಅರಿವನ್ನು ಉಂಟು ಮಾಡುವ ಹಾಗಿದೆ ನಿಮ್ಮ
ಬರಹ..

ವಂದನೆಗಳೊಂದಿಗೆ

ಸೌಮ್ಯ ಕೆ ಎ , ಮೈಸೂರು

ಈಶ್ವರ said...

ಒಳ್ಳೆಯ ಲೇಖನ ಸರ್. ನಾವೂ ಯೋಚಿಸುವಂತೆ ಆಯಿತು, ಧನ್ಯವಾದ.

Harshith Hegde said...

ಅಶೋಕಣ್ಣಾ ತುಂಬ ಚೆನ್ನಾಗಿದೆ ಲೇಖನ .... ದಿನ ನಿತ್ಯದ ಜಂಜಾಟದ ಬದುಕಿನಲ್ಲಿ ಎಲ್ಲೋ ಆಗೊಮ್ಮೆ ಈಗೊಮ್ಮೆ ಇಣುಕುವ ಕರುಣೆಯನ್ನು ಸಹ ಸಹಿಸಲಾರದವರೇ ಜಾಸ್ತಿ .."ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು".. ನಾಲ್ಕು ಬಿಗಿದಾಗ ಅರ್ಥ ಮಾಡಿಕೊಳ್ಳಬೇಕಿತ್ತು ...ಅಲ್ಲಿರುವ ಜನರಲ್ಲಿ ಇರುವುದು ರಾಜ್ಯಾಭಿಮಾನ ಅಲ್ಲ ... ಮತ್ಸರ ಅಶ್ಟೆ....ಎಲ್ಲಿಂದಲೊ ಬಂದವರು ಇಲ್ಲಿ ಸಾಧಿಸಿ ತೋರಿಸಿದರು .. ನಮ್ಮಿಂದ ಏನು ಆಗಲಿಲ್ಲವಲ್ಲ ಅನ್ನೊ Inferiority complex

ನಿಶಾ ಗೋಪಿನಾಥ್ said...

ಅಶೋಕ ಸರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಬೇರೆಯವರಿಗೋಸ್ಕರ ಜಗಳ ಮಾಡಿದ್ದಿರಾ, ಆದರೆ ಅವರಿಗೆ ಕೃತ್ಞತೆಗಳಿಲ್ಲ. ರೈಲಿನ ಪ್ರಯಾಣದ ಅನುಭವ ತುಂಬ ಚೆನ್ನಾಗಿದೆ.
ವಂದನೆಗಳೊಂದಿಗೆ
-ನಿಶಾಗೋಪಿನಾಥ್

akshaya kanthabailu said...

ಚಂದ ಬರೆದಿದ್ದಿರ. ಬರವಣಿಗೆ ಸಾಗಲಿ

akshaya kanthabailu said...

ಚಂದ ಬರೆದಿದ್ದಿರ. ಬರವಣಿಗೆ ಸಾಗಲಿ

Unknown said...

ಒಳ್ಳೆಯ ಲೇಖನ