Sunday, May 9, 2010

ಅಮ್ಮ

ಅಮ್ಮನ ಬಗ್ಗೆ ಎಷ್ಟು ಬರೆದರೂ ಕಡಿಮೆ.....ಅಮ್ಮನ ದಿನವಾದ ಇಂದು ಅಮ್ಮನಿಗಾಗಿ ಈ ಕೆಲವು ಸಾಲುಗಳು...ನವಮಾಸ ನಮ್ಮ ಭಾರವನು ಹೊತ್ತು
ಪ್ರಸವ ವೇದನೆ ಸಹಿಸಿ ಜನ್ಮವನು ಇತ್ತು
ಕೊಟ್ಟವಳು ನಮಗೆ ವಾತ್ಸಲ್ಯದ ಮುತ್ತು
ಬೆಳೆಸಿದಳು ಪ್ರೀತಿಯ ತುತ್ತನ್ನು ಇತ್ತು .


ಪದರ ಪದರವಾಗಿ ಮಾತು ಕಲಿಸಿದಳು
ಮೊದಲ ಗುರುವಾಗಿ ಪಾಠ ಕಲಿಸಿದಳು
ತನ್ನ ನೋವನು ಮರೆತು ಎದೆಹಾಲು ಕುಡಿಸಿದಳು
ಬೆಚ್ಚನೆ ಅಪ್ಪುಗೆಯಲಿ ಭಯವ ಮರೆಸಿದಳು


ತಪ್ಪು ಮಾಡಲು ನಾವು ಒಮ್ಮೊಮ್ಮೆ ಹೊಡೆಯುವಳು
ಮತ್ತೆ ಮನನೊಂದು ಮನದಲ್ಲೇ ಅಳುವವಳು
ಮಕ್ಕಳ ಸುಖಕಾಗಿ ಜೀವ ತೇದುವಳು
ತಾ ಗುಟುಕು ಸುಖದಲ್ಲೇ ತೃಪ್ತಿ ಹೊಂದುವಳು


ಕಣ್ಣಿಗೆ ಕಾಣುವ ಏಕೈಕ ದೇವತೆ ಇವಳು
ಹೋದ ಕಡೆಯಲ್ಲೆಲ್ಲಾ ಕೊಡುವಳು ನೆರಳು
ಜೋಗುಳವ ಹಾಡಿ ನಿದ್ದೆ ಬರಿಸುವಳು
ನೋವಿನ ಕಂತೆ ಕಂತೆ ಸಹಿಸುವಳು

ಏನು ಬರೆದರೂ ಕಡಿಮೆ ಅಮ್ಮನ ಬಗೆಗೆ
ಸರಿಸಾಟಿ ಯಾರಿಲ್ಲ ಜಗದಲ್ಲಿ ಇವಳಿಗೆ.
'ಅಮ್ಮ' ನು ದೇವರ ಅಮೂಲ್ಯವಾದ ಕೊಡುಗೆ
ತಿವಿಯದಿರಿ ಮಕ್ಕಳೇ ಹಾಲುಣಿಸಿದ ಎದೆಗೆ......

Happy Mother's Day........

21 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಕೆಲವೊಂದು ಶಬ್ದ ಗಳ ಬಗ್ಗೆ ಹೇಳುವುದೇನೂ ಇರುವುದಿಲ್ಲ .ಆ ಶಬ್ದವೇ ಎಲ್ಲವನ್ನೂ ಹೇಳಿಬಿಡುತ್ತವೆ.ಅಮ್ಮಾ ಎನ್ನುವ ಶಬ್ದವೂ ಹಾಗೇ.ಆ ಶಬ್ದವೇ
ಒಂದು ಕವಿತೆ!ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ.'ಅಮ್ಮ'ನ ಬಗ್ಗೆ ನಮ್ಮ ಹಿರಿಯ ಕವಿಗಳು ಏನು ಹೇಳಿದ್ದಾರೆ ಎಂದು ಹುಡುಕುತ್ತಿದ್ದಾಗ ಕಂಬಾರರ
'ಸರಳ'ಎನ್ನುವ ಕವಿತೆ ಸಿಕ್ಕಿತು.ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ .ಬ್ಲಾಗಿಗೆ ಬನ್ನಿ.ನಮಸ್ಕಾರ.

ashokkodlady said...

ಸರ್,
ತುಂಬಾ ಧನ್ಯವಾದಗಳು......

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್...

ಅಮ್ಮಾ ಎಮ್ಮ ದೈವಕೆ ಬೇರಾರೂ ಸಾಟಿಯೆ..?

ಸರಲ ಶಬ್ಧಗಳಲ್ಲಿ
ಚಂದವಾಗಿ ಅಮ್ಮನನ್ನು ಬಿಡಿಸಿಟ್ಟಿದ್ದೀರಿ...

ಅಭಿನಂದನೆಗಳು...

ashokkodlady said...

Thank u very much....

ಪ್ರವೀಣ್ ಭಟ್ said...

Hi Ashok,

tumba sundaravaada kavana.

ಕೃಷ್ಣಮೂರ್ತಿಯವರು ಹೇಳಿದ ಹಾಗೆ ಆ ಶಬ್ದವೇ ಒಂದು ಕವಿತೆ.. ಒಂದು ಕಥೆ.. ಅದು ಅರ್ಥಾತೀತ.. ಅರ್ಥ ಅನಂತ.. ತುಂಬಾ ಸರಳವಾಗಿ ಆದರೆ ಎಲ್ಲ ವಿಷಯವನ್ನೂ ಅಮ್ಮನ ಬಗ್ಗೆ ನಿಮ್ಮ ಕವನದಲ್ಲಿ ಕತ್ತಿ ಕೊಟ್ಟಿದ್ದೀರಿ.. ತುಂಬಾ ಧನ್ಯವಾದಗಳು..


ಪ್ರವಿ

ashokkodlady said...

Hiii Pravin,

Tumba Tumbaa Dhanyavaadagalu....

ಜಲನಯನ said...

ಅಶೋಕ್ ಅಮ್ಮನ ಮಮತೆ, ವಾತ್ಸಲ್ಯ ಕ್ಕೆ ಮಕ್ಕಳು -ಮದರ್ಸ್ ಡೇ ಮಾಡಿ ಉತ್ತರ ನೀಡುವ ದೌರ್ಭಾಗ್ಯ ಬರುವಂತಾಗಿರುವುದು ನೋಡಿದರೆ ..ತಾಯಿಗೆ ನಮ್ಮ ಆದರ, ಪ್ರೀತಿ, ಎಲ್ಲ ತೋರಿಕೆಯೇ ಎನಿಸುತ್ತಿದೆ ಅಲ್ಲವೇ...ನಿಮ್ಮ ತಾಯಿಗೆ ಅರ್ಪಿಸಿದ ಕವನದ ಸಾಲುಗಳು ಮನ ತಟ್ಟುತ್ತವೆ

poornima said...

thumba arthapoorna kavithe...'ಅಮ್ಮ' ನು ದೇವರ ಅಮೂಲ್ಯವಾದ ಕೊಡುಗೆ...ADANNA YARINDANU REPLACE MADAKKAGALLA...

ashokkodlady said...

@ Jalanayana....

Thank u sir...

ashokkodlady said...

@ Purni....

Sariyagi helideri...Thank u...

Badarinath Palavalli said...

Sir,

Thanks for visiting my blog:
www.badari-poems.blogspot.com

Your writing is good for reading.
ತಿವಿಯದಿರಿ ಮಕ್ಕಳೇ ಹಾಲುಣಿಸಿದ ಎದೆಗೆ...... these lines are powerful.

I will be visiting your blog regularly.

- Badarinath Palavalli

ashokkodlady said...

Thank u sir.....Thanks a lot...

pradeep said...

ಅಶೋಕ್.....

ಬಹಳ ಚನ್ನಾಗಿದೆ.......

ಅಮ್ಮನ ಪ್ರೀತಿ....ನೀವು ವಿವರಿಸಿದ ರೀತಿ,

ashokkodlady said...

Thank u Pradeep

Pradeep Rao said...

ಚೆನ್ನಾಗಿದೆ ಸಾರ್.. ಅಮ್ಮನ ಮಹತ್ವ ತುಂಬ ಚೆನ್ನಾಗಿ ತಿಳಿಸಿದ್ದೀರ

ashokkodlady said...

@ Pradeep...Tumbaa Dhanyavaadagalu...

shanthamurthy said...

ನಿಮ್ಮ ಪ್ರತಿಯೊಂದು ಕವನಗಳು ಚೆನ್ನಾಗಿವೆ, ಈ ಕವನಗಳನ್ನು ಓದುವಾಗ ಪ್ರತಿಯೊಬ್ಬರಿಗೂ ಅವರ ಅವರ ಜೀವನದ ಸಿಹಿ-ಕಹಿ ನೆನಪುಗಳು ಮರುಕಳಿಸುತ್ತವೆ

ashokkodlady said...

@ Shantha....

tumbaa dhanyavaadagalu...

*ಚುಕ್ಕಿ* said...

ನಿಮ್ಮ ಕವಿತೆ ಓದಿದಾಗ ನಾ ಬರೆದ ಕವಿತೆಯ ಸಾಲುಗಳು ನೆನಪಾದವು ಮತ್ತು ಅಮ್ಮ . ಚಂದವಿದೆ ಕವಿತೆ .

***** ಅಮ್ಮ *****

ಅವಳು ಜಗತ್ತಿನ ಅತ್ಯಂತ ಪೂಜ್ಯಪಾತ್ರಳು ,
ಅವಳಿಂದಲೇ ಈ ಜಗತ್ತಿನ ಅಸ್ತಿತ್ವ,
ಅವಳಿಗೆ ನಾವಂದ್ರೆ ಪ್ರಾಣ,
ತನ್ನ ಉಸಿರನ್ನೇ ಪಣವಾಗಿಟ್ಟು,
ಉಸಿರು ಕೊಟ್ಟವಳು ಅವಳು....

ಅವಳು ಒಲವಿನ ಹಿಮಾಲಯ,
ಸಹನೆಯಲಿ ಪೃಥ್ವಿ,
ಮಮತೆಯಲಿ ಆಗಾಧ ಗಗನ....

ನಮ್ಗೆ ನೋವಾದರೆ, ಅವಳು ಅಳುತ್ತಾಳೆ,
ನಮ್ ನಗುವಿನಲಿ, ಅವಳು ಸ್ವರ್ಗ ಕಾಣ್ತಾಳೆ,
ನಮ್ ಇಸ್ಟಾನೆ , ಅವಳ ಇಷ್ಟ,
ಅವಳಿಗಿಂತ ಹೆಚ್ಚು, ನಮ್ಮನ್ನ,
ಯಾರು ಪ್ರೀತ್ಸೋದಿಲ್ಲ,
ನಿಸ್ವಾರ್ಥ ಪ್ರೀತಿ ಅವಳದು.....

ಎರಡು ಅಕ್ಷರದಲ್ಲಿ ಆ ದೇವರು,
ಅವಳನ್ನ ಹಿಡಿದಿಟ್ಟಿದ್ದಾನೆ ,
ಆದರೆ, ಅವಳ ಬಣ್ಣಿಸಲು ಅಕ್ಷರಗಳೇ ಸಾಲದು,

ಅವಳೇ " ಅಮ್ಮ"

" ಅಮ್ಮ" ಐ ಲವ್ ಯು , ಫಾರೆವರ್,

"ಥ್ಯಾಕ್ಸ್" ಕಣಮ್ಮ, ಎಲ್ಲದಕ್ಕೂ,ಎಲ್ಲವಕ್ಕೂ....


ಸದಾ ನೀ ನಗುತಿರು, ಈ ಜಗವಿರುವವರೆಗೂ..
ನನ್ನ ಅಮ್ಮ ನಾಗಿ........

ಮುಂದೊದ್ದು ಜನ್ಮ ,ನಾ ಹುಟ್ಟಿ ಬರುವೆ ,
ನಿನ್ನ ಋಣ ತೀರಿಸಲು..
ನಾ ನಿನ್ನ ಅಮ್ಮಾ ಳಾಗಿ....

" ತಾಯಿ"ಗೆ "ತಾಯಿ" ಯೇ ಸರಿಸಾಟಿ ಅಲ್ಲವೇ ?!


"ಚುಕ್ಕಿ ಹುಣಸೂರು"....
ಬಿಂದುವಿನಿಂದ ಅನಂತದೆಡೆಗೆ.....

Vidya Ramesh said...

ನಿಜಕ್ಕೂ ಓದಿ ಮುಗಿಸಿದಾಗ, ಕಣ್ಣಂಚಲ್ಲಿ ಎರಡು ಹನಿ ನಿರಿತ್ತು. Simply super!!

ಡಾ. ಚಂದ್ರಿಕಾ ಹೆಗಡೆ said...

aluva nungi naguva niiduva ammana bagge hekuvadakke nammalliruva shabdagalee saakaagadenoo!