Friday, May 21, 2010

ನೆನಪಾಗುತಿವೆ ಗೆಳತಿ ಆ ದಿನಗಳು

 


ನೆನಪಾಗುತಿವೆ ಗೆಳತಿ ಆ ದಿನಗಳು
ನಿನ್ನೊಡನೆ ನಾ ಕಳೆದ ಆ ಕ್ಷಣಗಳು
ಜೊತೆಯಲ್ಲಿ ಕಂಡ ಸವಿಗನಸುಗಳು
ನನಸಾಗದೆ ಹೋದ ಬರಿ ನೆನಪುಗಳು

ನನ್ನೆದೆಯ ತುಂಬಾ ಪ್ರೇಮಸುಧೆ ತುಂಬಿಸಿದೆ
ಸುತ್ತ ಮುತ್ತಲು ಮರೆತು ನೀ ನನ್ನ ಚುಂಬಿಸಿದೆ
ನಿನ್ನ ಪ್ರೇಮದಿ ಕೆಡೆದೆ, ಜೇನ ಹೊಳೆಯನೆ ಸುರಿದೆ
ಹೊತ್ತು ವೇಳೆಯ ಮರೆತೆ, ಭವದ ಚಿಂತೆಯ ತೊರೆದೆ


ನಿನ್ನೊಂದಿಗೆ ನಾ ಕಳೆದ ಆ ಮಧುರ ಕ್ಷಣಗಳು
ನನ್ನ ಬದುಕಲಿ ಸದಾ ಹೊಳೆಯುವ ನಕ್ಷತ್ರಗಳು
ನಿನ್ನ ಪ್ರೀತಿಯಲಿ ಮೈ ಮರೆತ ದಿನಗಳು
ನನ್ನ ಬದುಕಿನ ಹುಣ್ಣಿಮೆ ಯ ದಿನಗಳು


ಕದ್ದು ಕದ್ದು ನೋಡುತಿದ್ದ ಆ ನಿನ್ನ ಕಣ್ಣೋಟ
ನಕ್ಕಾಗ ದಂತ ಪಂಕ್ತಿಗಳ ಇಣುಕು ನೋಟ
ಮರೆಯಲಾಗುವುದೇ ಹೃದಯಗಳ ಒಡನಾಟ
ನೀ ನನ್ನ ಮರೆತೇ, ನಾ ಕಲಿತೆ ಪಾಠ .....


ನಿನ್ನ ಗೇಳಿನಲಿ ನನ್ನೇ ನಾ ಮರೆತಿದ್ದೆ
ನನ್ನಲ್ಲಿ ನಿನ್ನ ಬಿಂಬವ ನೋಡಿದ್ದೆ
ಮನದಲ್ಲಿ ಹೊಸ ಆಸೆಗಳ ಚಿಗುರಿಸಿದೆ
ನಿನ್ನದೇ ಕೈಯಾರೆ ಅವುಗಳ ಕಮರಿಸಿದೆ


ನೀ ಪಕ್ಕ ಕುಳಿತು ಆಡಿದ್ದ ಪಿಸುಮಾತು
ಎದೆಯೊಳಗೆ ಹೊಕ್ಕಿ ಉಸಿರಾಗಿ ಕೂತಿದೆ
ನಿನ್ನ ಅಗಲಿಕೆಯ ವಿರಹದ ನೋವು
ಜಂತುವಾಗಿ ಕಡಿದು ರಕ್ತ ಹೀರುತಿದೆ


ನಾ ಹೇಗೆ ಮರೆಯಲಿ ಆ ಕೊನೆಯ ದಿನವ
ನೀ ನಿಲ್ಲಿಸಿ ಹೊರಟಿದ್ದೆ ನನ್ನ ಎದೆ ಬಡಿತವ
ನೀ ಸರಿದು ಹೋದ ಎಷ್ಟೋ ತಾಸಿನವರೆಗೂ
ಶಿಲೆಯಾಗಿ ಕುಳಿತಿದ್ದೆ ದೂಷಿಸುತ ಹಣೆಬರಹವ.....

38 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಕವನ ಚೆನ್ನಾಗಿದೆ.ಕೆಲವೊಮ್ಮೆ ಸವಿ ನೆನಪುಗಳೂ ಜೀವಕ್ಕೆ ಉರುಳಾಗಿ ಕಾಡುವ ರೀತಿ ಚೆನ್ನಾಗಿ ಮೂಡಿಬಂದಿದೆ.ನಿಮ್ಮ ಬ್ಲಾಗಿನ ಪಾಪೂ ತುಂಬಾ ಮುದ್ದಾಗಿದೆ.ಮಗಳಾ?ಕುಶಿ ಆಯ್ತು.

poornima said...

matthomme sigade ero savi gatane galanna nensikondre ade savi nenapu eega kahi aaguthe...a feeling na thumba changage kavanada moolaka express madiddeeri...

ಸೌಮ್ಯ said...

ASHOK kavana chennagide

ashokkodlady said...

Krishnamurti Sir,

Dhanyavaadagalu nimma pratikriyege..Hoon nanna magalu Kushi...

ashokkodlady said...

Purni....

Dhanyavaadagalu Sister, Nimma pratikriye Chennagide....Thank u...

ashokkodlady said...

Sowmya...

Thank u.....

Pradeep Rao said...

ತುಂಬ ಚೆನ್ನಾಗಿದೆ ಅಶೋಕ್... ಓದುಗರನ್ನ ಫ್ಲಾಶ್.ಬಾಕ್.ಗೆ ಕರೆದುಕೊಂಡು ಹೋಗುತ್ತೆ... ನಿಮ್ಮ ಮಗಳು ಕುಶಿ ಬಹಳ cute ಅಗಿದಾಳೆ...

ವಾಣಿಶ್ರೀ ಭಟ್ said...

tumba chennagide..

ellomme beti needi

www.vanishrihs.blogspot.com

ashokkodlady said...

Hiii Pradeep,

Thank u...thanks a lot...

ashokkodlady said...

Vaanishri..

Tumbaa dhanyavadagalu madam..neevu nanna blog ge bheti needi pratikriye kottiddakke....khanditaa nim blog nu visit maadta irteeni....

Dr.NaveenKodlady MD(Ayu), MBA said...

Pratiyobbara jeevanadaloo heegondu anubhava idde irutte.Avaravara anubhavannu meluku hakuva sundara panki nimma kavanadallive. Abhinandhanegalu hagondu hanchikegagi

ashokkodlady said...

Hiii Naveen,

Correct aagi helidri....thanks for ur valuable comments....

!! ಜ್ಞಾನಾರ್ಪಣಾಮಸ್ತು !! said...

ashokkodlady .,

''ನೀ ಸರಿದು ಹೋದ ಎಷ್ಟೋ ತಾಸಿನವರೆಗೂ
ಶಿಲೆಯಾಗಿ ಕುಳಿತಿದ್ದೆ ದೂಷಿಸುತ ಹಣೆಬರಹವ..... '' ಈ ಸಾಲುಗಳು ಸೊಗಸಾಗಿವೆ..
ನೆನಪು ಅದೆಷ್ಟು ಮಧುರ ಅಲ್ಲವೇ..?

ashokkodlady said...

@ !! ಜ್ಞಾನಾರ್ಪಣಾಮಸ್ತು !!

Dhanyavaadagalu...

ದಿನಕರ ಮೊಗೇರ.. said...

perfect VIRAHA KAVANA....... novu tumbida kavana ... tumbaa chennaagide..........

ashokkodlady said...

@ Dinakar sir....

Neevu nanna blog ge bheti kottu kavanada mele pratikriye kottiddakke tumbau hridayada dhanyavaadagalu sir...

ಮನದಾಳದಿಂದ............ said...

nice poem

ಸುಂದರವಾಗಿ ಮೂಡಿಬಂದಿದೆ ಕವನ. ಹಳೆಯ ನೆನಪುಗಳಿಗೆ ಅಕ್ಷರ ರೂಪ ಕೊಟ್ಟು ಒಂದು ಒಳ್ಳೆಯ ಕವನದ ಹುಟ್ಟಿಗೆ ಕಾರಣರಾಗಿದ್ದೀರ!

ashokkodlady said...

Hiii Praveen Sir,

Thank u very much ....

ಸೀತಾರಾಮ. ಕೆ. / SITARAM.K said...

ಕವನ ಮುದ್ದಾಗಿದೆ.
'ಸವಿನೆನಪುಗಳು ಬೇಕು ಸವಿಯಲಿ ಬದುಕು
ಕಹಿನೆನಪು ಸಾಕೊ೦ದು ಮಾತಲಿ ಬದುಕು
ಬೆ೦ಬಿಡಿದ ಆ ನೆನಪು ಮರುಕಳಿಸಿ ನಿನದೆಲ್ಲಾ ಕಾಡುತಿದೆ ಮನವಾ" ಎ೦ಬ
ಅಪರಿಚಿತ ಚಿತ್ರದ ಹಾಡಿನ ಸಾಲುಗಳು ನೆನಪಾದವು.
ಹಾಡಿಗಾಗಿ ಕೊ೦ಡಿ ಕ್ಲಿಕ್ಕಿಸ್ಸಿ:http://www.youtube.com/watch?v=ZnlR5F-gimw

ashokkodlady said...

Sitaaram Sir...

Tumbaa dhanyavaadagalu...

ಪ್ರವೀಣ್ ಭಟ್ said...

Hi Ashok,

Haleya dinagalu nenapadastu kadutte

mareyalagade kollutte..

kavana chennagide.. anubhavavo kalpaneyo :)

pravi

ashokkodlady said...

Hiii...Pravi....

Thanks...onthara anubhavada kalpane aste....

shanthamurthy said...

ನಿಮ್ಮ ಪ್ರತಿಯೊಂದು ಕವನಗಳು ಚೆನ್ನಾಗಿವೆ, ಈ ಕವನಗಳನ್ನು ಓದುವಾಗ ಪ್ರತಿಯೊಬ್ಬರಿಗೂ ಅವರ ಅವರ ಜೀವನದ ಸಿಹಿ-ಕಹಿ ನೆನಪುಗಳು ಮರುಕಳಿಸುತ್ತವೆ

ashokkodlady said...

@ Shnatha....

dhanyavadagalu...hige bartaa iri....

Deepasmitha said...

ಹಳೆ ನೆನಪುಗಳು ಸಿಹಿಕಹಿಯ ಮಿಶ್ರಣ. ಸೊಗಸಾದ ಕವನ

ashokkodlady said...

@ Deepasmitha

ನನ್ನ ಬ್ಲಾಗಿಗೆ ಸ್ವಾಗತ.....ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......ಹೀಗೆ ಬ್ಲಾಗ್ ಗೆ ಬರ್ತಾ ಇರಿ ..

Sushilkumar said...

Its beatyfull kavan...i went in my past days which was my sweet memories.... nice one...keep it up... :)

ashokkodlady said...

@ Sushil...

thanks for visiting my blog...thanks for the valuable comments..thanks a lot...

ಜಲನಯನ said...

ಅಶೋಕ್ ನೀಳ್ಗವನ ಹಿಡಿತ ಕಳಕೊಂಡಿಲ್ಲ...
ಕದ್ದು ಕದ್ದು ನೋಡುತಿದ್ದ ಆ ನಿನ್ನ ಕಣ್ಣೋಟ
ನಕ್ಕಾಗ ದಂತ ಪಂಕ್ತಿಗಳ ಇಣುಕು ನೋಟ
ಮರೆಯಲಾಗುವುದೇ ಹೃದಯಗಳ ಒಡನಾಟ
ನೀ ನನ್ನ ಮರೆತೇ, ನಾ ಕಲಿತೆ ಪಾಠ .....

ನಕ್ಕಾಗ ದಂತಪಂಕ್ತಿಯ ಇಣುಕು ನೋಟ....ಈ ಪ್ರಯೋಗ ಇಷ್ಟವಾಯಿತು...

ashokkodlady said...

ಆಜಾದ್ ಸರ್....

ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..ಹೀಗೆ ನಿಮ್ಮ ಪ್ರೋತ್ಸಾಹ ಸದಾ ಇರಲಿ....

© ಹರೀಶ್ said...

ಆಶೋಕ್ ರವರೆ ನಿಮ್ಮ ಕವನ ಚನ್ನಾಗಿದೆ.
ನನ್ನನ್ನು ಹಿಂದಿನ ನೆನಪುಗಳಿಗೆ ಹೊತ್ತೊಯ್ಯಿತು.
ಬಿಡುವು ಮಾಡಿಕೊಂಡು ನನ್ನ ಬ್ಲಾಗಿಗು ಬೇಟಿ ನೀಡಿ

ಹೊನ್ನ ಹನಿ
http://honnahani.blogspot.com

© ಹರೀಶ್ said...

ಕವನ ಚನ್ನಾಗಿದೆ

© ಹರೀಶ್ said...

sir kavana channagide

ವಸಂತ್ said...

ಕವನ ತುಂಬಾ ಚೆನ್ನಾಗಿದೆ ಧನ್ಯವಾದಗಳು.

ವಸಂತ್

M@he$h said...

nice kavana,,
pratiyondu padadallu estondu sweet meaning ide,, really nice lines..

*********************************
http://bhuminavilu.blogspot.com/
*********************************

ashokkodlady said...

@ Harish...

Dhanyavaadagalu...khandita nimma blog visit maadteeni..

ashokkodlady said...

@ Vasanth....Tumbaa Dhanyavadagalu..heege nimma protsaha muduvariyali..

ashokkodlady said...

@ Mahesh....

Tumbaa dhanyavaadagalu...